ತಿರುವನಂತಪುರ: ರಾಜ್ಯಕ್ಕೆ 2,65,160 ಡೋಸ್ ಲಸಿಕೆ ಆಗಮಿಸಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ನಿನ್ನೆ ತಿಳಿಸಿದ್ದಾರೆ. 61,150 ಡೋಸ್ ಕೋವಿಶೀಲ್ಡ್ ಲಸಿಕೆ ಎರ್ನಾಕುಳಂ ತಲುಪಿದ್ದು, 42,000 ಡೋಸ್ ಕೋವಿಶೀಲ್ಡ್ ಲಸಿಕೆ ಶುಕ್ರವಾರ ಕೋಝಿಕೋಡ್‍ಗೆ ತಲುಪಿದೆ. ಇದಲ್ಲದೆ, 1,08,510 ಡೋಸ್ ಕೋವಾಕ್ಸಿನ್ ಲಸಿಕೆಗಳು ನಿನ್ನೆ ತಿರುವನಂತಪುರಕ್ಕೆ ಬಂದಿವೆ ಮತ್ತು 53,500 ಡೋಸ್ ಕೋವಿ ಶೀಲ್ಡ್ ಲಸಿಕೆಗಳನ್ನು ರಾತ್ರಿ ವಿತರಿಸಲಾಯಿತು. ಇದರೊಂದಿಗೆ ರಾಜ್ಯದಲ್ಲಿ 1,28,82,290 ಡೋಸ್ ಲಸಿಕೆಗಳನ್ನು ಸ್ವೀಕರಿಸಲಾಗಿದೆ.
ನಿನ್ನೆ ರಾಜ್ಯದಲ್ಲಿ 1,70,976 ಮಂದಿ ಜನರಿಗೆ ಲಸಿಕೆ ನೀಡಲಾಯಿತು. 1234 ವ್ಯಾಕ್ಸಿನೇಷನ್ ಕೇಂದ್ರಗಳು ಇದ್ದವು. ರಾಜ್ಯದಲ್ಲಿ ಈವರೆಗೆ ಒಟ್ಟು 1,34,79,057 ಮಂದಿ ಜನರಿಗೆ ಲಸಿಕೆ ನೀಡಲಾಗಿದ್ದು, ಇದರಲ್ಲಿ 1,05,02,531 ಮಂದಿ ಮೊದಲ ಡೋಸ್ ಮತ್ತು 29,76,526 ಮಂದಿ ದ್ವಿತೀಯ ಡೋಸ್ ಪಡೆದುಕೊಂಡಿರುವರು.