ಕುಂಬಳೆ: ಪರಿಸರ ಸಂರಕ್ಷಣೆ ದಿನಾಚರಣೆ ಅಂಗವಾಗಿ ಜೂ.5ರಂದು ಪುತ್ತಿಗೆ ಗ್ರಾಮ ಪಂಚಾಯತಿಯ ಸುಮಾರು 10 ಎಕ್ರೆ ಜಾಗದಲ್ಲಿ ವಿಸ್ತೃತವಾಗಿರುವ ಅನೋಡಿ ಪಳ್ಳ ಪ್ರದೇಶದಲ್ಲಿ ಮರವಾಗಿ ಬೆಳೆಯ ಬಲ್ಲ 200 ಸಸಿಗಳನ್ನು ನೆಡಲಾಗುವುದು.
ಪಳ್ಳದ ಸಂರಕ್ಷಣೆ ಮತ್ತು ಅಭಿವೃದ್ಧಿ ಅಂಗವಾಗಿ ಕಾಸರಗೋಡು ಜಿಲ್ಲಾಡಳಿತೆ ನೇತೃತ್ವದಲ್ಲಿ ಹೀಂದೂಸ್ತಾನ್ ಏರ್ ನಾಟಿಕ್ಸ್ (ಎಚ್.ಎ.ಎಲ್.)ನ ಸಮಾಜಿಕ ಬದ್ಧತೆ ನಿಧಿ ಬಳಸಿ ಈ ಚಟುವಟಿಕೆ ಜರುಗಲಿದೆ. ಇದರ ಪೂರ್ವಭಾವಿಯಾಗಿ ಪ್ರದೇಶದಲ್ಲಿ ಸಂರಕ್ಷಣೆ ಬೇಲಿ ನಿರ್ಮಾಣ, ಕಳೆ ತೆರವು ಸಹಿತ ವಿವಿಧ ಚಟುವಟಿಕೆಗಳು ಈಗಾಗಲೇ ಆರಂಭಗೊಂಡಿವೆ. 5.0 ಕೋಟಿಗೂ ಮಿಕ್ಕು ಲೀಟರ್ ನೀರು ಸಂಗ್ರಹವಿರುವ ಈ ಪಳ್ಳದ ಸುತ್ತುಮುತ್ತ ಪ್ರದೇಶವನ್ನು ಶೀಘ್ರದಲ್ಲಿ ಪ್ರವಾಸಿ ತಾಣವಾಗಿಸುವ ಯತ್ನದ ಮೊದಲ ಹೆಜ್ಜೆಯಾಗಿ ಈ ಕಾರ್ಯ ಜರುಗುತ್ತಿದೆ.
ಜೂ.5ರಂದು ಬೆಳಗ್ಗೆ 10.30ಕ್ಕೆ ಸಿ ನೆಡುವಿಕೆಗೆ ಶಾಸಕ ಎ.ಕೆ.ಎಂ.ಅಶ್ರಫ್ ಚಾಲನೆ ನೀಡುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಧಿಕಾರಿ ಡಾ.ಡಿ.ಸಜಿತ್ ಬಾಬು, ಎಚ್.ಎ.ಎಲ್.ನ ಸಹಾಯಕ ಪ್ರಬಂಧಕ ಎಸ್.ಸಜಿ, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ, ಇತರ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ಮೊದಲಾದವರು ಉಪಸ್ಥಿತರಿರುವರು.