ತಿರುವನಂತಪುರ: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ಸರಾಸರಿ ಪರೀಕ್ಷಾ ಸಕಾರಾತ್ಮಕ ದರವನ್ನು ಆಧರಿಸಿ ಲಾಕ್‍ಡೌನ್ ನಿರ್ಬಂಧಗಳು ಇನ್ನು ರಾಜ್ಯದಲ್ಲಿ ಜಾರಿಯಾಗಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರುವುದು. ಟಿಪಿಆರ್ ಮತ್ತು ಪ್ರತಿ ಪ್ರದೇಶದ ನಿಯಂತ್ರಣಗಳ ಆಧಾರದ ಮೇಲೆ ನಾಲ್ಕು ವಲಯಗಳನ್ನು ಹೇಗೆ ವಿಂಗಡಿಸಬೇಕು ಎಂಬ ಬಗ್ಗೆ ಸರ್ಕಾರ ನೀಡಿದ ಮಾರ್ಗನಿರ್ದೇಶನಗಳು ಇಲ್ಲಿವೆ.......
ನಿಯಂತ್ರಣವನ್ನು ನಾಲ್ಕು ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ:
7 ದಿನಗಳ ಸರಾಸರಿ ಪರೀಕ್ಷಾ ಸಕಾರಾತ್ಮಕ ದರವು ಶೇ.8 ವರೆಗೆ ಇದ್ದರೆ, ಅದನ್ನು 'ಕಡಿಮೆ ಹರಡುವಿಕೆ' ಎಂದು ಪರಿಗಣಿಸಲಾಗುತ್ತದೆ. ಶೇಕಡಾ 8 ರಿಂದ 20 ರಷ್ಟು ಮಧ್ಯಮ ಹರಡುವಿಕೆ ಪ್ರದೇಶವೆಂದು ಪರಿಗಣಿಸಲಾಗಿದೆ. ಇದು ಶೇಕಡಾ 20 ಕ್ಕಿಂತ ಹೆಚ್ಚಿದ್ದರೆ, ಅದನ್ನು ವಿಸ್ತರಣಾ ಪ್ರದೇಶವೆಂದು ಪರಿಗಣಿಸಲಾಗುತ್ತದೆ ಮತ್ತು ನಿಬಂಧನೆÀಗಳನ್ನು ವಿಧಿಸಲಾಗುತ್ತದೆ. ಶೇಕಡಾ 30 ಕ್ಕಿಂತ ಹೆಚ್ಚು ನಿರ್ಬಂಧಗಳನ್ನು ಕಠಿಣಗೊಳಿಸಲಾಗುವುದು ಎಂದು ಸಿಎಂ ಹೇಳಿದರು.
ಟಿಪಿಆರ್ 30 ಮೀರಿದರೆ ಟ್ರಿಪಲ್ ಲಾಕ್ ಡೌನ್:
ಪರೀಕ್ಷಾ ಸಕಾರಾತ್ಮಕ ದರ ಶೇಕಡಾ 30 ಕ್ಕಿಂತ ಹೆಚ್ಚಿರುವ ಗ್ರಾ.ಪಂ. ಮಿತಿಯಲ್ಲಿ ಟ್ರಿಪಲ್ ಲಾಕ್ ಡೌನ್ ನ್ನು ಕಾರ್ಯಗತಗೊಳಿಸಲಾಗುತ್ತದೆ. ಟಿಪಿಆರ್ ದರವು 20 ರಿಂದ 30 ರ ನಡುವೆ ಇರುವಲ್ಲಿ ಸಂಪೂರ್ಣ ಲಾಕ್‍ಡೌನ್ ಮತ್ತು ಟಿಪಿಆರ್ ದರ 8 ರಿಂದ 20 ರ ನಡುವೆ ಇರುವ ಭಾಗಶಃ ಲಾಕ್‍ಡೌನ್ ಇರುತ್ತದೆ. ಟಿಪಿಆರ್ ದರ 8 ಕ್ಕಿಂತ ಕಡಿಮೆಯಿದ್ದರೆ, ನಿಯಮಗಳಿಗೆ ಅನುಸಾರವಾಗಿ ಸಾಮಾನ್ಯ ಕಾರ್ಯಾಚರಣೆಗಳನ್ನು ಅನುಮತಿಸಲಾಗುತ್ತದೆ.
ಟಿಪಿಆರ್ 8 ವರೆಗಿನ ನಿಯಂತ್ರಣ ಎಷ್ಟು?:
ಎಲ್ಲಾ ಅಂಗಡಿ-ವ್ಯಾಪಾರ ಕೇಂದ್ರಗಳು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. (ಶೇಕಡಾ 50 ರಷ್ಟು ಉದ್ಯೋಗಿಗಳನ್ನು ಒಳಗೊಂಡಂತೆ.) ಜೂನ್ 17 ರಿಂದ 50 ಪ್ರತಿಶತದಷ್ಟು ಉದ್ಯೋಗಿಗಳನ್ನು ಹೊಂದಿರುವ ಖಾಸಗಿ ಕಂಪನಿಗಳ ಕಾರ್ಯಾಚರಣೆಗೆ ಸಹ ಅವಕಾಶ ನೀಡಲಾಗುವುದು.
ಟಿಪಿಆರ್ 8- 20:
ಪರೀಕ್ಷಾ ಸಕಾರಾತ್ಮಕತೆ ಶೇಕಡಾ 8 ರಿಂದ 20 ರಷ್ಟಿರುವಲ್ಲಿ ಅಗತ್ಯ ಅಂಗಡಿಗಳಿಗೆ ಮಾತ್ರ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ಇತರ ಅಂಗಡಿಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ತೆರೆದಿರುತ್ತವೆ. (ಶೇಕಡಾ 50 ರಷ್ಟು ಉದ್ಯೋಗಿಗಳನ್ನು ಒಳಗೊಂಡಂತೆ.) ಜೂನ್ 17 ರಿಂದ 50 ರಷ್ಟು ಉದ್ಯೋಗಿಗಳಿಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಖಾಸಗಿ ಕಂಪನಿಗಳನ್ನು ನಿರ್ವಹಿಸಲು ಅವಕಾಶವಿರುತ್ತದೆ.
ಟಿಪಿಆರ್ 20 ಕ್ಕಿಂತ ಹೆಚ್ಚಿದ್ದರೆ ಕಟ್ಟುನಿಟ್ಟಿನ ನಿಯಂತ್ರಣ:
ಟೆಸ್ಟ್ ಪಾಸಿಟಿವಿಟಿ ದರ ಶೇಕಡಾ 20 ಕ್ಕಿಂತ ಹೆಚ್ಚಿರುವ ಜನದಟ್ಟಣೆಯ ಪ್ರದೇಶಗಳಲ್ಲಿ, ಅಗತ್ಯ ಅಂಗಡಿಗಳಿಗೆ ಮಾತ್ರ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಅವಕಾಶವಿರುತ್ತದೆ. ಇತರ ಅಂಗಡಿಗಳು ಶುಕ್ರವಾರ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ತೆರೆದಿರುತ್ತವೆ. (50 ಶೇ.ಉದ್ಯೋಗಿಗಳನ್ನು ಒಳಗೊಂಡಿದೆ.)
25 ಕ್ಕೂ ಹೆಚ್ಚು: ಟಿಪಿಆರ್ 30 ಇರುವಲ್ಲಿ:
ರಾಜ್ಯದ 147 ಸ್ಥಳೀಯ ಸಂಸ್ಥೆಗಳು ಮಂಗಳವಾರದ ವರದಿಯ ಅನುಸಾರ ಪರೀಕ್ಷಾ ಸಕಾರಾತ್ಮಕ ದರ 8 ಶೇ..ಕ್ಕಿಂತ ಕಡಿಮೆ ಹೊಂದಿವೆ. 8 ರಿಂದ 20 ರ ನಡುವೆ 716 ಸ್ಥಳೀಯ ಸಂಸ್ಥೆಗಳು ಮತ್ತು 20 ರಿಂದ 30 ರ ನಡುವೆ 146 ಸ್ಥಳೀಯ ಸಂಸ್ಥೆಗಳು ಇವೆ. 30 ಕ್ಕಿಂತ ಹೆಚ್ಚಿನ ಟಿಪಿಆರ್ ರೇಟ್ ರಾಜ್ಯದ 25 ಸ್ಥಳೀಯಾಡಳಿತ ಸ್ಥಳಗಳಲ್ಲಿದೆ ಎಂದು ಸಿಎಂ ನಿನ್ನೆ ಹೇಳಿರುವರು. ಲಾಕ್ ಡೌನ್ ತಗ್ಗಿಸುವಾಗ ಮಾರುಕಟ್ಟೆಗಳಲ್ಲಿ ಸಾಲು-ಸಾಲು ದಟ್ಟಣೆ ನಿಯಂತ್ರಿಸಲು ಜನರು ಮತ್ತು ಅಂಗಡಿಯವರು ವಿಶೇಷ ಕಾಳಜಿ ವಹಿಸಬೇಕು ಎಂದು ಸರ್ಕಾರ ವಿನಂತಿಸಿದೆ.