ಕಾಸರಗೋಡು: ಅನರ್ಹರು ಪಡಿತರ ಆದ್ಯತೆ ಕಾರ್ಡ್ ಪಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಸಪ್ಲ್ದೈ ಆಫೀಸರ್ ತಿಳಿಸಿದರು. ಅಕ್ರಮವಾಗಿ ಆದ್ಯತೆ ಕಾರ್ಡ್ ಪಡೆದಿದ್ದಲ್ಲಿ ಮರಳಿಸಲು ಜೂ.30 ವರೆಗೆ ಅವಕಾಶವಿದೆ ಎಂದವರು ನುಡಿದರು.
ಅರ್ಹತೆಯಿಲ್ಲದೇ ಇರುವ ಮಂದಿ ಆದ್ಯತೆ/ ಎ.ಎ.ವೈ. ವಿಭಾಗಗಳ ಪಡಿತರ ಕಾರ್ಡು ಪಡೆದಿದ್ದರೆ ಈ ಅವಧಿಯೊಳಗೆ ತಾಲೂಕು ಸಪ್ಲೈ ಕಚೇರಿಗೆ ಸಲ್ಲಿಸಬೇಕು ಎಂದವರು ಮುನ್ಸೂಚನೆ ನೀಡಿದರು. ಜೂ.30ರ ನಂತರ ನಡೆಸುವ ತಪಾಸಣೆಯಲ್ಲಿ ಇಂಥಾ ಅಕ್ರಮ ಪತ್ತೆಯಾದಲ್ಲಿ ಅನರ್ಹತೆಯೊಂದಿಗೆ 2016 ನವೆಂಬರ್ ತಿಂಗಳಿಂದ ಈ ವರೆಗೆ ಪಡೆದ ಪಡಿತರ ಸಾಮಾಗ್ರಿಗಳ ಹೆಚ್ಚುವರಿ ಬೆಲೆಯನ್ನು ದಂಡ ವಸೂಲಿ ಮಾಡಲಾಗುವುದು. ದಂಡ ಪಾವಸತಿಸದೇ ಇದ್ದಲ್ಲಿ ಕಂದಾಯ ವಸೂಲಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಸರಕಾರಿ/ ಅರೆ ಸರಕಾರಿ/ ಸಾರ್ವಜನಿಕ/ ಬ್ಯಾಂಕ್ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರು, ಸೇವಾ ಪಿಂಚಣಿ ಪಡೆಯುತ್ತಿರುವವರು ಮೊದಲಾದವರು ಆದ್ಯತೆ/ ಎ.ಎ.ವೈ. ಕಾರ್ಡ್ ಹೊಂದಿರಕೂಡದು. ಈ ರೀತಿ ಹೊಂದಿದ್ದಲ್ಲಿ ಅವರ ವಿರುದ್ಧ ಇಲಾಖೆ ಮಟ್ಟದ ಕ್ರಮಕೈಗೊಳ್ಳಲು ಸಿಫಾರಸು ಮಾಡಲಾಗುವುದು ಎಂದವರು ತಿಳಿಸಿದರು.
ಯಾರೆಲ್ಲ ಅನರ್ಹರು
ಸರಕಾರಿ/ ಅರೆ ಸರಕಾರಿ/ ಸಾರ್ವಜನಿಕ/ ಬ್ಯಾಂಕಿಂಗ್ ವಲಯಗಳಲ್ಲಿ ನೌಕರಿ ನಡೆಸುತ್ತಿರುವವರು, ಸೇವಾ ಪಿಂಚಣಿ ನಡೆಸುತ್ತಿರುವವರು, ಒಂದು ಸಾವಿರ ಚದರ ಅಡಿ ವಿಸ್ತೀರ್ಣದ ಮನೆಯಿರುವವರು, ನಾಲ್ಕು ಚಕ್ರ ವಾಹನ ಹೊಮದಿರುವವರು, 25 ಸಾವಿರ ರೂ.ಗಿಂತ ಅಧಿಕ ಮಾಸಿಕ ವೇತನ ಪಡೆಯುತ್ತಿರುವವರು, ಆದಾಯ ತೆರಿಗೆ ಪಾವತಿಸುತ್ತಿರುವವರು, ಒಂದು ಎಕ್ರೆಗಿಂತ ಅಧಿಕ ಜಾಗ ಹೊಂದಿರುವವರು ಈ ನಿಟ್ಟಿನಲ್ಲಿ ಅನರ್ಹರಾಗಿದ್ದಾರೆ.
ಅನರ್ಹರಿದ್ದಲ್ಲಿ ಮಾಹಿತಿ ನೀಡಬಹುದು
ಅನರ್ಹರಾಗಿ ಪಡಿತರ ಕಾರ್ಡ್ ಹೊಂದಿರುವ ಮಂದಿಗಳಿರುವುದು ಗಮನಕ್ಕೆ ಬಂದಲ್ಲಿ ಸಾರ್ವಜನಿಕರು ಆಯಾ ತಾಲೂಕು ಸಪ್ಲೈ ಕಚೇರಿಗಳಿಗೆ ಮಾಹಿತಿ ನೀಡಬಹುದು.
ದೂರವಾಣಿ ಸಂಖ್ಯೆಗಳು:
ಕಾಸರಗೋಡು ತಾಲೂಕು ಸಪ್ಲೈ ಕಚೇರಿ-04994-230108.
ಮಂಜೇಶ್ವರ ತಾಲೂಕು ಸಪ್ಲೈ ಕಚೇರಿ -04998-240089.
ಹೊಸದುರ್ಗ ತಾಲೂಕು ಸಪ್ಲೈ ಕಚೇರಿ- 04994-2204044.
ವೆಳ್ಳರಿಕುಂಡ್ ತಾಲೂಕು ಸಪ್ಲೈ ಕಚೇರಿ- 04672242720.