ತಿರುವನಂತಪುರ: ರಾಜ್ಯದಲ್ಲಿ ಇಂದು ಕೋವಿಡ್ ಸೋಂಕು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಲೋಕ್ ಡೌನ್ ಹೇರುವಿಕೆ ಫಲಪ್ರದವಾಗುತ್ತಿದೆ. ಇಂದು 7719 ಮಂದಿ ಜನರಿಗೆ ಕೋವಿಡ್ ದೃಢಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 68,573 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.11.26. ಆಗಿದೆ.
ಇಂದು ತಿರುವನಂತಪುರ 1170, ಎರ್ನಾಕುಳಂ 977, ಕೊಲ್ಲಂ 791, ತೃಶೂರ್ 770, ಪಾಲಕ್ಕಾಡ್ 767, ಮಲಪ್ಪುರಂ 581, ಆಲಪ್ಪುಳ 524, ಕೋಝಿಕ್ಕೋಡ್ 472, ಕೋಟ್ಟಯಂ 400, ಕಣ್ಣೂರು 339, ಪತ್ತನಂತಿಟ್ಟು 327, ಕಾಸರಗೋಡು 326, ಇಡುಕ್ಕಿ 171, ವಯನಾಡ್ 104 ಎಂಬಂತೆ ಸೋಂಕು ಕಂಡುಬಂದಿದೆ.
ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,12,89,498 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ ಕೆಲವು ದಿನಗಳಲ್ಲಿ 161 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 11,342 ಕ್ಕೆ ಏರಿಕೆಯಾಗಿದೆ. ಒಟ್ಟು 16,743 ಮಂದಿ ಜನರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಇಂದು, ಸೋಂಕುಂಟಾದವರಲ್ಲಿ 36 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 7138 ಮಂದಿ ಜನರಿಗೆ ಸೋಂಕು ತಗುಲಿತು. 493 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ 1059, ಎರ್ನಾಕುಳಂ 957, ಕೊಲ್ಲಂ 782, ತ್ರಿಶೂರ್ 759, ಪಾಲಕ್ಕಾಡ್ 468, ಮಲಪ್ಪುರಂ 549, ಆಲಪ್ಪುಳ 518, ಕೋಝಿಕೋಡ್ 466, ಕೊಟ್ಟಾಯಂ 385, ಕಣ್ಣೂರು 305, ಪತ್ತನಂತಿಟ್ಟು 314, ಕಾಸರಗೋಡು 320, ಇಡುಕ್ಕಿ 165, ವಯನಾಡ್ 91 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 52 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಲ್ಪಟ್ಟಿದೆ. ಎರ್ನಾಕುಳಂ 8, ಪತ್ತನಂತಿಟ್ಟು, ಕಣ್ಣೂರು ತಲಾ 7, ತಿರುವನಂತಪುರ, ಕೊಲ್ಲಂ, ಕಾಸರಗೋಡು ತಲಾ 6, ತ್ರಿಶೂರ್ 5, ಪಾಲಕ್ಕಾಡ್, ವಯನಾಡ್ 3 ಮತ್ತು ಕೋಝಿಕೋಡ್ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಕಂಡುಬಂದಿದೆ. ಇದರೊಂದಿಗೆ 1,13,817 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 26,10,368 ಮಂದಿ ಜನರನ್ನು ಈವರೆಗೆ ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 5,25,331 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 4,95,279 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 30,052 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 1915 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸೋಮವಾರ ಹೊಸ ಹಾಟ್‍ಸ್ಪಾಟ್ ಇಲ್ಲ. ಒಂದು ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 881 ಹಾಟ್‍ಸ್ಪಾಟ್‍ಗಳಿವೆ.