HEALTH TIPS

ರಸ್ತೆ ಬದಿ ಚಿಪ್ಸ್ ಮಾರುತ್ತಿದ್ದಾರೆ 28 ಬಾರಿ ಚಿನ್ನದ ಪದಕ ವಿಜೇತೆ ಪ್ಯಾರಾ ಶೂಟರ್ ದಿಲ್ರಾಜ್ ಕೌರ್

           ನವದೆಹಲಿ28 ಬಾರಿ ಚಿನ್ನದ ಪದಕ ವಿಜೇತೆ ಪ್ಯಾರಾ ಶೂಟರ್ ದಿಲ್ರಾಜ್ ಕೌರ್ ಈಗ ಜೀವನ ನಿರ್ವಹಣೆಗಾಗಿ ರಸ್ತೆ ಬದಿ ಚಿಪ್ಸ್ ಮಾರುತ್ತಿದ್ದಾರೆ.

           ಇದನ್ನು ನಂಬಲು ಕೊಂಚ ಕಷ್ಟವೇ ಆದರೂ ಸತ್ಯ... ಜಾಗತಿಕ ವೇದಿಕೆಗಳಲ್ಲಿ 28 ಬಾರಿ ಚಿನ್ನದ ಪದಕ ಗೆದ್ದು ಭಾರತ ಕೀರ್ತಿ ಪತಾಕೆ ಹಾರಿಸಿದ್ದ ಪ್ಯಾರಾ ಶೂಟರ್‌ ದಿಲ್ರಾಜ್ ಕೌರ್ ಅವರು ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನ ರಸ್ತೆ ಬದಿಯಲ್ಲಿ ಚಿಪ್ಸ್ ಮತ್ತು ಬಿಸ್ಕತ್ ಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.


            ಉತ್ತರಾಖಂಡದ ದಿಲ್ರಾಜ್ ಕೌರ್ ಭಾರತದ ಮೊದಲ ಅಂತಾರಾಷ್ಟ್ರೀಯ ಮಟ್ಟದ ಪ್ಯಾರಾ ಶೂಟರ್ಗಳಲ್ಲಿ ಒಬ್ಬರು. ಅವರು 2004 ರಲ್ಲಿ ಈ ಕ್ಷೇತ್ರಕ್ಕೆ ಪ್ರವೇಶಿಸಿದರು ಮತ್ತು 2015 ರವರೆಗೆ ಯಶಸ್ವಿಯಾಗಿ ಕ್ರೀಡಾ ವೃತ್ತಿ ಜೀವನದಲ್ಲಿ ಸಾಗಿದ್ದರು. ತಮ್ಮ ಈ ವೃತ್ತಿ ಜೀವನದ ಅವಧಿಯಲ್ಲಿ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಎರಡು ಡಜನ್‌ಗಿಂತ (28) ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಆದರೆ ಈ ಪದಕಗಳು ದಿಲ್ರಾಜ್ ಕೌರ್ ಅವರ ಆರ್ಥಿಕ ಸಂಕಷ್ಟ ನೀಗಿಸಲು ನೆರವಾಗಿಲ್ಲ. ಸಾಕಷ್ಟು ಬಾರಿ ಸರ್ಕಾರವನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೂ ಅದೂ ಸಫಲವಾಗಿಲ್ಲ. ಹೀಗಾಗಿ ದಿಲ್ರಾಜ್ ಕೌರ್ ಜೀವನ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ಚಿಪ್ಸ್ ಮತ್ತು ಬಿಸ್ಕತ್ ಗಳನ್ನು ಮಾರಾಟ ಮಾಡುತ್ತಿದ್ದಾರೆ.

            ಈ ಬಗ್ಗೆ ಮಾತನಾಡಿದ ದಿಲ್ರಾಜ್ ಕೌರ್, ನಾನು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. ದೇಶಕ್ಕಾಗಿ ಅನೇಕ ಪದಕಗಳನ್ನೂ ಗೆದ್ದಿದ್ದೇನೆ. ಆದರೆ ನನಗೆ ಅಗತ್ಯವಿರುವಾಗ ಸಹಾಯ ಮಾಡಲು ಯಾರೂ ಮುಂದೆ ಬರುವುದಿಲ್ಲ. ನನಗೆ ಉತ್ತರಾಖಂಡ ಸರ್ಕಾರದಿಂದ ಯಾವುದೇ ಸಹಾಯ ಅಥವಾ ಬೆಂಬಲ ಸಿಗಲಿಲ್ಲ. ನನ್ನ ಯಶಸ್ಸಿನ ಆಧಾರದ ಮೇಲೆ ಸ್ಪೋರ್ಟ್ಸ್ ಕೋಟಾದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ಪ್ರತಿ ಬಾರಿಯೂ ಈ ಅರ್ಜಿಯನ್ನು ತಿರಸ್ಕರಿಸಲಾಗಿದೆ. ನಮ್ಮ ತಂದೆ ತಮ್ಮ ಸುದೀರ್ಘ ಆರೋಗ್ಯ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದರು.

ನನ್ನ ಸಹೋದರ ಕೂಡ ಇತ್ತೀಚೆಗೆ ಸಾವನ್ನಪ್ಪಿದ್ದ. ಇವರಿಬ್ಬರ ಚಿಕಿತ್ಸೆಗಾಗಿ ನಾವು ಸಾಕಷ್ಟು ಹಣ ಖರ್ಚು ಮಾಡಿದ್ದೆವು. ಸಾಕಷ್ಟು ಸಾಲ ಮಾಡಿಕೊಂಡೆವು. ಆದರೂ ಅವರು ಬದುಕಲಿಲ್ಲ. ನಾನು ಪ್ರಸ್ತುತ ನನ್ನ ತಾಯಿಯೊಂದಿಗೆ ಮನೆಯನ್ನು ಬಾಡಿಗೆಗೆ ಪಡೆದಿದ್ದು, ಪ್ರಸ್ತುತ ನಮ್ಮ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ. ನಾನು ರಸ್ತೆಬದಿಯ ಚಿಪ್ಸ್ ಮತ್ತು ಬಿಸ್ಕತ್ತುಗಳನ್ನು ಮಾರಾಟ ಮಾಡಿ ಇದರಿಂದ ಬಂದ ಹಣದಲ್ಲಿ ಬಾಡಿಗೆ ಮತ್ತು ಇತರ ವೆಚ್ಚಗಳನ್ನು ನಿಭಾಯಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

         ದಿಲ್ರಾಜ್ ಕೌರ್ ಅವರು 2004ರಲ್ಲಿ ತಮ್ಮ ಶೂಟಿಂಗ್ ವೃತ್ತಿ ಜೀವನ ಆರಂಭಿಸಿದ್ದರು. ತಮ್ಮ ವೃತ್ತಿ ಜೀವನದಲ್ಲಿ ದಿಲ್ರಾಜ್ ಕೌರ್ ಒಟ್ಟು 28 ಚಿನ್ನದ ಪದಕ, 8 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries