ನವದೆಹಲಿ: ಹೈದರಾಬಾದ್ ಮೂಲದ ಲಸಿಕೆ ಉತ್ಪಾದಕ ಕಂಪೆನಿ ಬಯೊಲಾಜಿಕಲ್-ಇ ಜೊತೆ 30 ಕೋಟಿ ಕೋವಿಡ್ ಲಸಿಕೆ ಡೋಸ್ ನ್ನು ಕಾಯ್ದಿರಿಸಲು ಒಪ್ಪಂದ ಮಾಡಿಕೊಂಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಇದಕ್ಕಾಗಿ 1500 ಕೋಟಿ ರೂಪಾಯಿ ಅಡ್ವಾನ್ಸ್ ಹಣ ನೀಡಲಿದೆ.
ಈ ಲಸಿಕೆ ಡೋಸ್ ಗಳನ್ನು ಬಯೊಲಾಜಿಕಲ್ -ಇ ಕಂಪೆನಿ ಆಗಸ್ಟ್ ನಿಂದ ಡಿಸೆಂಬರ್ ಒಳಗೆ ತಯಾರಿಸಿ ಸಂಗ್ರಹಿಸಲಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಬಯಾಲಜಿಕಲ್ -ಇ ತಯಾರಿಸುತ್ತಿರುವ ಕೋವಿಡ್-19 ಲಸಿಕೆ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದ್ದು ಈ ಹಿಂದೆ ಮೊದಲ ಮತ್ತು ಎರಡನೇ ಹಂತದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನೀಡಿದೆ. ಬಯಾಲಜಿಕಲ್ -ಇ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಆರ್ ಬಿಡಿ ಪ್ರೊಟೀನ್ ಆಧಾರಿತ ಉಪ ಘಟಕ ಲಸಿಕೆಯಾಗಿದ್ದು ಮುಂದಿನ ಕೆಲವು ತಿಂಗಳುಗಳಲ್ಲಿ ಜನತೆಗೆ ಲಭ್ಯವಾಗಲಿದೆ.
ಕೋವಿಡ್-19 ಗಾಗಿ ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ಸರಿಯಾದ ಪರಿಶ್ರಮದ ನಂತರ ಬಯಾಲಜಿಕಲ್-ಇ ಪ್ರಸ್ತಾಪವನ್ನು ಪರೀಕ್ಷಿಸಿ ಅನುಮೋದನೆಗೆ ಶಿಫಾರಸು ಮಾಡಲಾಗಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
#Imp: @MoHFW_INDIA finalizes deal with #BiologicalE to reserve 30 crore doses of its #CovidVaccine; to pay it Rs 1500 crore for stockpiling betwn Aug- Dec. The vaccine is under phase 3 clinical trial and likely to be available in next few months. @NewIndianXpress
— Sumi Dutta (@SumiSukanya) June 3, 2021