ತಿರುವನಂತಪುರ: ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಪರ ಪ್ರಸಿತಾ ಅಜಿಕೋಡ್ ಹೊಸ ಆಡಿಯೋ ರೆಕಾಡಿರ್ಂಗ್ ಬಿಡುಗಡೆ ಮಾಡಿದ್ದಾರೆ. ಹೊಸ ಆಡಿಯೊ ರೆಕಾಡಿರ್ಂಗ್‍ನಲ್ಲಿ ಕೆ ಸುರೇಂದ್ರನ್ ಅವರು ಆರ್.ಎಸ್.ಎಸ್.ನ ತಿಳುವಳಿಕೆಯೊಂದಿಗೆ ಹಣವನ್ನು ಸಿ.ಕೆ. ಜಾನು ಅವರಿಗೆ ಹಸ್ತಾಂತರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆಡಿಯೋ ರೆಕಾಡಿರ್ಂಗ್ ಪ್ರಕಾರ ಕೆ ಸುರೇಂದ್ರನ್ ಅವರು ಜಾನು ಅವರ ಪಕ್ಷಕ್ಕೆ 25 ಲಕ್ಷ ರೂ.ನೀಡಿದ್ದಾರೆ ಎಂದಿದೆ.
ವಿವಿಧ ಸುದ್ದಿ ಚಾನೆಲ್‍ಗಳ ಪ್ರಕಾರ, ಆಡಿಯೋ ರೆಕಾಡಿರ್ಂಗ್‍ನ ವಿಷಯವನ್ನು ಆರ್.ಎಸ್.ಎಸ್. ಸಂಘಟನಾ ಕಾರ್ಯದರ್ಶಿ ಎಂ ಗಣೇಶ್ ತಿಳಿದಿದ್ದರು. ಆರಂಭಿಕ ಪಾವತಿಯ ಜೊತೆಗೆ 10 ಲಕ್ಷ ರೂ.ಗಳ ವರ್ಗಾವಣೆಯ ವಿವರಗಳು ಹೊರಬಿದ್ದಿವೆ. ಸುರೇಂದ್ರನ್ ಪ್ರಕಾರ, ಸಿ.ಕೆ. ಜಾನು ಅವರ ರಾಜಕೀಯ ಪಕ್ಷದ ಅನುಕೂಲಕ್ಕಾಗಿ ಹಣವನ್ನು ವರ್ಗಾಯಿಸಲಾಯಿತು. ಕೆ ಸುರೇಂದ್ರನ್ ಮತ್ತು ಬಿಜೆಪಿ ಆರೋಪಗಳನ್ನು ನಿರಾಕರಿಸಿದರೆ ಹೆಚ್ಚಿನ ಮಾಹಿತಿ ಬಿಡುಗಡೆಯಾಗಲಿದೆ ಎಂದು ಪ್ರಸೀತಾ ಅಜಿಕೋಡ್ ಹೇಳಿದ್ದಾರೆ ಎಂಬುದು ಕುತೂಹಲಕರವಾಗಿದೆ.
ಆದರೆ, ಮಾರ್ಚ್ 26 ರಂದು ವಯನಾಡಿನ ಬತ್ತೇರಿಯಲ್ಲಿ ತನ್ನ ಮನೆಯಲ್ಲಿ ತಂಗಿದ್ದಾಗ ಹಣವನ್ನು ಹಸ್ತಾಂತರಿಸಲಾಗಿದೆ ಎಂದು ಸುದ್ದಿ ಮಾಧ್ಯಮವೊಂದಕ್ಕೆ ಭಹಿರಂಗಪಡಿಸಿದರು. ಹಣವನ್ನು ಬಿಜೆಪಿ ಜಿಲ್ಲಾ ಮುಖಂಡರು ತಂದಿದ್ದರು. ಸಿಕೆ ಜಾನು ಹಣವನ್ನು ನೇರವಾಗಿ ಸ್ವೀಕರಿಸಿದರು. ಮಾರ್ಚ್ 25 ರಂದು ಅವರು ಈ ಬಗ್ಗೆ ಸುರೇಂದ್ರನ್ ಅವರೊಂದಿಗೆ ಪೋನ್ ಸಂಭಾಷಣೆ ನಡೆಸಿದ್ದರು. ಬಟ್ಟೆ ಚೀಲಗಳಲ್ಲಿ ಪೂಜಾ ವಸ್ತುಗಳ ಸೋಗಿನಲ್ಲಿ ಹಣವನ್ನು ತಲುಪಿಸಲಾಗಿದೆ ಎಂದು ಪ್ರಸೀತಾ ಸುದ್ದಿ ವಾಹಿನಿಗೆ ತಿಳಿಸಿರುವರು.
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷರು ಮಂಜೇಶ್ವರದ ಬಿ.ಎಸ್.ಪಿ.ಪಕ್ಷದ ಅಭ್ಯರ್ಥಿ ಕೆ.ಸುಂದರಾ ಮತ್ತು ವಯನಾಡಿನ ಸಿ.ಜೆ.ಜಾನು ಅವರಿಗೆ ಮಂಜೇಶ್ವರದಲ್ಲಿ ದೊಡ್ಡ ಮೊತ್ತವನ್ನು ಪಾವತಿಸಿದ್ದರು ಎಂದು ಈ ಹಿಂದೆ ಬಹಿರಂಗವಾಗಿತ್ತು. ಮಂಜೇಶ್ವರದಿಂದ ಹಣ ವರ್ಗಾವಣೆ ಮಾಡಿದ್ದಕ್ಕಾಗಿ ಕೆ ಸುರೇಂದ್ರನ್ ವಿರುದ್ಧ ತನಿಖೆ ನಡೆಯುತ್ತಿದೆ. ಕೊಡಕರ ಪೈಪ್ ಹಣ ಪ್ರಕರಣದ ನಂತರ ಈ ಘಟನೆಗಳು ಬೆಳಕಿಗೆ ಬಂದಿವೆ. ಆದರೆ ಬಿಜೆಪಿ ರಾಜಕೀಯವಾಗಿ ಆರೋಪಗಳನ್ನು ಎದುರಿಸುತ್ತಿರುವುದರಿಂದ ಈಗ ಹೊಸ ಆರೋಪಗಳು ಕೇಳಿಬಂದಿದೆ.