ಕಾಸರಗೋಡು: ನಬಾರ್ಡ್‍ನ ಆರ್.ಐ.ಡಿ. ಯೋಜನೆಯಲ್ಲಿ ನೀಲೇಶ್ವರ ತೇಜಸ್ವಿನಿ ಹೊಳೆಗೆ ನಿರ್ಮಿಸಿರುವ ಪಾಲಾಯಿ ವಳವ್ ರೆಗ್ಯುಲೇಟರ್ ಕಂ ಬ್ರಿಜ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಶಟರ್ ಗಳ ಸಾಮಥ್ರ್ಯ ಪರಿಶೋಧನೆಗಾಗಿ ನಡೆಸಿರುವ ಟ್ರಯಲ್ ರನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದರಲ್ಲಿ ಎಂಟು ಶಟರ್‍ಗಳನ್ನು ತೆರೆದು ಬಿಡಲಾಗಿದೆ.
ಸ್ವಯಂಚಾಲಿತ ವ್ಯವಸ್ಥೆಯೊಂದಿಗೆ ಚಟುವಟಿಕೆ ನಡೆಸುತ್ತಿರುವ 17ಶಟರ್‍ಗಳು ಇದರಲ್ಲಿ ಒಳಗೊಂಡಿದೆ. ಶಟರ್‍ಗಳ ಕಾರ್ಯಕ್ಷಮತೆ, ರೆಗ್ಯುಲೇಟರ್ ಕಂ ಬ್ರಿಜ್‍ನಲ್ಲಿ ನೀರು ತುಂಬಿಕೊಂಡಾಗ ಕಾಕ್ಕಡವು ವರೆಗಿನ 14ಕಿ.ಮೀ ವ್ಯಾಪ್ತಿಯಲ್ಲಿ ಉಂಟಾಗುವ ವ್ಯತ್ಯಾಸದ ಬಗ್ಗೆಯೂ ಅಧ್ಯಯನ ನಡೆಸಲಾಯಿತು. ನೀರಾವರಿ ಇಲಾಖೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮೇಲ್ನೋಟದಲ್ಲಿ ಟ್ರಯಲ್ ರನ್ ನಡೆಸಲಾಯಿತು.
ತೇಜಸ್ವಿನಿ ಹೊಳೆ ನೀರಿನೊಂದಿಗೆ ಉಪ್ಪುನೀರು ಸೇರ್ಪಡೆಗೊಳ್ಳುತ್ತಿರುವುದನ್ನು ತಡೆಯಲು ನೀಲೇಶ್ವರ ನಗರಸಭೆ ಹಾಗೂ ಕಯ್ಯೂರ್ ಚೀಮೇನಿ ಗ್ರಾಮ ಪಂಚಾಯಿತಿಯನ್ನು ಏಕೀಕರಿಸಿಕೊಂಡು ನಬಾರ್ಡ್ ಸಹಾಯದೊಂದಿಗೆ ರಾಜ್ಯ ನೀರಾವರಿ ಇಲಾಖೆ ವತಿಯಿಂದ 65ಕೋಟಿ ರೂ. ವೆಚ್ಚದಲ್ಲಿ ಈ ರೆಗ್ಯುಲೇಟರ್ ಕಂ ಬ್ರಿಜ್ ನಿರ್ಮಿಸಲಾಗಿದೆ.
ಶಾಸಕ ಎಂ. ರಾಜಗೋಪಾಲನ್, ನೀಲೇಶ್ವರ ನಗರಸಭಾಧ್ಯಕ್ಷೆ ಟಿ.ವಿ. ಶಾಂತ, ಜನಪ್ರತಿನಬಿಧಿಗಳು, ನೀರಾವರಿ ಇಲಾಖೆ ಅಧಿಕಾರಿಗಳು .ಟ್ರಯಲ್ ರನ್ ಸಂದರ್ಭ ಉಪಸ್ಥಿತರಿದ್ದರು.