ತಿರುವನಂತಪುರ: ಕೋವಿಡ್ ಲಾಕ್‍ಡೌನ್ ನಿಯಂತ್ರಣಗಳು ಒಂದು ಹಂಣತದ ವರೆಗೆ ಹಿಂತೆಗೆದ ಬಳಿಕ, ಮದ್ಯದಂಗಡಿಗಳು ತೆರೆಯುವುದರೊಂದಿಗೆ ಕೋಟಿಗಟ್ಟಲೆ ಮದ್ಯ ಮಾರಾಟ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 51 ಕೋಟಿ ರೂ.ಗಳ ಮೌಲ್ಯದ ಮದ್ಯವನ್ನು ಬಿವರೇಜ್ ನಿಗಮ ಮಾರಾಟ ಮಾಡಿದೆ. ಪಾಲಕ್ಕಾಡ್ ಜಿಲ್ಲೆಯ ತೆನ್ಕುರಿಸಿಯು ರಾಜ್ಯದಲ್ಲಿ ಅತಿ ಹೆಚ್ಚು ಮದ್ಯ ಮಾರಾಟವನ್ನು ಮಾಡಿದ ಮದ್ಯದಂಗಡಿ ಎಂಬ ದಾಖಲೆ ನಿರ್ಮಿಸಿದೆ.
ರಾಜ್ಯಾದ್ಯಂತ 225 ಮದ್ಯ ಮಳಿಗೆಗಳನ್ನು ಗುರುವಾರ ತೆರೆಯಲಾಗಿದೆ. ಮೊನ್ನೆ 8 ಕೋಟಿ ಮೌಲ್ಯದ ಮದ್ಯ ಗ್ರಾಹಕ ಮಳಿಗೆಗಳಲ್ಲಿ ಮಾರಾಟ ಮಾಡಲಾಗಿದೆ. ಬಾರ್‍ಗಳಲ್ಲಿನ ಮಾರಾಟದ ಕುರಿತು ಹೆಚ್ಚಿನ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ. ಬಾರ್‍ಗಳಲ್ಲಿನ ಮಾರಾಟಕ್ಕೆ ಸಂಬಂಧಿಸಿದ ಅಂಕಿ ಅಂಶಗಳು ಹೊರಬಂದಾಗ, ಕೋಟಿ ರೂಪಾಯಿಗಳು ಲಭ್ಯವಾಗುವ ನಿರೀಕ್ಷೆ ಇದೆ.
68 ಲಕ್ಷ ರೂ.ಮೌಲ್ಯದ ಮದ್ಯವನ್ನು ತೆನ್ಕುರಿಯಲ್ಲಿ ಗುರುವಾರ ಮಾರಾಟ ಮಾಡಲಾಗಿದೆ. ತಿರುವನಂತಪುರ ಪವರ್ ಹೌಸ್ ರಸ್ತೆ ಔಟ್‍ಲೆಟ್‍ನಲ್ಲಿ 65 ಲಕ್ಷ ರೂ. ಮದ್ಯ ದೆ. ಇರಿಂಞಲಕುಡದಲ್ಲಿ 64 ಲಕ್ಷ ರೂ.ಗಳ ಮದ್ಯ ಮಾರಾಟ ಮಾಡಲಾಗಿದೆ. ಕೋವಿಡ್ ಪ್ರಕರಣಗಳ ಹೆಚ್ಚಳದೊಂದಿಗೆ ರಾಜ್ಯದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಕೋವಿಡ್ ಪೆÇ್ರೀಟೋಕಾಲ್ ಅನುಸರಿಸಿ ಬಾರ್‍ಗಳು ಗುರುವಾರ ಮತ್ತೆ ತೆರೆಯಲ್ಪಟ್ಟವು. ಅನೇಕ ಸ್ಥಳಗಳಲ್ಲಿ ದೊಡ್ಡ ಜನಸಂದಣಿ ಕಂಡುಬಂದಿದೆ.
ಇದೇ ವೇಳೆ, ರಾಜ್ಯದಲ್ಲಿ ಲಾಕ್ಡೌನ್ ರಿಯಾಯಿತಿಗಳು ಜಾರಿಗೆ ಬರುವುದರೊಂದಿಗೆ ಬೀದಿಗಳಲ್ಲಿ ದಟ್ಟಣೆ ಹೆಚ್ಚಾಗಿದೆ. ಕೋವಿಡ್ ಪೆÇ್ರೀಟೋಕಾಲ್ಗೆ ಅನುಸಾರವಾಗಿ ಕಾರ್ಯನಿರ್ವಹಿಸಲು ಪರವಾನಗಿ ಪಡೆದ ಸಂಸ್ಥೆಗಳನ್ನು ತೆರೆಯಲಾಗಿದೆ. ನಿನ್ನೆಯಿಂದ ರಾಜ್ಯದ ಹಲವೆಡೆ ಖಾಸಗಿ ಬಸ್‍ಗಳು ಸಂಚಾರ ಆರಂಭಿಸಿದೆ. ರಾಜ್ಯದಲ್ಲಿ ತೀವ್ರ ಸೋಂಕಿತ ಪ್ರದೇಶಗಳನ್ನು ಹೊರತುಪಡಿಸಿ ಇತರೆಡೆ ಕೆಎಸ್‍ಆರ್‍ಟಿಸಿ ಸೇವೆಯನ್ನು ಪ್ರಾರಂಭಿಸಿದೆ.