ನವದೆಹಲಿ: ಕೋವಿಡ್ ಮಹಾಮಾರಿಯ ಎರಡನೇ ಅಲೆ ವಿರುದ್ಧ ದೇಶ ಹೋರಾಡುತ್ತಿರುವಾಗಲೇ ಮೂರನೇ ಅಲೆಯ ಭೀತಿಯೂ ಕಾಡುತ್ತಿದೆ. ಭಾರತದಲ್ಲಿ ಮೂರನೇ ಅಲೆಯು ಎರಡನೇ ಅಲೆಯಷ್ಟೇ ತೀವ್ರವಾಗಿರಲಿದ್ದು, 98 ದಿನ ಕಾಡುವ ಸಂಭವವಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ನ (ಎಸ್ಬಿಐ) ವರದಿಯೊಂದು ಎಚ್ಚರಿಸಿದೆ.
ಅಂತಾರಾಷ್ಟ್ರೀಯ ಅನುಭವವನ್ನು ಉಲ್ಲೇಖಿಸಿರುವ ಬ್ಯಾಂಕ್ನ ಇಕೋರ್ಯಾಪ್ ವರದಿ, ಮೂರನೇ ಅಲೆಯ ತೀವ್ರತೆಯು ಎರಡನೇ ಅಲೆಗಿಂತ ಭಿನ್ನವಾಗಿರುವುದಿಲ್ಲ. ಆದರೆ ಉತ್ತಮ ಸಿದ್ಧತೆ ಮಾಡಿಕೊಂಡು ಸಾವಿನ ಪ್ರಮಾಣವನ್ನು ತಗ್ಗಿಸಬಹುದು ಎಂದು ಹೇಳಿದೆ. ಪ್ರಮುಖ ದೇಶಗಳಲ್ಲಿ 3ನೇ ಅಲೆ ಸರಾಸರಿ 98 ದಿನ ಕಾಡುತ್ತದೆ, 2ನೇ ಅಲೆ 108 ದಿನ ಇರುತ್ತದೆ. ತೃತೀಯ ಅಲೆಯು ದ್ವೀತಿಯ ಅಲೆಗಿಂತ 1.8 ಪಟ್ಟು ಇರುತ್ತದೆ ಎಂದು ವರದಿ ಅಂದಾಜು ಮಾಡಿದೆ.
ಕೈಗಾರಿಕೆಗಳಿಗೆ ಆಕ್ಸಿಜನ್ ಪೂರೈಕೆ ಕೈಗಾರಿಕೆಗಳಿಗೆ ಪೂರೈಸಲಿಕ್ಕಾಗಿ ಪ್ರತಿ ದಿನ 2,000 ಟನ್ ಆಮ್ಲಜನಕವನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ಕೆಲವು ರ್ನಿದಿಷ್ಟ ಕೈಗಾರಿಕೆಗಳಿಗೆ ದ್ರವ ಆಮ್ಲಜನಕವನ್ನು ಪೂರೈಸುವಂತೆ ಕೈಗಾರಿಕೆ ಮತ್ತು ಆಂತರಿಕ ವಾಣಿಜ್ಯ ಪ್ರವರ್ತನೆ ಇಲಾಖೆ (ಡಿಪಿಐಐಟಿ) ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿತ್ತು. ಎಂಎಸ್ಎಂಇಗಳು, ತೈಲ ಸಂಸ್ಕರಣಾಗಾರಗಳು, ಉಕ್ಕು, ಆಹಾರ ಸಂಸ್ಕರಣೆ ಟಕಗಳು ಮುಂತಾದ ಕೈಗಾರಿಕೆಗಳಿಗೆ ದ್ರವ ಆಕ್ಸಿಜನ್ ಪೂರೈಸುವಂತೆ ಕೋರಲಾಗಿತ್ತು. ಆದರೆ, ಕೈಗಾರಿಕೆಗಳಿಗೆ ಪೂರೈಸುವಾಗ ಆಸ್ಪತ್ರೆಗಳು ಮತ್ತು ಇತರೆ ವೈದ್ಯಕಿಯ ಉದ್ದೇಶಗಳಿಗೆ ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳುವಂತೆಯೂ ಗೃಹ ಸಚಿವಾಲಯ ಸೂಚಿಸಿದೆ ಎಂದು ಮೂಲಗಳು ಹೇಳಿವೆ.
ಸಾರ್ವತ್ರಿಕ ಲಸಿಕೆ ಅಭಿಯಾನಕ್ಕೆ ಆಗ್ರಹ
ದೇಶದಾದ್ಯಂತ ಉಚಿತವಾಗಿ ಸಾರ್ವತ್ರಿಕ ಕರೊನಾ ಲಸಿಕೆ ಅಭಿಯಾನ ಆರಂಭಿಸುವಂತೆ ಆಗ್ರಹಿಸುವ ಗೊತ್ತುವಳಿಯೊಂದನ್ನು ಕೇರಳ ವಿಧಾನ ಸಭೆ ಬುಧವಾರ ಅಂಗೀಕರಿಸಿದೆ. ಲಸಿಕೆಯನ್ನು ಎಲ್ಲ ರಾಜ್ಯಗಳಿಗೆ ಕೇಂದ್ರವೇ ಉಚಿತವಾಗಿ ಪೂರೈಸಬೇಕೆಂದು ಗೊತ್ತುವಳಿ ಆಗ್ರಹಿಸಿದೆ. ಆರೋಗ್ಯ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ವೀಣಾ ಜಾರ್ಜ್ ಮಂಡಿಸಿದ ಗೊತ್ತುವಳಿ ಕೆಲವು ಚಿಕ್ಕ ಪುಟ್ಟ ಬದಲಾವಣೆಗಳೊಂದಿಗೆ ಅಂಗೀಕಾರವಾಯಿತು. ಕಮ್ಯೂನಿಸ್ಟ್ ನೇತೃತ್ವದ ಎಲ್ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎ ಸದಸ್ಯರು ಪಕ್ಷ ಭೇದ ಮರೆತು ಬೆಂಬಲ ವ್ಯಕ್ತಪಡಿಸಿದರು.
