ತಿರುವನಂತಪುರ: ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಜನರು ಲಸಿಕೆಯ ಮೊದಲ ಪ್ರಮಾಣವನ್ನು ಸ್ವೀಕರಿಸಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 1,00,69,673 ಮಂದಿ ಜನರು ಮೊದಲ ಡೋಸ್ ತೆಗೆದುಕೊಂಡಿದ್ದಾರೆ. 26,89,731 ಮಂದಿ ಜನರಿಗೆ ಎರಡು ಪ್ರಮಾಣದ ಲಸಿಕೆ ನೀಡಲಾಗಿದೆ. ಮೊದಲ ಮತ್ತು ಎರಡನೆಯ ಡೋಸ್‍ಗಳ ಒಟ್ಟು 1,27,59,404 ಡೋಸ್‍ಗಳನ್ನು ನೀಡಲಾಗಿದೆ. ಎರ್ನಾಕುಳಂ ಜಿಲ್ಲೆ ರಾಜ್ಯದಲ್ಲೇ ಅತೀ ಹೆಚ್ಚು ಲಸಿಕೆ ವಿತರಿಸಿದ್ದು 12,33,315 ಮೊದಲ ಡೋಸ್ ಲಸಿಕೆಗಳನ್ನು ನೀಡಲಾಗಿದೆ. ಮತ್ತು 11,95,303 ಡೋಸ್ ಲಸಿಕೆಗಳನ್ನು ನೀಡಿ ತಿರುವನಂತಪುರ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ತಿರುವನಂತಪುರ, ಎರ್ನಾಕುಳಂ, ತ್ರಿಶೂರ್, ಮಲಪ್ಪುರಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳು ತಲಾ ಒಂದು ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಿವೆ.
ಪುರುಷರಿಗಿಂತ ಮಹಿಳೆಯರು ಹೆಚ್ಚು ಲಸಿಕೆಗಳನ್ನು ಪಡೆದಿದ್ದಾರೆ. 51,99,069 ಮಹಿಳೆಯರು ಮತ್ತು 48,68,860 ಪುರುಷರು ಲಸಿಕೆ ಪಡೆದಿರುವÀರು. 1,16,41,451 ಡೋಸ್ ಕೋವಿಚೀಲ್ಡ್ ಲಸಿಕೆ ಮತ್ತು 11,17,931 ಡೋಸ್ ಕೋವಾಕ್ಸಿನ್ ಲಸಿಕೆ ನೀಡಲಾಗಿದೆ. 18 ರಿಂದ 44 ವರ್ಷದೊಳಗಿನ 22,68,228 ಜನರಿಗೆ, 45 ರಿಂದ 60 ವರ್ಷದೊಳಗಿನ 37,94,936 ಜನರಿಗೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ 39,93,967 ಜನರಿಗೆ ಲಸಿಕೆ ಹಾಕಲಾಗಿದೆ.
ರಾಜ್ಯಕ್ಕೆ ಇದುವರೆಗೆ 1,24,01,800 ಡೋಸ್ ಲಸಿಕೆ ಬಂದಿದೆ. ಆರೋಗ್ಯ ಇಲಾಖೆಯ ಪ್ರಕಾರ, ರಾಜ್ಯದಲ್ಲಿ ಪ್ರತಿದಿನ ಎರಡರಿಂದ ಎರಡೂವರೆ ಲಕ್ಷ ಜನರಿಗೆ ಲಸಿಕೆ ಹಾಕಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಮತ್ತು ಕಡಿಮೆ ಅವಧಿಯಲ್ಲಿ ರಾಜ್ಯವು ಆ ಗುರಿಯನ್ನು ಸಾಧಿಸಲು ಸಾಧ್ಯವಾಗಿದೆ. ಸೋಮವಾರ 2.62 ಲಕ್ಷ ಡೋಸೇಜ್ ಮತ್ತು ಮಂಗಳವಾರ 2.30 ಲಕ್ಷ ಡೋಸ್ ನೀಡಲಾಗಿದೆ.