HEALTH TIPS

ವರದಕ್ಷಿಣೆ ಕಿರುಕುಳಗಳ ರಾಜ್ಯವಾದ ಕೇರಳ: ಕಳೆದ ಐದು ವರ್ಷಗಳಲ್ಲಿ 66 ವರದಕ್ಷಿಣೆ ಹಿಂಸೆಯ ಸಾವುಗಳು!

             ತಿರುವನಂತಪುರ: ವಿದ್ಯಾಭ್ಯಾಸ ಸಹಿತ ಜನಜೀವನ ಮಟ್ಟದಲ್ಲಿ ರಾಷ್ಟ್ರದಲ್ಲೇ ಗುರುತಿಸಿಕೊಂಡಿರುವ ಕೇರಳದ ಮಾನ ಹರಾಜಾಗುವ ಸನ್ನಿವೇಶಗಳು ರಾಜ್ಯದಲ್ಲಿ ಕಳವಳವನ್ನುಂಟುಮಾಡುತ್ತಿದ್ದು, ಕೊಲ್ಲಂನಲ್ಲಿ ವಿಸ್ಮಯ ಎಂಬ ನವವಧು ನಿನ್ನೆ ವರದಕ್ಷಿಣೆ ಸಂಬಂಧಿ ವಿವಾದದಲ್ಲಿ ಪತಿಯಿಂದಲೇ ಕೊಲ್ಲಲ್ಪಟ್ಟ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ವಿಸ್ಮಯಳ ಸಾವು ವರದಕ್ಷಿಣೆ ಸಂಬಂಧ ಚಿತ್ರಹಿಂಸೆಯಿಂದ ಎಂಬ ಸುದ್ದಿಯ ಬಳಿಕ , ಕೇರಳದಲ್ಲಿ ವರದಕ್ಷಿಣೆ ಪಿಡುಗು ಇನ್ನೂ ಜೀವಂತವಾಗಿದೆ ಮತ್ತು ಅದನ್ನು ಹೊಸಕಲು ಕ್ರಮಗಳಿಗಾಗಿ ಹಲವು ಮುಸ್ಸದ್ದಿಗಳು ಮುಂದೆ ಬಂದಿದ್ದಾರೆ. 

            ಪೋಲೀಸ್ ಅಪರಾಧ ದಾಖಲೆಯ ಪ್ರಕಾರ, ರಾಜ್ಯದಲ್ಲಿ ಕಳೆದ ಐದು ವರ್ಷಗಳ ಅಂಕಿಅಂಶಗಳು ಈಗ ಹೊರಬರುತ್ತಿವೆ. ಕಳೆದ 5 ವರ್ಷಗಳಲ್ಲಿ 66 ವರದಕ್ಷಿಣೆ ಚಿತ್ರಹಿಂಸೆ, ಸಾವುಗಳು ಸಂಭವಿಸಿವೆ. ಕಳೆದ ವರ್ಷ, ಪತಿ ಮತ್ತು ಕುಟುಂಬ ಸದಸ್ಯರಿಂದ 15,143 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ. ಈ ವರ್ಷ  1080 ಪ್ರಕರಣಗಳು ಈವರೆಗೆ ದಾಖಲಾಗಿವೆ. ಕ್ರೈಮ್ ರೆಕಾಡ್ರ್ಸ್ ಪ್ರಕಾರ, 2020 ರಲ್ಲಿ 2715 ಪ್ರಕರಣಗಳು ದಾಖಲಾಗಿದ್ದವು.

                   ತಿರುವನಂತಪುರದÀ ಪ್ರಿಯಾಂಕಾ, ಹಾವು ಕಚ್ಚಿ ಕೊಲ್ಲಲ್ಪಟ್ಟಳೆಂದು ಬಿಂಬಿಸಲ್ಪಟ್ಟ ಕೊಲ್ಲಂ ಅಂಚಲ್‍ನ ಉತ್ತರ, ಹಸಿವಿನಿಂದ ಬಳಲುತ್ತಿದ್ದ ಕರುನಾಗಪ್ಪಳ್ಳಿಯ ತುಷಾರ, ಈಗ ವಿಸ್ಮಯ, ಅರ್ಚನಾ ಮತ್ತು ಸುಚಿತ್ರ ಹೀಗೆ ದೊಡ್ಡ ಪಟ್ಟಿಯೇ ಕಣ್ಣೀರ ದಾಖಲೆಗಳೊಂದಿಗೆ ನಮ್ಮನ್ನು ಎಚ್ಚರಿಸುತ್ತದೆ.

               ವಿಸ್ಮಯಳ ಸಾವಿನೊಂದಿಗೆ, ಸಾಮಾಜಿಕ ಮಾಧ್ಯಮಗಳಲ್ಲಿಯೂ ಚರ್ಚೆಗಳು ಸಕ್ರಿಯವಾಗಿವೆ. ಹಲವರು ಮಲಯಾಳಿಗಳು ಚಿನ್ನ ಬಗೆಗಿನ ಭ್ರಮೆಯನ್ನು ಕೈಬಿಡಬೇಕು ಎಂದಿದ್ದರೆ, ಸಮಸ್ಯೆಗಳ ನಡುವೆಯೂ ಮಹಿಳೆಯರು ತಮ್ಮ ಗಂಡನ ಮನೆಗಳಲ್ಲಿ ವಾಸಿಸಬೇಕು ಎಂಬ ಗ್ರಹಿಕೆಯನ್ನು ಪೋಷಕರು ಬದಲಾಯಿಸಬೇಕು ಎಂದೂ ಹಲವರು ಸಲಹೆ ನೀಡಿರುವರು. ವಿಸ್ಮಯಗೆ 100 ಪಾವನ್ ಚಿನ್ನ, ಒಂದೂವರೆ ಎಕರೆ ಜಮೀನು ಮತ್ತು ಕಾರಿನ ವರದಕ್ಷಿಣೆ ನೀಡಲಾಗಿತ್ತು. ಮೊದಲಿನಿಂದಲೂ ತನ್ನ ಗಂಡನ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದರೂ, ಕುಟುಂಬವು ಅದನ್ನು ನಿರ್ಲಕ್ಷಿಸಿದೆ ಎನ್ನಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries