ನವದೆಹಲಿ: ಮೇ ತಿಂಗಳ ಜಿಎಸ್ ಟಿ ಸಂಗ್ರಹದಲ್ಲಿ ಶೇ.65 ರಷ್ಟು ಏರಿಕೆಯಾಗಿದ್ದು, 1.02 ಲಕ್ಷ ಕೋಟಿಯಷ್ಟು ಸಂಗ್ರಹವಾಗಿದೆ ಸತತ 8 ತಿಂಗಳಲ್ಲಿ ಸಂಗ್ರಹ ಏರಿಕೆಯಾಗಿದ್ದು, 1.02 ಲಕ್ಷ ಕೋಟಿಗೆ ಏರಿಕೆಯಾಗಿದೆ.
2020 ರ ಮೇ ತಿಂಗಳಲ್ಲಿ ಸಂಗ್ರಹವಾಗಿದ್ದ 62,009 ಕೋಟಿ ರೂಪಾಯಿಗಳ ಜಿಎಸ್ ಟಿ ಸಂಗ್ರಹದ ಮೊತ್ತಕ್ಕಿಂತಲೂ ಶೇ.65 ರಷ್ಟು ಹೆಚ್ಚಾಗಿದೆ. ರಾಷ್ಟ್ರ ವ್ಯಾಪಿ ಲಾಕ್ ಡೌನ್ ಇದ್ದ ಕಾರಣದಿಂದಾಗಿ ಕಳೆದ ವರ್ಷ ಜಿಎಸ್ ಟಿ ಸಂಗ್ರಹಕ್ಕೆ ಹೊಡೆತ ಬಿದ್ದಿತ್ತು.
ಆದರೆ 2021 ರ ಮೇ ತಿಂಗಳಲ್ಲಿ ಸಂಗ್ರಹವಾಗಿರುವ ಜಿಎಸ್ ಟಿ ಮೊತ್ತ ಏಪ್ರಿಲ್ ತಿಂಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಇದೆ. ಏಪ್ರಿಲ್ ತಿಂಗಳಲ್ಲಿ 1.41 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿತ್ತು.
ಸಿಜಿಎಸ್ ಟಿ- 17,592 ಕೋಟಿ ರೂಪಾಯಿ, ಎಸ್ ಜಿಎಸ್ ಟಿ 22,653 ಕೋಟಿ ರೂಪಾಯಿ, ಐಜಿಎಸ್ ಟಿ 53,199 ಕೋಟಿ ರೂಪಾಯಿ (ಸರಕುಗಳ ಆಮದು ಮೇಲೆ 26,002 ಕೋಟಿ ರೂಪಾಯಿ) ಸೆಸ್ 9,265 ಕೋಟಿ ರೂಪಾಯಿ (ಆಮದು ಸರಕುಗಳ ಮೇಲಿನ 868 ಕೋಟಿ ರೂಪಾಯಿ ಸೇರಿ) ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.