ದುಬೈ: ದುಬೈ ನ ವಿಮಾನ ಸೇಗೆಳ ಸಂಸ್ಥೆ ಎಮಿರೇಟ್ಸ್ ದುಬೈ-ಭಾರತ ನಡುವಿನ ಸೇವೆಗಳನ್ನು ಜುಲೈ 7 ರಿಂದ ಪುನಾರಂಭಗೊಳಿಸುವ ಸಾಧ್ಯತೆ ಇದೆ.
ಕೊರೋನಾ ಪ್ರಕರಣಗಳು ಭಾರತದಲ್ಲಿ ಏರಿಕೆಯಾಗುತ್ತಿದ್ದರಿಂದ ಯುಎಇ ಕಳೆದ ಎರಡು ತಿಂಗಳಿನಿಂದ ಭಾರತಕ್ಕೆ ಸಂಚರಿಸುತ್ತಿದ್ದ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿತ್ತು.
ಖಲೀಜ್ ಟೈಮ್ಸ್ ನ ವರದಿಯ ಪ್ರಕಾರ ಎಮಿರೇಟ್ಸ್ ವಿಮಾನ ಸಂಸ್ಥೆ ಭಾರತ ಸರ್ಕಾರದಿಂದ ನಿರ್ದಿಷ್ಟ ಪ್ರಯಾಣ ಶಿಷ್ಟಾಚಾರ ಪ್ರಕಟವಾಗುವುದನ್ನು ಎದುರು ನೋಡುತ್ತಿದೆ ಎಂದು ತಿಳಿದುಬಂದಿದೆ.
"ಭಾರತಕ್ಕೆ ವಿಮಾನ ಸಂಚಾರವನ್ನು ಜುಲೈ 7 ರಿಂದ ಪ್ರಾರಂಭಿಸಲು ನಿರೀಕ್ಷಿಸುತ್ತಿದ್ದು, ಸರ್ಕಾರ ಪ್ರಕಟಿಸುವ ಸಂಚಾರ ಶಿಷ್ಟಾಚಾರಗಳನ್ನು ಕಾಯುತ್ತಿದ್ದೇವೆ ಹೆಚ್ಚಿನ ವಿವರಗಳನ್ನು ಶೀಘ್ರವೇ ಹಂಚಿಕೊಳ್ಳಲಿದ್ದೇವೆ" ಎಂದು ಟ್ವಿಟರ್ ಖಾತೆಯ ಮೂಲಕ ಎಮಿರೇಟ್ಸ್ ತಿಳಿಸಿದೆ. ಏರ್ ಲೈನ್ಸ್ ನ ವೆಬ್ ಸೈಟ್ ಸಹ ಜು.7 ರಿಂದ ಬುಕಿಂಗ್ ಪ್ರಾರಂಭವಾಗಲಿದೆ ಎಂಬುದನ್ನು ತೋರಿಸುತ್ತಿದೆ.