ಕಾಸರಗೋಡು: ಜಿಲ್ಲೆಯಲ್ಲಿ ಇಂದು ಮತ್ತೆ ಸೋಂಕು ಏರಿಕೆ ಕಂಡಿದ್ದು 729 ಮಂದಿಗೆ ಕೋವಿಡ್ ದೃಢಪಡಿಸಲಾಗಿದೆ. ಜೊತೆಗೆ ಚಿಕಿತ್ಸೆಯಲ್ಲಿದ್ದ 382 ಮಂದಿಗೆ ಋಣಾತ್ಮಕವಾಗಿದೆ. ಪ್ರಸ್ತುತ 4102 ಮಂದಿ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 211 ಕ್ಕೆ ಏರಿದೆ.
17243 ಮಂದಿ ನಿರೀಕ್ಷಣೆಯಲ್ಲಿ:
ಜಿಲ್ಲೆಯಲ್ಲಿ ನಿರೀಕ್ಷಣೆಯಲ್ಲಿರುವವರಲ್ಲಿ 16411 ಮಂದಿ ಮನೆಗಳಲ್ಲೂ, 17243 ಮಂದಿ ವಿವಿಧ ಆರೈಕೆ ಕೇಂದ್ರಗಳಲ್ಲೂ ಸೇರಿ ಒಟ್ಟು 16411 ಮಂದಿ ನಿರೀಕ್ಷಣೆಯಲ್ಲಿದ್ದಾರೆ. ಇಂದು 1797 ಮಂದಿಯನ್ನು ಹೊಸತಾಗಿ ಕ್ವಾರಂಟೈನ್ ಗೆ ಇರಿಸಲಾಗಿದೆ. ಸೆಂಟಿನೆಲ್ ಸಮೀಕ್ಷೆ ಸೇರಿದಂತೆ ಇನ್ನೂ 3995 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ (ಆರ್‍ಟಿಪಿಸಿಆರ್ 2500, ಆಂಟಿಜೆನ್ 1480, ಟ್ರುನಾಟ್ 15). 2950 ಪರೀಕ್ಷಾ ಫಲಿತಾಂಶಗಳು ಲಭ್ಯವಿದೆ. 390 ಮಂದಿ ನಿರೀಕ್ಷಣಾ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 439 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗಳು ಮತ್ತು ಇತರ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಿಸಲಾಗಿದೆ. 382 ಮಂದಿ ಜನರನ್ನು ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದೆ.
ಕೋವಿಡ್ ಇದುವರೆಗೆ ಜಿಲ್ಲೆಯಲ್ಲಿ 82849 ಮಂದಿ ಜನರಲ್ಲಿ ದೃಢಪಡಿಸಲಾಗಿದೆ. ಇಲ್ಲಿಯವರೆಗೆ 78073 ಮಂದಿ ಜನರು ಕೋವಿಡ್ ಮುಕ್ತಗೊಳಿಸಲಾಗಿದೆ. ಜಿಲ್ಲೆಯ ಇಂದಿನ ಪರೀಕ್ಷಾ ಸಕಾರಾತ್ಮಕ ದರ: ಶೇ.12.4 ಆಗಿದೆ.