ಭಾರತದಲ್ಲಿ ಕೊರೊನಾವೈರಸ್‌ನ 2ನೇ ಅಲೆಯ ಆರ್ಭಟ ತಗ್ಗಿದೆ, ಹಾಗಂತ ಎಚ್ಚರ ತಪ್ಪಬಾರದು, ಏಕೆಂದರೆ ಕೊರೊನಾವೈರಸ್ ಈ ವಿಶ್ವದಿಂದ ಇನ್ನೂ ಹೋಗಿಲ್ಲ ಕೊರೊನಾವೈರಸ್‌ನ ಹಲವಾರು ರೂಪಾಂತರ ತಳಿಗಳು ಕಂಡು ಬರುತ್ತಿವೆ. ಇದೀಗ ಹೊಸ ರೂಪಾಂತರ ತಳಿ ಲಂಬ್ಡಾ ಪತ್ತೆಯಾಗಿದ್ದು 29 ರಾಷ್ಟ್ರಗಳಲ್ಲಿ ಇದು ಕಂಡು ಬಂದಿದೆ. ಈ ವೈರಸ್ ಹುಟ್ಟಿರುವುದು ದಕ್ಷಿಣ ಅಮೆರಿಕದಲ್ಲಿ ಎಂದು ಹೇಳಲಾಗಿದೆ.
ಲಂಬ್ಡಾ ವೈರಸ್ ಪತ್ತೆ:
ಏಪ್ರಿಲ್ 21, 2021ರಲ್ಲಿ ಪೆರುವಿನಲ್ಲಿ ಶೇ. 81ರಷ್ಟು ಕೊರೊನಾ ಸೋಂಕಿತರಲ್ಲಿ ಲಂಬ್ಡಾ ರೂಪಾಂತರ ತಳಿ ಕಂಡು ಬಂದಿದೆ. ಈ ರೂಪಾಂತರ ವೈರಸ್ ತಳಿ ಅರ್ಜೆಂಟಿನಾ, ಇಕ್ವಾಡೋರ್‌ನಲ್ಲಿ ಕೂಡ ಕಂಡು ಬಂದಿದೆ. ಚಿಲಿ ದೇಶದಲ್ಲಿ ಕಳೆದ 60 ದಿನಗಳಲ್ಲಿ ಶೇ. 32ರಷ್ಟು ಕೊರೊನಾ ಸೋಂಕಿತರಲ್ಲಿ ಈ ತಳಿ ಪತ್ತೆಯಾಗಿದೆ. ಈ ರೂಪಾಂತಾರ ವೈರಸ್ ಈಗಾಗಲೇ 29 ದೇಶಗಳಲ್ಲಿ ಕಂಡು ಬಂದಿದ್ದು ಇತರ ದೇಶಗಳಿಗೂ ಹರಡುವ ಸಾಧ್ಯತೆ ಇದೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವಿಶ್ವ ಸಂಸ್ಥೆ 50ಕ್ಕೂ ಅಧಿಕ ರೂಪಾಂತರ ವೈರಸ್ ಬಗ್ಗೆ ಅಧ್ಯಯನಗಳನ್ನು ನಡೆಸುತ್ತಿದೆ.
ಲಂಬ್ಡಾ ಕೊರೊನಾವೈರಸ್ ಲಕ್ಷಣಗಳು :ಕೊನೆಯದಾಗಿ: ಕೊರೊನಾವೈರಸ್ ರೂಪಾಂತರ ತಳಿಗಳು ಕಂಡು ಬರುತ್ತಲೇ ಇವೆ. ಆದ್ದರಿಂದ ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ. ಮಾಸ್ಕ್ ಧರಿಸಬೇಕು. ಆಗಾಗ ಕೈತೊಳೆಯಬೇಕು ಹಾಗೂ ಹೊರಗಡೆ ಸಾಮಾಜಿಕ ಅಂತರ ಕಾಪಾಡಲು ಮರೆಯದಿರಿ. ಅಲ್ಲದೆ ಬಹುಮುಖ್ಯವಾಗಿ ಪ್ರತಿಯೊಬ್ಬರು ಕೋವಿಡ್ 19 ಲಸಿಕೆ ಪಡೆದುಕೊಳ್ಳಿ.