2.2 ಕೋಟಿ ಉದ್ಯೋಗ ನಷ್ಟ
ಕರೊನಾ ಎರಡನೇ ಅಲೆಯ ವೇಳೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 2.27 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸೆಂಟರ್ ಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿಯ (ಸಿಎಂಐಇ) ಮುಖ್ಯಸ್ಥ ಮಹೇಶ್ ವ್ಯಾಸ್ ತಿಳಿಸಿದ್ದಾರೆ. ಭಾರತದಲ್ಲಿ ಒಟ್ಟು ಸುಮಾರು 40 ಕೋಟಿ ಉದ್ಯೋಗಸ್ಥರಿದ್ದಾರೆ. ಆ ಪೈಕಿ 2.27 ಕೋಟಿ ಜನರು ಕೇವಲ ಎರಡು ತಿಂಗಳಲ್ಲಿ ನಿರುದ್ಯೋಗಿಗಳಾಗಿದ್ದಾರೆ ಎಂದು ಹೇಳಿದ್ದಾರೆ. ಕಳೆದ ವರ್ಷ ಕರೊನಾ ಸಾಂಕ್ರಾಮಿಕತೆ ಆರಂಭವಾದಾಗಿನಿಂದ ಸುಮಾರು 97% ಕುಟುಂಬಗಳ ಆದಾಯ ಕುಸಿದಿದೆ. ನಿರುದ್ಯೋಗ ಪ್ರಮಾಣ ಶೇಕಡ 8ಕ್ಕೆ ಬದಲಾಗಿ ಶೇಕಡ 12ಕ್ಕೆ ಜಿಗಿಯುವ ನಿರೀೆಯಿದೆ ಎಂದು ವ್ಯಾಖ್ಯಾನಿಸಿದ್ದಾರೆ.
ಲಸಿಕೆ ಉತ್ಪಾದನೆಗೆ ಕ್ರಮ
ಕರೊನಾವನ್ನು ಹೆಡೆಮುರಿ ಕಟ್ಟಲು ಅಗತ್ಯವಾದ ಲಸಿಕೆ ಉತ್ಪಾದನೆ ಹೆಚ್ಚಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವ ಸರ್ಕಾರ, ಎರಡು ಸರ್ಕಾರಿ ಸ್ವಾಮ್ಯದ ಸಂಸ್ಥೆ (ಪಿಎಸ್ಯು) ಸಹಿತ ಮೂರು ಸಂಸ್ಥೆಗಳಿಗೆ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಗೆ ಅನುಮತಿ ನೀಡಿದೆ. ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸಲು ಅನುಕೂಲವಾಗು ವಂತೆ ಪಿಎಸ್ಯುಗಳಾದ ಇಂಡಿಯನ್ ಇಮ್ಯುನಾಲಾ ಜಿಕಲ್ಸ್ ಲಿಮಿಟೆಡ್ (ಐಐಎಲ್) ಮತ್ತು ಬಿಐಬಿಸಿಒಎಲ್ ಮತ್ತು ಸರ್ಕಾರಿ ಸ್ವಾಮ್ಯದ ಹ್ಾಕಿನ್ ಬಯೋ&ಾರ್ಮಾಸ್ಯುಟಿಕಲ್ಸ್ ಕಾರ್ಪೊರೇಷನ್ಗೆ ಕೇಂದ್ರ ಸರ್ಕಾರ ಲಸಿಕೆ ತಂತ್ರಜ್ಞಾನವನ್ನು ಒದಗಿಸಿದೆ. ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿ ದಂತೆ ಪಿಎಸ್ಯುಗಳು ಭಾರತ್ ಬಯೋಟೆಕ್ನೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ. ಹ್ಾಕಿನ್ ಸಂಸ್ಥೆಗೆ ಪ್ರತಿ ವರ್ಷ 22 ಕೋಟಿ ಡೋಸ್ ಲಸಿಕೆ ಉತ್ಪಾದಿಸುವ ಸಾಮರ್ಥ್ಯವಿದೆ. ಐಐಎಲ್, 2021ರ ಸೆಪ್ಟೆಂಬರ್ನಿಂದ ಕೊವ್ಯಾಕ್ಸಿನ್ ಉತ್ಪಾದನೆ ಆರಂಭಿಸಲಿದೆ. ಹ್ಾಕಿನ್ ಮತ್ತು ಬಿಐಬಿಸಿಒಎಲ್ ನವೆಂಬರ್ನಲ್ಲಿ ಆರಂಭಿಸಲಿವೆ.