ತಿರುವನಂತಪುರ: ವಿಶ್ವ ಪರಿಸರ ದಿನದಂದ ಅಂಗವಾಗಿ ಕೇರಳ ಬಾಲಗೋಕುಲ ಸಮಿತಿ ನೇತೃತ್ವದಲ್ಲಿ 'ಅಂಗಳ ತುಳಸಿ' ಯೋಜನೆಗೆ ನಿನ್ನೆ ಚಾಲನೆ ನೀಡಲಾಯಿತು. ಮಕ್ಕಳು ಮನೆಯಲ್ಲಿ ತುಳಸಿ ಗಿಡಗಳನ್ನು ಮನೆಯಂಗಳದಲ್ಲಿ ನೆಟ್ಟರು. ಮನೆಯಗಳಲ್ಲಿ ಸಾಕಷ್ಟು ತುಳಸಿ ಗಿಡಗಳನ್ನು ನೆಡಿಸಿ, ತುಳಸಿಯ ಔಷಧೀಯ ಮತ್ತು ವಿಶೇಷ ಗುಣಗಳನ್ನು ಗುರುತಿಸಿ ಪ್ರಚಾರ ಮಾಡಲು, ತುಳಸಿ ಶುಭಾಶಯಗಳನ್ನು ದೈನಂದಿನ ಜೀವನದ ಒಂದು ಭಾಗವನ್ನಾಗಿ ಮಾಡಲು ಹಾಗೂ ಕೃಷ್ಣ ಜಯಂತಿಯಂದು ಅಂಗಳ ಪೂರ್ತಿ ತುಳಸಿ ವನಗಳು ಕಂಗೊಳಿಸುವಂತೆ ಮಾಡುವುದು ಯೋಜನೆಯ ಲಕ್ಷ್ಯವಾಗಿದೆ.
2000 ಕೇಂದ್ರಗಳಲ್ಲಿ ಎರಡು ಲಕ್ಷ ಮನೆಗಳಲ್ಲಿ ತುಳಸಿ ವನ ಸ್ಥಾಪಿಸಲಾಗುವುದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎನ್.ಜಜಿಕುಮಾರ್ ತಿಳಿಸಿದ್ದಾರೆ. ಕಾರ್ಯಕ್ರಮದ ರಾಜ್ಯ ಮಟ್ಟದ ಉದ್ಘಾಟನೆಯನ್ನು ಕೊಟ್ಟಾಯಂನಲ್ಲಿ ನಿನ್ನೆ ರಾಜ್ಯ ಉಪಾಧ್ಯಕ್ಷ ಡಾ.ಎನ್.ಉಣ್ಣಿಕೃಷ್ಣನ್ ನಿರ್ವಹಿಸಿದರು. ರಾಜ್ಯ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಕಡಮ್ಮನಿಟ್ಟ ಮತ್ತು ಸಂಘಟನಾ ಕಾರ್ಯದರ್ಶಿ ಎ. ರಂಜುಕುಮಾರ್ ಅವರು ಅಲುವಾದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಕಾಸರಗೋಡು ಹೊರತುಪಡಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಬಾಲಗೋಕುಲ ಸಮಿತಿಗಳಿಂದ ಈ ಯೋಜನೆಗೆ ನಿನ್ನೆ ಅಧಿಕೃತ ಚಾಲನೆ ನೀಡಲಾಗಿದೆ.