ಕೊಚ್ಚಿ: ರಾಜ್ಯದಲ್ಲಿ ಈವರೆಗೆ 79 ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಶಿಲೀಂಧ್ರದಿಂದಾಗಿ 15 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಿಎಂ ಹೇಳಿದರು.
"ಕಪ್ಪು ಶಿಲೀಂಧ್ರ ಅಥವಾ ಮ್ಯೂಕೋಸಲ್ ಮೈಕೋಸಿಸ್ನ 3 ಹೊಸ ಪ್ರಕರಣಗಳು ಇಂದು ಕಂಡುಬಂದಿದೆ. ಇಲ್ಲಿಯವರೆಗೆ 79 ಪ್ರಕರಣಗಳು ವರದಿಯಾಗಿವೆ, ಅದರಲ್ಲಿ 55 ಮಂದಿ ಇನ್ನೂ ಚಿಕಿತ್ಸೆಯಲ್ಲಿದ್ದಾರೆ. 9 ಮಂದಿ ಗುಣಮುಖರಾಗಿದ್ದಾರೆ. ಮತ್ತು 15 ಮಂದಿ ಸಾವನ್ನಪ್ಪಿದ್ದಾರೆ."
ಸಾರ್ವಜನಿಕರೊಂದಿಗಿನ ಸಂಪರ್ಕ ಕಡಿಯಲು ಮತ್ತು ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ಟೆಲಿವಿಷನ್ ಧಾರಾವಾಹಿ ಚಿತ್ರೀಕರಣಕ್ಕೆ ಸದಸ್ಯರ ಸಂಖ್ಯೆಯ ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳೊಂದಿಗೆ ಚಿತ್ರೀಕರಿಸಲು ಅವಕಾಶ ನೀಡುವುದರ ಬಗ್ಗೆಯೂ ಪರಿಗಣಿಸಲಾಗಿದೆ. ಒಳಾಂಗಣ ಶೂಟಿಂಗ್‍ಗೆ ಅನುಮತಿಸಲಾಗುತ್ತದೆ.
ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ರಾಜ್ಯದಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ತೆರೆಯಲು ಅವಕಾಶ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಎರಡು ಡೋಸ್ ಲಸಿಕೆ ತೆಗೆದುಕೊಂಡವರಿಗೆ ಪ್ರವಾಸ ತೆರಳುವ ಕ್ರಮಗಳು ಪರಿಗಣೆನೆಯಲ್ಲಿದೆ ಎಂದು ಸಿಎಂ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.