ಹೈದರಬಾದ್: ಬ್ಯಾಂಕ್ ರಾಷ್ಟ್ರೀಕರಣದ 52ನೇ ವಾರ್ಷಿಕೋತ್ಸವ ಅಂಗವಾಗಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ(ಎಐಬಿಇಎ) ಜುಲೈ 1ರಿಂದ 31ರವರೆಗೆ ಜೂಮ್ ಆಪ್ ಮೂಲಕ ಒಂದು ತಿಂಗಳ ಕಾಲ ರಾಷ್ಟ್ರೀಯ ವೆಬಿನಾರ್ ಗಳನ್ನು ಆಯೋಜಿಸಲು ನಿರ್ಧರಿಸಿದೆ.
ಜನರ ಹಣ, ಜನರ ಕಲ್ಯಾಣಕ್ಕಾಗಿ ಎಂಬುದಕ್ಕೆ ಒತ್ತು ನೀಡಿ ವೆಬಿನಾರ್ ಗಳನ್ನು ಆಯೋಜಿಸಲಾಗುತ್ತಿದೆ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ವೆಂಕಟಾಚಲಮ್ ಭಾನುವಾರ ತಿಳಿಸಿದ್ದಾರೆ.
ಎಐಬಿಇಎ ಅಧ್ಯಕ್ಷ ರಾಜನ್ ನಗರ್, ಮಾನವ ಹಕ್ಕುಗಳ ಕಾರ್ಯಕರ್ತ ಇಂದಿರಾ ಜೈಸಿಂಗ್, ನ್ಯಾಯಮೂರ್ತಿ(ನಿವೃತ್ತ) ಪಿ ಸಾಯಿನಾಥ್, ಸುಪ್ರೀಂಕೋರ್ಟ್ ವಕೀಲ ಪ್ರೊ ಬಾಬು ಮ್ಯಾಥ್ಯು, ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪ್ರೊ ನವಲ್ ಕಿಶೋರ್ ಚೌಧರಿ, ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಜೈರಾಮ್ ರಮೇಶ್, ತೃಣಮೂಲ ಕಾಂಗ್ರೆಸ್ ಸಂಸದ ಸೌಗತ ರಾಯ್, ಸಿಪಿಐ ಪ್ರಧಾನ ಕಾರ್ಯದರ್ಶಿ ಡಾ ರಾಜ್, ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಪ್ರಮುಖರು ರಾಷ್ಟ್ರೀಯ ವೆಬಿನಾರ್ ಉದ್ದೇಶಿಸಿ ಮಾತನಾಡಲಿದ್ದಾರೆ.