ಮುಂಬೈ: ಕೊರೊನಾ ವೈರಸ್‌ನ 'ಡೆಲ್ಟಾ ಪ್ಲಸ್' ತಳಿಯು ಬಹಳ ಮಾರಕವಾಗಿದ್ದು, ಈ ತಳಿಯಿಂದಾಗಿ ಮಹಾರಾಷ್ಟ್ರದಲ್ಲಿ ಕೋವಿಡ್-19ನ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಬುಧವಾರ ಎಚ್ಚರಿಸಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಇಲಾಖೆ ಅಧಿಕಾರಿಗಳು ಈ ಕುರಿತ ವರದಿಯನ್ನು ಪ್ರಸ್ತುತಪಡಿಸಿದರು.
'ಡೆಲ್ಟಾ ಪ್ಲಸ್ ತಳಿಯಿಂದಾಗಿ ಅಂದಾಜು 8 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಳ್ಳಬಹುದು.ಈ ಪೈಕಿ ಶೇ 10ರಷ್ಟು ಮಕ್ಕಳಿಗೆ ಸೋಂಕು ತಗುಲುವ ಅಪಾಯ ಇದೆ' ಎಂದು ಅಧಿಕಾರಿಗಳು ವಿವರಿಸಿದರು.