HEALTH TIPS

ಶೇ.5ಕ್ಕಿಂತ ಕಡಿಮೆ, ಶೇ.70ರಷ್ಟು ದುರ್ಬಲ ಗುಂಪುಗಳಿಗೆ ಲಸಿಕೆ ನೀಡಿದ್ದರೆ ಮಾತ್ರ ಅನ್‌ಲಾಕ್: ಜಿಲ್ಲೆಗಳಿಗೆ ಕೇಂದ್ರ ಸೂಚನೆ

            ನವದೆಹಲಿಕೊರೋನಾ ಮಹಾಮಾರಿಯನ್ನು ಕಟ್ಟಿಹಾಕಲು ಕೆಲವು ಕಠಿಣ ನಿರ್ಬಂಧನೆಗಳನ್ನು ರಾಜ್ಯ ಸರ್ಕಾರಗಳು ಕೈಗೊಂಡಿದ್ದು ಇದೀಗ ಅನ್‌ಲಾಕ್ ಪ್ರಕ್ರಿಯೆ ಶುರು ಮಾಡುತ್ತಿದ್ದು ಇದಕ್ಕಾಗಿ ಕೇಂದ್ರ ಸರ್ಕಾರ ಎರಡು ನಿರ್ಣಾಯಕ ನಿಯತಾಂಕಗಳನ್ನು ಪಟ್ಟಿ ಮಾಡಿದೆ.

            ಅದರ ಪ್ರಕಾರ ಜಿಲ್ಲೆಗಳಲ್ಲಿ ಕನಿಷ್ಠ ಒಂದು ವಾರದವರೆಗೆ ಶೇಕಡ 5ಕ್ಕಿಂತ ಕಡಿಮೆ ಪಾಸಿಟಿವ್ ಪ್ರಕರಣಗಳು ವರದಿಯಾಗಬೇಕು. ಜೊತೆಗೆ ಕನಿಷ್ಠ ಶೇಕಡ 70ರಷ್ಟು ದುರ್ಬಲ ಗುಂಪುಗಳಿಗೆ ವ್ಯಾಕ್ಸಿನೇಷನ್ ಆಗಿರುವಂತೆ ನೋಡಿಕೊಳ್ಳಿ ಎಂದು ಸೂಚಿಸಿದೆ. ಕೇಂದ್ರ ಸರ್ಕಾರ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಭಾರತ ಸುಮಾರು 344 ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಮಾಣ ಶೇಕಡ 5ಕ್ಕಿಂತ ಕಡಿಮೆ ಇದೆ.

           ಲಾಕ್ ಡೌನ್ ಸರಾಗಗೊಳಿಸುವ ಪ್ರಕ್ರಿಯೆ ಆರಂಭಿಸಿರುವ ರಾಜ್ಯಗಳು ಕೋವಿಡ್ ಸಕಾರಾತ್ಮಕತೆ ದರವು ಒಂದು ವಾರದವರೆಗೆ 5% ಕ್ಕಿಂತ ಕಡಿಮೆ ಇರುವ ಜಿಲ್ಲೆಗಳು ಹಾಗೂ ಸಾಂಕ್ರಾಮಿಕವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. 45 ವರ್ಷದ ದಾಟಿದವರು ಸೇರಿದಂತೆ 60 ವರ್ಷ ಮೀರಿದ ಶೇಕಡ 70ರಷ್ಟು ದುರ್ಬಲ ಗುಂಪುಗಳಿಗೆ ಲಸಿಕೆ ಹಾಕಿಸಿರಬೇಕು ಎಂದು ಐಸಿಎಂಆರ್ ನಿರ್ದೇಶಕರು ತಿಳಿಸಿದ್ದಾರೆ.

           ಕೊರೋನಾ ನಿಯಂತ್ರಣಕ್ಕೆ ತರಬೇಕೆಂದರೆ ಕನಿಷ್ಠ ಎರಡು ವಾರಗಳು ಪಾಸಿಟಿವ್ ದರ ಶೇಕಡ 5ಕ್ಕಿಂತ ಕಡಿಮೆ ಇರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಹೆಚ್‌ಒ) ಶಿಫಾರಸು ಮಾಡಿತ್ತು. ಇದೀಗ ಭಾರತದಲ್ಲಿ ಕೊರೋನಾವೈರಸ್ ಪ್ರಕರಣಗಳು ಕುಸಿಯುತ್ತಿವೆ. ಮಾರಣಾಂತಿಕ ಎರಡನೇ ಅಲೆಯನ್ನು ನಿಯಂತ್ರಿಸಲು ಲಾಕ್ ಡೌನ್ ಘೋಷಿಸಿದ್ದ ಅನೇಕ ರಾಜ್ಯಗಳು ನಿಧಾನವಾಗಿ ಅನ್ ಲಾಕ್ ಪ್ರಕ್ರಿಯೆಗೆ ಮುಂದಾಗುತ್ತಿವೆ. ಆದರೆ ಉತ್ತರಪ್ರದೇಶ, ಬಿಹಾರ, ಛತ್ತೀಸ್ಗಢದಂತಹ ಕೆಲವು ರಾಜ್ಯಗಳು ಕೋವಿಡ್-ಸಂಬಂಧಿತ ನಿರ್ಬಂಧಗಳನ್ನು ವಿಸ್ತರಿಸಿದೆ.

       ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿರುವ ಅಂಕಿಅಂಶಗಳು ಪ್ರಕಾರ ಕಳೆದ ಮೂರು ವಾರಗಳ ನಂತರ ಪರೀಕ್ಷೆಯು ಗಣನೀಯವಾಗಿ ಹೆಚ್ಚಾಗುತ್ತಿದ್ದರೂ ಸಹ ಪಾಸಿಟಿವ್ ದರದಲ್ಲಿ ಸ್ಥಿರವಾದ ಕುಸಿತ ಕಂಡುಬಂದಿದೆ ಎಂದು ತೋರಿಸಿದೆ. ದೇಶದಲ್ಲಿ ಕಳೆದ ಒಂದು ವಾರದಿಂದ ಪಾಸಿಟಿವ್ ದರ ಶೇಕಡ 8.31ಕ್ಕೆ ಬಂದಿದೆ. ಕಳೆದ ತಿಂಗಳ ಆರಂಭದಲ್ಲಿ ಶೇಕಡ 22ರಷ್ಟು ದಾಟಿದ ದೈನಂದಿನ ಪಾಸಿಟಿವ್ ದರವು ತಿಂಗಳ ಕೊನೆಯ ದಿನದಲ್ಲಿ 6.62ರಷ್ಟು ಕುಸಿದಿದೆ.

      ಭಾರತದಲ್ಲಿ ಕಳೆದ 19 ದಿನಗಳಿಂದ ಸೋಂಕು ಇಳಿಮುಖವಾಗುತ್ತಿದ್ದು, ಮಂಗಳವಾರ 1,27,510 ಕೊರೋನಾ ಪ್ರಕರಣಗಳು ವರದಿಯಾಗಿವೆ. ಇದು ಕಳೆದ 51 ದಿನಗಳ ಕನಿಷ್ಠ ಸಂಖ್ಯೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,81,75,044ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 3,31,895ಕ್ಕೆ ತಲುಪಿದೆ.

        ದೇಶದಲ್ಲಿ ದೈನಂದಿನ ಸೋಂಕಿತರ ಚೇತರಿಕೆ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 18,95,520ಕ್ಕೆ ಇಳಿಕೆಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries