ತಿರುವನಂತಪುರ: ಕೆ.ಎಸ್.ಆರ್.ಟಿ.ಸಿ. ರಾಜ್ಯಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಪಂಪ್‍ಗಳನ್ನು sಸ್ವತಃ ಪ್ರ್ರಾರಂಭಿಸಲು ಸಜ್ಜಾಗಿದೆ. ಸಾರಿಗೆ ಸಚಿವ ಆಂತೋನಿ ರಾಜು ಈ ಬಗ್ಗೆ ಮಾಹಿತಿ ನೀಡಿದ್ದು, ಗುಣಮಟ್ಟದ ಕಲಬೆರಕೆಯಿಲ್ಲದ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾರ್ವಜನಿಕರಿಗೆ ಒದಗಿಸುವ ಮತ್ತು ಆ ಮೂಲಕ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದಿರುವರು.
ಇಂಡಿಯನ್ ಆಯಿಲ್ ಕಾಪೆರ್Çರೇಶನ್ ಸಹಯೋಗದೊಂದಿಗೆ 67 ಪಂಪ್‍ಗಳನ್ನು ಪ್ರಾರಂಭಿಸಲು ಅದು ಉದ್ದೇಶಿಸಿದೆ. ಕೆ.ಎಸ್.ಆರ್.ಟಿ.ಸಿ.ಯ ಅಸ್ತಿತ್ವದಲ್ಲಿರುವ ಡೀಸೆಲ್ ಪಂಪ್‍ಗಳ ಜೊತೆಗೆ ಪೆಟ್ರೋಲ್ ಘಟಕವನ್ನು ಸೇರಿಸುವ ಮೂಲಕ ಪಂಪ್‍ಗಳನ್ನು ಪ್ರಾರಂಭಿಸಲಾಗುವುದು. ವ್ಯಾಪಾರಿ ಆದಾಯ ಮತ್ತು ಭೂ ಬಾಡಿಗೆ ಸೇರಿದಂತೆ ಹೆಚ್ಚಿನ ಆದಾಯವನ್ನು ನಿರೀಕ್ಷಿಸುವುದಾಗಿ ಆಂಟನಿ ರಾಜು ಹೇಳಿದರು.
ಈ ರೀತಿಯ ಉಪಕ್ರಮವು ಪ್ರಸ್ತುತ ಕೆ.ಎಸ್.ಆರ್.ಟಿಸಿ. ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದರು. ಯೋಜನೆಯ ಮೊದಲ ಎಂಟು ಪಂಪ್‍ಗಳನ್ನು 100 ದಿನಗಳಲ್ಲಿ ಕಾರ್ಯಾರಂಭ ಮಾಡಲಾಗುವುದು ಮತ್ತು ಇದಕ್ಕಾಗಿ ಅನುಮೋದನೆ ಪಡೆಯಲಾಗಿದೆ ಎಂದು ಅವರು ಹೇಳಿದರು.
ಮುಂದಿನ 100 ದಿನಗಳಲ್ಲಿ ಚೇರ್ತಲ, ಮಾವೇಲಿಕ್ಕರ, ಮುನ್ನಾರ್, ಗುರುವಾಯೂರ್, ತ್ರಿಶೂರ್, ಅಟ್ಟಿಂಗಲ್, ನೆಡುಮಾಂಗಾಡ್ ಮತ್ತು ಚತ್ತನ್ನೂರಿನಲ್ಲಿ ಪಂಪ್‍ಗಳನ್ನು ಪ್ರಾರಂಭಿಸಲಾಗುವುದು.
ಈಗಿರುವ ಡೀಸೆಲ್ ಪಂಪ್‍ಗಳ ಜೊತೆಗೆ ಮುವಾಟ್ಟುಪುಳ, ಅಂಗಮಾಲಿ, ಕಣ್ಣೂರು, ಕೋಝಿಕೋಡ್ ಮತ್ತು ಪೆರಿಂತಲ್‍ಮಣ್ಣದಲ್ಲಿ ಪೆಟ್ರೋಲ್ ಪಂಪ್‍ಗಳನ್ನು ಪ್ರಾರಂಭಿಸಲಾಗುವುದು. "ಕೆಎಸ್.ಆರ್.ಟಿ.ಸಿಗೆ ಯಾವುದೇ ಹಣಕಾಸಿನ ಬಾಧ್ಯತೆಯಿಲ್ಲ ಮತ್ತು ಸಂಪೂರ್ಣ ವೆಚ್ಚವನ್ನು ಭಾರತೀಯ ತೈಲ ನಿಗಮವು ಭರಿಸಲಿದೆ" ಎಂದು ಅವರು ಹೇಳಿರುವರು.