ಕಾಸರಗೋಡು: ಕೋವಿಡ್ ಪಾಸಿಟಿವ್ ರೋಗಿಗಳ ಚಿಕಿತ್ಸೆಗಾಗಿ ಆಯುಷ್ 64 ಔಷಧ ವಿತರಣೆ ಆರಂಭಗೊಂಡಿದೆ.
ಎಲ್ಲ ಆಯುರ್ವೇದ ಸಂಸ್ಥೆಗಳಿಗೆ ಈ ಗುಳಿಗೆ ತಲಪಿಸಲಾಗುತ್ತಿದೆ. ಕೋವಿಡ್ ಪ್ರತಿರೋಧ, ಚಿಕಿತ್ಸೆ, ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳಿಗೆ ಅಗತ್ಯದ ಔಷಧಗಳನ್ನು ಎಲ್ಲ ಸರಕಾರಿ ಆಯುರ್ವೇದ ಸಂಸ್ಥೆಗಳಲ್ಲಿ ನೀಡಲಾಗುತ್ತಿದೆ.
ಕಾಸರಗೋಡು ಆಯುರ್ವೇದ ಆಸ್ಪತ್ರೆಯಲ್ಲಿ ಸ್ವಾಸ್ಥ್ಯಂ ಯೋಜನೆಯಲ್ಲಿ ಅಳವಡಿಸಿ ಈ ವರೆಗೆ ಒಟ್ಟು 14 ಸಾವಿರ ಮಂದಿಗೆ ಪ್ರತಿರೋಧ ಔಷಧಗಳನ್ನು ನೀಡಲಾಗಿದೆ. ಪುನರ್ಜನಿ ಯೋಜನೆಯಲ್ಲಿ ಅಳವಡಿಸಿ 150ಕ್ಕೂ ಅಧಿಕ ಮಂದಿಗೆ ಕೋವಿಡ್ ಅನಂತರದ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆ ಔಷಧ ವಿತರಿಸಲಾಗಿದೆ. ಕೋವಿಡ್ ಪರಿಣಾಮ ಉಸಿರಾಟದ ತೊಂದರೆ, ಕ್ಷೀನ ಸಹಿತ ಅಸ್ವಸ್ಥತೆಗಳಿಗೂ ಔಷಧ ನೀಡಲಾಗುತ್ತಿದೆ. ಬಹುತೇಕ ಸಂದರ್ಭಗಳಲ್ಲಿ ಲಕ್ಷಣಗಳು ತೋರದೆ ತಗುಲಿದ ಕೋವಿಡ್ ರೋಗಿಗಳಾದ 14 ಮಂದಿಗೆ ಚಿಕಿತ್ಸೆ ನೀಡಲಾಗಿದೆ.
ಕೋವಿಡ್ ಸಂಬಂಧ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ನಿಡುವ ಜೀವಾಮೃತಂ ಟೆಲಿ ಮೆಡಿಸಿನ್ ಯೋಜನೆ ಜಾರಿಯಲ್ಲಿದೆ.