HEALTH TIPS

ಅಂತರರಾಷ್ಟ್ರೀಯ ವಿಮಾನಯಾನ: ಜುಲೈ 31 ರವರೆಗೆ ನಿರ್ಬಂಧ ವಿಸ್ತರಣೆ

          ನವದೆಹಲಿ'ಕೋವಿಡ್‌ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರದ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಜುಲೈ 31 ರವರೆಗೂ ವಿಸ್ತರಿಸಲಾಗಿದೆ' ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ಹೇಳಿದೆ.

         ಈ ನಿಯಮವು ಅನುಮತಿ ಪಡೆದ ಸರಕು ಸಾಗಣೆ ವಿಮಾನಗಳ ಸಂಚಾರಕ್ಕೆ ಅನ್ವಯವಾಗುವುದಿಲ್ಲ.

'ನಿರ್ದಿಷ್ಟ ಪ್ರಕರಣಗಳ ಆಧಾರದಲ್ಲಿ ಆಯ್ದ ಮಾರ್ಗಗಳಲ್ಲಿ ಅಂತರರಾಷ್ಟ್ರೀಯ ವಿಮಾನಯಾನಕ್ಕೆ ಅನುಮತಿ ನೀಡಲಾಗುವುದು' ಎಂದು ಡಿಜಿಸಿಎ ತಿಳಿಸಿದೆ.

          ಕೋವಿಡ್‌ ಪ್ರಕರಣಗಳು ಹೆಚ್ಚಿದಂತೆ 2020ರ ಮಾರ್ಚ್‌ 23ರಿಂದ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಯಾನದ ಮೇಲೆ ನಿರ್ಬಂಧ ಹೇರಲಾಗಿದೆ. 2020ರ ಮೇ ತಿಂಗಳಿನಿಂದ 'ವಂದೇ ಭಾರತ್‌' ಯೋಜನೆಯಡಿ ವಿಶೇಷ ವಿಮಾನಗಳು ಸಂಚರಿಸುತ್ತಿವೆ.

         2020ರ ಜುಲೈನಲ್ಲಿ ಭಾರತವು ಅಮೆರಿಕ, ಬ್ರಿಟನ್‌, ಯುಎಇ, ಕಿನ್ಯಾ, ಭೂತಾನ್‌, ಫ್ರಾನ್ಸ್‌ ಸೇರಿದಂತೆ ಒಟ್ಟು 24 ದೇಶಗಳ ನಡುವೆ ವಿಶೇಷ ವಿಮಾನಗಳ ಸಂಚಾರಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ವೈಮಾನಿಕ ಒಪ್ಪಂದ (ಏರ್ ಬಬಲ್‌ ವ್ಯವಸ್ಥೆಯ ಒಪ್ಪಂದ) ಮಾಡಿಕೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries