ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ದೀಘ ಕಾಲದಿಂದ ನಿಲುಗಡೆಗೊಂಡಿದ್ದ ಕೆಎಸ್ಸಾಟಿಸಿ ಬಸ್ ಸಂಚಾರ ಗುರುವಾರ ಪುನರಾರಂಭಗೊಂಡಿದ್ದರೂ, ಬಸ್ ಸಂಚಾರಕ್ಕೆ ಬಳಸಲಾದ ಇಂಧನದ ಗಳಿಕೆಯೂ ಸಾಧ್ಯವಾಗದಿರುವುದು ನಿಗಮಕ್ಕೆ ಹೆಚ್ಚಿನ ನಷ್ಟಕ್ಕೆ ಕಾರಣವಾಗಿದೆ.
ಲಾಕ್‍ಡೌನ್ ರಿಯಾಯಿತಿ ಹಿನ್ನೆಲೆಯಲ್ಲಿ ಗುರುವಾರ ಕಾಸರಗೋಡು ಡಿಪೋದಲ್ಲಿ 32ಬಸ್‍ಗಳನ್ನು ಸಂಚಾರಕ್ಕೆ ಸಿದ್ಧಗೊಳಿಸಲಾಗಿದ್ದು, ಒಂದು ದಿನದಲ್ಲಿ ಸಂಗ್ರಹವಾದ ಮೊತ್ತ 1.45ಲಕ್ಷ ರೂ. ಆಗಿದೆ. ಆದರೆ, ಇಂಧನ ತುಂಬಲು ನಿಗಮ ಭರೋಬ್ಬರಿ 1.75ಲಕ್ಷ ರೂ. ಖಚು ಮಾಡಿದೆ. ಒಂದು ದಿನದಲ್ಲಿ ಕಾಸರಗೋಡು ಡಿಪೋ ಒಂದರಲ್ಲಿ 30ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಆದರೆ ಬಸ್ ಸಂಚಾರದ ಬಗ್ಗೆ ಜನರಿಗೆ ಮಾಹಿತಿ ಇಲ್ಲದಿರುವುದರಿಂದ ಈ ನಷ್ಟ ಉಂಟಾಗಿರುವುದಾಗಿ ತಿಳಿಸಲಾಗುತ್ತಿದ್ದರೂ, ಮುಂದಿನ ದಿನಗಳಲ್ಲಿ ಈ ನಷ್ಟ ಉಂಟಾಗದು ಎಂಬ ಭರವಸೆ ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಸಂಪೂಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಶನಿವಾರ ಕೆಎಸ್ಸಾಟಿಸಿ ಬಸ್ ಸಂಚಾರ ನಡೆದಿರಲಿಲ್ಲ. ದ.ಕ ಜಿಲ್ಲೆಯಲ್ಲಿ ಲಾಕಡೌನ್ ಜಾರಿಯಲ್ಲಿರುವುದರಿಂದ ಪುತ್ತೂರು, ಸುಳ್ಯ, ಮಂಗಳೂರು ತೆರಳುವ ಬಸ್‍ಗಳು ಗಡಿ ಪ್ರದೇಶಕ್ಕಷ್ಟೆ ಸಂಚಾರ ನಿಗದಿಪಡಿಸಿದೆ.