ತಿರುವನಂತಪುರ: ರಾಜ್ಯದ ಕರಾವಳಿ ಪ್ರದೇಶಗಳಲ್ಲಿ 5,000 ಕೋಟಿ ರೂ.ಗಳ ರಕ್ಷಣಾ ಯೋಜನೆ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಯೋಜನೆ ಪೂರ್ಣಗೊಳ್ಳಲು ಐದು ವರ್ಷಗಳು ತೆಗೆದುಕೊಳ್ಳುತ್ತದೆ. ಸವಿವರ ಅಧ್ಯಯನದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ವಿಧಾನಸಭೆಯಲ್ಲಿ ಇಂದು ತಿಳಿಸಿದರು.
ಕರಾವಳಿ ತಟಗಳ ರಕ್ಷಣೆಗೆ ಕಿಫ್ಬಿ ಮೂಲಕ ಯೋಜನೆಗಳನ್ನು ರೂಪಿಸಲಾಗುವುದು. ಮೀನುಗಾರರ ಯಾವುದೇ ಸಮಸ್ಯೆಗಳಿಗೂ ಸರ್ಕಾರ ಕಾಳಜಿ ವಹಿಸುತ್ತದೆ. ಕನಿಷ್ಠ 10 ಸ್ಥಳಗಳಲ್ಲಿ ಪ್ರವಾಹ ಅಪಾಯದ ತೀವ್ರ ಮಟ್ಟವನ್ನು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಟೆಟ್ರಾಪಾಡ್ ಗಳನ್ನು ಅಳವಡಿಸಲು ಪ್ರಯತ್ನಿಸುತ್ತಿದೆ ಎಂದು ಸರ್ಕಾರ ಹೇಳಿದೆ.
ಪಿಸಿ ವಿಷ್ಣುನಾಥ್ ಅವರು ಮಂಡಿಸಿದ ನಿರ್ಣಯಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿ ಈ ಮಾಹಿತಿ ನೀಡಿರುವರು. ಸದನದಲ್ಲಿ ಎದ್ದಿರುವ ಈ ಬಗೆಗಿನ ಚರ್ಚೆ ಗಂಭೀರವಾದುದು ಎಂದು ಮುಖ್ಯಮಂತ್ರಿ ಉತ್ತರಿಸಿದರು. ಶಂಗುಮುಖಂ ರಸ್ತೆ ನಿರ್ಮಾಣದಲ್ಲಿ ಸರ್ಕಾರದ ಕಡೆಯಿಂದ ಯಾವುದೇ ಕ್ರಮಗಳಿಲ್ಲ ಎಂಬ ವಿಷ್ಣುನಾಥ್ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ತಿರಸ್ಕರಿಸಿದರು.
ಸರ್ಕಾರ ಶಂಕುಮುಖಂ ನ್ನು ನಿರ್ಲಕ್ಷಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಉತ್ತರಿಸಿದರು. ಏತನ್ಮಧ್ಯೆ, ಚೆಲ್ಲಾನಂನಿಂದ ಫೆÇೀರ್ಟ್ ಕೊಚ್ಚಿಯವರೆಗಿನ ಕರಾವಳಿ ಪ್ರದೇಶಗಳ ಬಗ್ಗೆ ಕಾಳಜಿ ಇದೆ ಎಂದು ಸಚಿವ ಕೆ ಕೃಷ್ಣಂಕುಟ್ಟಿ ಹೇಳಿದರು. ಇತ್ತೀಚೆಗೆ ನಡೆದ ಯಾಸ್ ಚಂಡಮಾರುತ ಕೇರಳ ಕರಾವಳಿಯಲ್ಲಿ ಹಾನಿಯನ್ನುಂಟುಮಾಡಿದೆ ಮತ್ತು ಕರಾವಳಿಯನ್ನು ರಕ್ಷಿಸುವ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು. ಮಳೆ ಕಡಿಮೆಯಾದರೆ ಕರಾವಳಿ ರಕ್ಷಣಾ ಕ್ರಮಗಳನ್ನು ಚುರುಕುಗೊಳಿಸಲಾಗುವುದು ಎಂದು ಮೀನುಗಾರಿಕೆ ಸಚಿವ ಸಾಜಿ ಚೆರಿಯನ್ ಸದನಕ್ಕೆ ತಿಳಿಸಿದರು.