ತಿರುವನಂತಪುರ: ಹೊಸ ಶೈಕ್ಷಣಿಕ ವರ್ಷವು ರಾಜ್ಯದಲ್ಲಿ ಇಂದು ಅಧಿಕೃತವಾಗಿ ವರ್ಚುವಲ್ ತರಗತಿಗೆ ಪ್ರಾರಂಭವಾಗಿದೆ. ರಾಜ್ಯಮಟ್ಟದಲ್ಲಿ ಇಂದು ಬೆಳಿಗ್ಗೆ 8.30ಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನ್‍ಲೈನ್‍ನಲ್ಲಿ ಉದ್ಘಾಟಿಸಿದರು. ಹೊಸ ಜಗತ್ತು ಮಕ್ಕಳ ಜಗತ್ತು ಎಂದು ಮುಖ್ಯಮಂತ್ರಿ ಹೇಳಿದರು. ಡಿಜಿಟಲ್ ತರಗತಿಗಳನ್ನು ಆನ್‍ಲೈನ್ ತರಗತಿಗಳನ್ನು ಹಂತ ಹಂತವಾಗಿ ಮಾಡುವ ಮೂಲಕ ಶಿಕ್ಷಣ ವ್ಯವಸ್ಥೆಯ ಹೊಸ ದಿಶೆ ಈ ಮೂಲಕ ತೆರೆದುಕೊಳ್ಳುತ್ತಿದ್ದು, ಗರಿಷ್ಠ ಪ್ರಯೋಜನ ಪಡೆಯಬೇಕೆಂದು ಕರೆನೀಡಿದರು. .
ಸೋಂಕು ವ್ಯಾಪಕತೆಯ ಇಂದಿನ ಕಾಲಘಟ್ಟದಲ್ಲಿ ಎಲ್ಲಾ ಪ್ರದೇಶಗಳಲ್ಲಿ ಬದಲಾವಣೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಹೊಸ ಬಟ್ಟೆ ಮತ್ತು ಪುಸ್ತಕದ ಚೀಲಗಳೊಂದಿಗೆ ಶಾಲೆಗೆ ಹೋದ ದಿನಗಳು ಈಗ ನೆನಪುಗಳಾಗುತ್ತಿವೆ. ಕೋವಿಡ್ ಸೋಂಕು ಜಗತ್ತನ್ನು ಇಂದು ಡಿಜಿಟಲ್ ಜಗತ್ತಿಗೆ ಪರಿವರ್ತಿಸಿದೆ. ಶಾಲೆಯ ಪ್ರವೇಶ ಸಮಾರಂಭವು ಫಸ್ಟ್ ಬೆಲ್ 2.0 ಆವೃತ್ತಿಯೊಂದಿಗೆ ಪ್ರಾರಂಭವಾಗಿದೆ. ವರ್ಚುವಲ್ ಪ್ರವೇಶದ ಮೂಲಕ ಇತಿಹಾಸವನ್ನು ರಚಿಸುವುದು ಮತ್ತು ಹೊಸ ಜಗತ್ತನ್ನು ತಲುಪುವುದು ನಮ್ಮ ಮುಂದಿದೆ ಎಂದರು.
ಎಲ್ಲರಿಗೂ ಆನ್‍ಲೈನ್ ತರಗತಿಗಳನ್ನು ಪ್ರವೇಶಿಸಲು ಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಹೇಳಿದರು. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಮಕ್ಕಳು ಪ್ರವೇಶ ಸಮಾರಂಭವನ್ನು ಮನೆಯಲ್ಲಿ ಆಚರಿಸಿದರು. ಮಮ್ಮುಟ್ಟಿ, ಮೋಹನ್ ಲಾಲ್, ಸಚಿದಾನಂದನ್, ಶ್ರೀಕುಮಾರನ್ ತಂಬಿ ಮತ್ತು ಪಿ.ಟಿ.ಉಶಾ ಆನ್‍ಲೈನ್‍ನಲ್ಲಿ ಶುಭ ಕೋರಿದರು.
ತಿರುವನಂತಪುರ ಕಾಟನ್ ಹಿಲ್ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ಸಚಿವರಾದ ಆಂತೋನಿ ರಾಜು ಮತ್ತು ಜಿ.ಆರ್.ಅನಿಲ್ ಭಾಗವಹಿಸಿದ್ದರು. ಸಮಾರಂಭವು ಕೊರೋನಾ ಮಾನದಂಡಕ್ಕೆ ಅನುಗುಣವಾಗಿ ನಡೆಸಲಾಗಿತ್ತು.