ತಿರುವನಂತಪುರ: ರಾಜ್ಯದಲ್ಲಿ ಇಂದು 7,499 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ತಿರುವನಂತಪುರ 963, ಎರ್ನಾಕುಳಂ 926, ತ್ರಿಶೂರ್ 820, ಕೊಲ್ಲಂ 810, ಪಾಲಕ್ಕಾಡ್ 710, ಮಲಪ್ಪುರಂ 689, ಕೋಝಿಕೋಡ್ 563, ಆಲಪ್ಪುಳ 451, ಕಣ್ಣೂರು 434, ಕಾಸರಗೋಡು 319, ಪತ್ತನಂತಿಟ್ಟು 298, ಕೊಟ್ಟಯಂ 287, ವಯನಾಡ್ 114, ಇಡುಕ್ಕಿ 65 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 77,853 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ. 9.63. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎ|ಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,20,39,227 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 94 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 12,154 ಕ್ಕೆ ಏರಿಕೆಯಾಗಿದೆ.
ಇಂದು, ಸೋಂಕು ಪತ್ತೆಯಾದವರಲ್ಲಿ 47 ಮಂದಿ ರಾಜ್ಯದ ಹೊರಗಿಂದ ಬಂದÀವರು. 6835 ಮಂದಿ ಜನರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿತು. 529 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ 872, ಎರ್ನಾಕುಳಂ 904, ತ್ರಿಶೂರ್ 811, ಕೊಲ್ಲಂ 806, ಪಾಲಕ್ಕಾಡ್ 348, ಮಲಪ್ಪುರಂ 678, ಕೋಝಿಕೋಡ್ 551, ಆಲಪ್ಪುಳ 443, ಕಣ್ಣೂರು 392, ಕಾಸರಗೋಡು 313, ಪತ್ತನಂತಿಟ್ಟು 289, ಕೊಟ್ಟಾಯಂ 267, ವಯನಾಡ್ 101, ಇಡುಕ್ಕಿ 60 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
ಇಂದು 38 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ಕಣ್ಣೂರು 8, ತಿರುವನಂತಪುರ 7, ಎರ್ನಾಕುಳಂ, ಪಾಲಕ್ಕಾಡ್, ಕೋಝಿಕೋಡ್, ಕಾಸರಗೋಡು ತಲಾ 3, ಕೊಲ್ಲಂ, ಕೊಟ್ಟಾಯಂ, ತ್ರಿಶೂರ್, ವಯನಾಡ್ ತಲಾ 2, ಪತ್ತನಂತಿಟ್ಟು, ಆಲಪ್ಪುಳ ಮತ್ತು ಇಡುಕಿ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರು ಸೋಂಕಿಗೊಳಗಾಗಿದ್ದಾರೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 13,596 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1705, ಕೊಲ್ಲಂ 1332, ಪತ್ತನಂತಿಟ್ಟು 390, ಆಲಪ್ಪುಳ 1005, ಕೊಟ್ಟಾಯಂ 834, ಇಡುಕ್ಕಿ 720, ಎರ್ನಾಕುಳಂ 117, ತ್ರಿಶೂರ್ 1907, ಪಾಲಕ್ಕಾಡ್ 1124, ಮಲಪ್ಪುರಂ 1336, ಕೋಝಿಕೋಡ್ 1016, ವಯನಾಡ್ 201, ಕಣ್ಣೂರು 451, ಕಾಸರಗೋಡು 395 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 99,693 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 27,04,554 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 4,30,728 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 4,03,462 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 27,266 ಆಸ್ಪತ್ರೆಗಳಲ್ಲಿವೆ. 1891 ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪಿಆರ್ ಆಧಾರಿತ ಪ್ರದೇಶಗಳು ಹಿಂದಿನ ದಿನದಂತೆಯೇ ಮುಂದುವರಿಯುತ್ತವೆ. ಟಿಪಿಆರ್ 8 ಕೆಳಗೆ 178, ಟಿಪಿಆರ್. 8 ರಿಂದ 20 ರ ನಡುವೆ 633, ಟಿಪಿಆರ್. 20 ರಿಂದ 30ರ ವರೆಗೆ 208, ಟಿಪಿಆರ್. 30 ಮತ್ತು ಅದಕ್ಕಿಂತ ಹೆಚ್ಚಿನ 16 ಸ್ಥಳೀಯ ಸಂಸ್ಥೆಗಳು ಇವೆ. ಸ್ಥಳೀಯಾಡಳಿತ ಪ್ರದೇಶಗಳಲ್ಲಿ ಟಿಪಿಆರ್ ಆಧಾರಿತ ಪರೀಕ್ಷೆಯನ್ನು ಸಹ ಹೆಚ್ಚಿಸಲಾಗುವುದು.
ತಿರುವನಂತಪುರದ ಅತಿಯನ್ನೂರ್, ಅಜೂರ್, ಕತಿನಂಕುಳಂ, ಕರೋಟ್, ಮನಂಪುರ, ಮಂಗಳಾಪುರ, ಪನವೂರ್, ಪೆÇೀತೆನ್‍ಕೋಡ್, ಎರ್ನಾಕುಳಂನ ಚಿಟ್ಟಾಟುಕ್ಕರ, ಪಾಲಕ್ಕಾಡ್ ನ ನಾಗಲಸೇರಿ, ನೆನ್ಮಾರಾ, ವಲ್ಲಾಪುಳ, ಮಲಪ್ಪುರಂನ ತಿರುನಾವಾಯ, ವಯನಾಡಿನ ಮುಪ್ಪನ್ನಾಡು, ಕಾಸರಗೋಡಿನ ಬೇಡಡ್ಕ ಹಾಗೂ ಮಧೂರು ಗ್ರಾ.ಪಂ. ಗಳು 30ಕ್ಕಿಂತಲೂ ಹೆಚ್ಚಿನ ಟೆಸ್ಟ್ ಪಾಸಿಟಿವಿಟಿ ಇರುವ ಸ್ಥಳೀಯಾಡಳಿತ ಸಂಸ್ಥೆಗಳಾಗಿವೆ.