ನವದೆಹಲಿ: ದೆಹಲಿ ಏಮ್ಸ್ ಆಸ್ಪತ್ರೆಯ 9 ನೇ ಮಹಡಿಯಲ್ಲಿ ಜೂ.17 ರಂದು ಅಗ್ನಿ ಅವಘಡ ವರದಿಯಾಗಿದೆ.
ಅದೃಷ್ಟವಶಾತ್ ಈ ಮಹಡಿಯಲ್ಲಿ ಯಾವುದೇ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿಲ್ಲವಾದ ಕಾರಣ ಯಾರಿಗೂ ಜೀವ ಹಾನಿ, ಗಾಯಗಳು ಸಂಭವಿಸಿಲ್ಲ.
ಈ ದುರಂತ ಸಂಭವಿಸಿದಾಗ 9 ನೇ ಮಹಡಿಯಲ್ಲಿದ್ದ ಜಾಗ ಖಾಲಿ ಇತ್ತು ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ. ರಾತ್ರಿ 10:32 ರ ವೇಳೆಗೆ ಮಾಹಿತಿ ಲಭ್ಯವಾಯಿತು ಎಂದು ಅಗ್ನಿಶಾಮಕ ಇಲಾಖೆ ಮಾಹಿತಿ ನೀಡಿದೆ.
ಈ ಮಹಡಿಯಲ್ಲಿ ರೋಗನಿರ್ಣಯ ಪ್ರಯೋಗಾಲಯ, ಪರೀಕ್ಷಾ ವಿಭಾಗಗಳಿವೆ. ರೆಫ್ರಿಡ್ಜರೇಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಕಾರಣಾದಿಂದಾಗಿ ಬೆಂಕಿ ಹೊತ್ತಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಅಗ್ನಿ ಶಾಮಕ ದಳದ 22 ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ, ಬೆಂಕಿ ತಹಬದಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.