HEALTH TIPS

'ಜಿ7' ಸಮ್ಮೇಳನ: ಚೀನಾದಲ್ಲಿನ ಮಾನವ ಹಕ್ಕುಗಳ ಸ್ಥಿತಿಗತಿ ಬಗ್ಗೆ ಜಪಾನ್‌ ಕಳವಳ

              ಟೊಕಿಯೊ: ಚೀನಾದಲ್ಲಿನ ಮಾನವ ಹಕ್ಕುಗಳ ಸ್ಥಿತಿಗತಿ ಹಾಗೂ ಅದರ ಚಟುವಟಿಕೆಗಳ ಬಗ್ಗೆ ಜಪಾನ್‌ ಪ್ರಧಾನಮಂತ್ರಿ ಯೋಶಿಹಿದೆ ಸುಗಾ ಕಳವಳ ವ್ಯಕ್ತಪಡಿಸಿದ್ದಾರೆ.

           ಬ್ರಿಟನ್‌ನಲ್ಲಿ ನಡೆಯುತ್ತಿರುವ ʼಜಿ7ʼ ಸಮ್ಮೇಳನದ ಎರಡನೇ ದಿನ ಚೀನಾಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ ಸುಗಾ, ಪೂರ್ವ ಮತ್ತು ದಕ್ಷಿಣ ಸಮುದ್ರ ಪ್ರದೇಶಗಳಲ್ಲಿ ಕೈಗೊಂಡ ಏಕಪಕ್ಷೀಯ ಕ್ರಮಗಳು, ಮಾನವ ಹಕ್ಕುಗಳ ಸ್ಥಿತಿಗತಿ ಮತ್ತು ನ್ಯಾಯಸಮ್ಮತವಲ್ಲದ ಆರ್ಥಿಕ ಚಟುವಟಿಕೆಗಳು ʼಜಿ7ʼ ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ. ʼಜಿ7ʼ ರಾಷ್ಟ್ರಗಳು ಈ ಸಮಸ್ಯೆಗಳನ್ನು ಪರಿಹರಿಸಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆʼ ಎಂದು ಜಪಾನ್‌ನ ʼಎನ್‌ಎಚ್‌ಕೆ ವರ್ಲ್ಡ್‌ʼ ವರದಿ ಮಾಡಿದೆ.

           ತನ್ನ ಸಾಗರ ಪ್ರದೇಶಕ್ಕೆ ವಿದೇಶದ ಹಡಗುಗಳು ಅಕ್ರಮವಾಗಿ ಪ್ರವೇಶಿಸಿದರೆ, ಅವುಗಳ ವಿರುದ್ಧ ಅರೆಸೇನಾ ಪಡೆಗಳು ಶಸ್ತ್ರಾಸ್ತ್ರ ಬಳಸಲು ಅವಕಾಶ ಕಲ್ಪಿಸುವ ಹೊಸ ಕಾನೂನನ್ನು ಚೀನಾ ಇತ್ತೀಚೆಗೆ ಜಾರಿಗೊಳಿಸಿತ್ತು. ಇದಾದ ಬಳಿಕ ಚೀನಾ ಮತ್ತು ಜಪಾನ್ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ.

ಚೀನಾದ ಹಡಗುಗಳು ವಿವಾದಿತ ದ್ವೀಪ ʼಸೆಂಕಾಕುʼ ಸುತ್ತಲೂ ದಾಖಲೆಯ 112 ಬಾರಿ ಅತಿಕ್ರಮವಾಗಿ ಪ್ರವೇಶಿಸಿವೆ. ಮಾತ್ರವಲ್ಲದೆ, ಜಪಾನ್‌ ಸಾಗರ ಪ್ರದೇಶಕ್ಕೆ ಏಪ್ರಿಲ್‌ನಲ್ಲಿ ನಾಲ್ಕು ದಿನ, ಮೇನಲ್ಲಿ ಐದು ದಿನ ಪ್ರವೇಶಿಸಿವೆ. ಚೀನಾದಿಂದ ಜನವರಿಯಿಂದ ಮೇ ವರೆಗೆ ಒಟ್ಟು 20 ದಿನ ಅತಿಕ್ರಮ ಪ್ರವೇಶ ಮಾಡಲಾಗಿದೆ ಎಂದು ಜಪಾನ್‌ ಆರೋಪಿಸಿದೆ.

          ಚೀನಾದಲ್ಲಿ ಉಯಿಗರ್‌ ಮುಸ್ಲಿಂ ಸಮುದಾಯದವರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ವರದಿಯಾಗುತ್ತಿರುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದೆ.

            ಚೀನಾ-ಅಮೆರಿಕ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಅಮೆರಿಕವು ದಕ್ಷಿಣ ಸಮುದ್ರ ಮತ್ತು ಪೂರ್ವ ಸಮುದ್ರ ಪ್ರದೇಶಗಳಲ್ಲಿ ತನ್ನ ಸೇನೆ ಜವಾವಣೆಗೆ ಒತ್ತು ನೀಡಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿರುವ ಚೀನಾ, ಈ ಪ್ರದೇಶಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ತನ್ನ ಸಾಗರ ಚಟುವಟಿಕೆಗಳನ್ನು ಹೆಚ್ಚಿಸುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries