HEALTH TIPS

ಹಲಸಿನ ಕಾಯಿ ಹಿಟ್ಟಿನಿಂದ ಟೈಪ್‌ 2 ಮಧುಮೇಹ ನಿಯಂತ್ರಣ: ಹೊಸ ಅಧ್ಯಯನ

Top Post Ad

Click to join Samarasasudhi Official Whatsapp Group

Qries

Qries

              ಕೊಚ್ಚಿ: ಹಲಸಿನ ಕಾಯಿ (ಹಣ್ಣಾಗಿರದ, ಬಲಿತ ಹಲಸು) ಹಿಟ್ಟು ಟೈಪ್ 2 ಮಧುಮೇಹ ನಿಯಂತ್ರಿಸಲು ಸಹಾಯ ಮಾಡಲಿದೆ ಎಂದು ಹೊಸ ಅಧ್ಯಯನ ತಿಳಿಸಿದೆ.

         ದೈನಂದಿನ ಊಟದಲ್ಲಿ ಒಂದು ಚಮಚ ಅಕ್ಕಿ ಅಥವಾ ಗೋಧಿ ಹಿಟ್ಟಿನ ಜತೆಗೆ ಹಲಸಿನ ತೊಳೆಯನ್ನು ಬಳಸಿ ಮಾಡಿದ ಹಿಟ್ಟನ್ನು ಬಳಸಿದರೆ ಟೈಪ್ 2 ಡಯಾಬಿಟಿಸ್ ರೋಗಿಗಳಲ್ಲಿ ಪ್ಲಾಸ್ಮಾ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪರಿಣಾಮಕಾರಿಯಾಗಿದೆ ಎಂದು ಈ ಹೊಸ ಅಧ್ಯಯನ ತಿಳಿಸಿದೆ.

             ಈ ಅಧ್ಯಯನ ವರದಿಯು ಪ್ರತಿಷ್ಠಿತ 'ನೇಚರ್' ಜರ್ನಲ್‌ನಲ್ಲಿ ಪ್ರಕಟವಾಗಿದೆ. ಟೈಪ್ 2 ಮಧುಮೇಹ ರೋಗಿಗಳಿಗೆ ಹಲಸಿನ ಕಾಯಿ ಹಿಟ್ಟಿನೊಂದಿಗೆ ತಯಾರಿಸಿದ ಪೂರಕ ಆಹಾರ ನೀಡಿದಾಗ 12ನೇ ವಾರದಲ್ಲಿ ಗ್ಲೈಕೋಸೈಲೇಟೆಡ್ ಹಿಮೋಗ್ಲೋಬಿನ್ (ಎಚ್‌ಬಿಎ1ಸಿ) ಸರಾಸರಿ ಮಟ್ಟವು ಪರಿಣಾಮಕಾರಿ ಮಟ್ಟದಲ್ಲಿ ಕಡಿಮೆಯಾಗಿರುವುದು ಕಂಡುಬಂದಿದೆ ಎಂದು ಈ ಅಧ್ಯಯನ ಹೇಳಿದೆ.

ಎ.ಗೋಪಾಲ್ ರಾವ್, ಕೆ. ಸುನಿಲ್ ನಾಯಕ್, ಎ.ಜಿ. ಉನ್ನಿಕೃಷ್ಣನ್ ಮತ್ತು ಜೇಮ್ಸ್ ಜೋಸೆಫ್ ಅವರು ಈ ಅಧ್ಯಯನ ನಡೆಸಿದ್ದಾರೆ. 

        ಹಲಸಿನ ಹಿಟ್ಟಿನ ಪರಿಣಾಮವನ್ನು ಈ ತಂಡ ಮೌಲ್ಯಮಾಪನ ಮಾಡಿದೆ.

'ಈ ವರ್ಷದ ಜನವರಿಯಲ್ಲಿ ಸ್ಟಾರ್ಟ್ ಅಪ್ ಇಂಡಿಯಾ ಸಮಾವೇಶ ಫ್ರಾರಂಬ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ನನ್ನ ಎರಡು ನಿಮಿಷಗಳ ಸಂವಾದದ ನಂತರ ಈ ಉತ್ಪನ್ನ ಭಾರತದಲ್ಲಿ ಜನಪ್ರಿಯವಾಯಿತು. ಪ್ರಸ್ತುತ ಅಮೆಜಾನ್‌ನಲ್ಲಿ ಹಲಸಿನ ಹಿಟ್ಟು, ಹಿಟ್ಟು ವಿಭಾಗದಲ್ಲಿ ಅತ್ಯುತ್ತಮವಾಗಿ ಮಾರಾಟವಾಗುತ್ತಿದ್ದು, ಗೋಧಿ ಹಿಟ್ಟನ್ನು ಹಿಂದಿಕ್ಕಿದೆ' ಎಂದು ಜೇಮ್ಸ್ ಜೋಸೆಫ್ ತಿಳಿಸಿದ್ದಾರೆ.


Below Post Ad


ಜಾಹಿರಾತು














ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries