HEALTH TIPS

ಭಾರತದಲ್ಲಿ ಹೆಚ್ಚಿನ ಕೊರೋನಾ ಸೋಂಕು ಸ್ಫೋಟಕ್ಕೆ B.1.617.2 ರೂಪಾಂತರಿ ಕಾರಣ: ಅಧ್ಯಯನ

             ನವದೆಹಲಿಭಾರತದಲ್ಲಿನ ಹೆಚ್ಚಿನ ಕೊರೋನಾ ಸೋಂಕು ಸ್ಫೋಟಕ್ಕೆ B.1.617.2 ರೂಪಾಂತರಿ ಕಾರಣ ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

          23 ಮಾದರಿ (ಶೇ.63.9)ಗಳ ಪೈಕಿ 12 ಮಾದರಿಗಳಲ್ಲಿ ಪೂರ್ತಿ ಲಸಿಕೆ ಹಾಕಿಸಲಾಗಿತ್ತು ಹಾಗೂ 11 ಭಾಗಶಃ ಲಸಿಕೆ ಹಾಕಿಸಿಕೊಂಡವರಿಂದ ಸಂಗ್ರಹಿಸಲಾದ ಮಾದರಿಗಳಾಗಿದ್ದವು. ನಾಲ್ಕು ಮಾದರಿಗಳು ಶೇ.11.1 ರೊಂದಿಗೆ ಹಾಗೂ 1 ಸ್ಯಾಂಪಲ್ ಶೇ.2.8 ರಷ್ಟರೊಂದಿಗೆ ಅನುಕ್ರಮವಾಗಿ B.1.617.1 ಹಾಗೂ B.1.1.7 ರೂಪಾಂತರಿ ಕೊರೋನಾ ವೈರಾಣುಗಳಾಗಿದ್ದವು ಎಂದು ಅಧ್ಯಯನ ವರದಿ ತಿಳಿಸಿದೆ.

ಸರಾ ಸರಿ 37 ವಯಸ್ಸಿನ ರೋಗಿಗಳ ಪೈಕಿ 41 ಮಂದಿ ಪುರುಷರು ಹಾಗೂ 22 ಮಂದಿ ಮಹಿಳೆಯರು ಇದ್ದರು. ಆದರೆ ಇವರ್ಯಾರಿಗೂ ಸೋಂಕು ಹೆಚ್ಚುವುದಕ್ಕೆ ಕಾರಣವಾಗಬಹುದಾಗಿದ್ದ ಬಹುವಿಧದ ಆರೋಗ್ಯ ಸಮಸ್ಯೆಗಳು ಅದಾಗಲೇ ಇರಲಿಲ್ಲ ಎಂಬುದು ಗಮನಾರ್ಹ ಎಂದು ಏಮ್ಸ್ ಸಹಯೋಗದಲ್ಲಿ ಸಿಎಸ್‌ಐಆರ್-ಐಜಿಬಿ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

            ಆತಂಕಕಾರಿ B.1.617.2 ರೂಪಾಂತರಿ ಕೊರೋನಾ ಭಾರತದಲ್ಲಿ ಮೊದಲು ಪತ್ತೆಯಾಗಿತ್ತು ಹಾಗೂ B.1.1.7 ಮಹಾರಾಷ್ಟ್ರದಲ್ಲಿ ಪತ್ತೆಯಾಗಿತ್ತು. ಈ ಬಳಿಕ ಏಪ್ರಿಲ್-ಮೇ ತಿಂಗಳಲ್ಲಿ ಕೊರೋನಾದ ಪ್ರಕರಣಗಳು ತೀವ್ರವಾಗಿ ಏರಿಕೆ ಕಂಡಿದ್ದವು. 2ನೇ ಅಲೆಯಲ್ಲಿ ದೇಶಾದ್ಯಂತ ಕೊರೋನಾ ಸೋಂಕು ತೀವ್ರವಾಗಿ ಹೆಚ್ಚಲು ಇದೇ ಮುಖ್ಯವಾದ ಕಾರಣವಾಗಿತ್ತು.

         ಸೋಂಕು ಹೆಚ್ಚಳವಾಗಿದ್ದ ಪ್ರಕರಣಗಳನ್ನು ಅಧ್ಯಯನಕ್ಕೆ ಒಳಪಡಿಸಿ ವಿಶ್ಲೇಷಿಸಿದಾಗ 10 ಮಂದಿ ರೋಗಿಗಳಲ್ಲಿ (8 ಮಂದಿಗೆ ಎರಡೂ ಲಸಿಕೆಗಳು ಪೂರ್ಣಗೊಂಡಿದ್ದವು, ಇಬ್ಬರಿಗೆ ಒಂದೇ ಡೋಸ್ ನೀಡಲಾಗಿತ್ತು) ಒಟ್ಟು ಇಮ್ಯುನೊಗ್ಲಾಬ್ಯುಲಿನ್ ಜಿ (ಐಜಿಜಿ) ಪ್ರತಿಕಾಯಗಳು ಹೆಚ್ಚುವರಿಯಾಗಿ ವರದಿಯಾಗಿದ್ದರೆ 6 ಮಂದಿಯಲ್ಲಿ ಸೋಂಕು ತಗುಲುವುದಕ್ಕೂ ಒಂದು ತಿಂಗಳ ಮುನ್ನವೇ ಜಿ (ಐಜಿಜಿ) ಪ್ರತಿಕಾಯಗಳು ಉತ್ಪತ್ತಿಯಾಗಿದ್ದವು, 4 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಬಳಿಕ ಪ್ರತಿಕಾಯಗಳು ಉತ್ಪತ್ತಿಯಾಗಿದ್ದವು.

        ರೋಗಿಗಳ ಪ್ರತಿಕಾಯಗಳ ಮಟ್ಟದ ಬಗ್ಗೆ ಮಾಹಿತಿ ಲಭ್ಯವಿದ್ದು, ಪ್ರತಿಕಾಯಗಳ ಹೊರತಾಗಿಯೂ ಕೆಲವು ಮಂದಿಗೆ ಸೋಂಕು ತಗುಲಿದ್ದು, ಬೇರೆ ರೋಗಿಗಳಂತೆಯೇ ತುರ್ತು ಚಿಕಿತ್ಸೆಯ ಪರಿಸ್ಥಿತಿಯನ್ನು ಎದುರಿಸಿದ್ದರು. ಇದು ಕೋವಿಡ್ ಪ್ರತಿರಕ್ಷೆಯ ಹಾಗೂ ಐಜಿಜಿಯ ಪ್ರಸ್ತುತತೆ ಬಗ್ಗೆ ಅನುಮಾನ ಮೂಡಿಸುವಂತೆ ಮಾಡಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

         ಲಸಿಕೆ ನಂತರದ 63 ಪ್ರಕರಣಗಳಲ್ಲಿ 36 ವ್ಯಕ್ತಿಗಳಿಗೆ ಎರಡೂ ಡೋಸ್ ಗಳನ್ನು ನೀಡಲಾಗಿತ್ತು. ಆದರೆ ಈ ಪೈಕಿ ಎಲ್ಲಾ ಪ್ರಕರಣಗಳಲ್ಲಿಯೂ 5-7 ದಿನಗಳವರೆಗೆ ಜ್ವರ ಎಡೆಬಿಡದೇ ಕಾಡಿತ್ತಾದರೂ ಸಾವಿನ ಸಂಖ್ಯೆ ಒಂದೇ ಒಂದೂ ದಾಖಲಾಗಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ.

           ಲಸಿಕೆ ಪಡೆದ ಸ್ಥಿತಿ ಏನೇ ಇದ್ದರೂ ಅಧ್ಯಯನಕ್ಕೆ ಒಳಪಡಿಸಿದ ವ್ಯಕ್ತಿಗಳಲ್ಲಿ ರೋಗನಿರ್ಣಯದ ವೇಳೆ ವೈರಾಣು ಸಂಖ್ಯೆ ಹೆಚ್ಚಾಗಿತ್ತು. ಲಸಿಕೆ ಪಡೆಯದವರಿಗೆ ಜ್ವರ 5-7 ದಿನ ಬಾಧಿಸಿದಂತೆಯೇ ಲಸಿಕೆ ಪಡೆದವರಲ್ಲಿಯೂ ಜ್ವರ ಬಾಧಿಸಿದೆ ಎಂದು ಅಧ್ಯಯನ ವರದಿ ವಿವರಿಸಿದೆ. ಈ ಅಧ್ಯಯನ ವರದಿ ಹಲವು ಆಯಾಮಗಳಿಂದ ವಿಶಿಷ್ಟವಾಗಿದ್ದು, ಲಸಿಕೆ ಪ್ರಗತಿಯ ನಂತರವೂ ಕಾಣಿಸಿಕೊಂಡ ರೋಗಲಕ್ಷಣ ಸಹಿತ ಸೋಂಕುಗಳ ಪೈಕಿ ಮೊದಲನೆಯ ವರದಿಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries