ಕುಂಬಳೆ: ಆರಿಕ್ಕಾಡಿ ಒಡ್ಡಿನ ಬಾಗಿಲು ಪ.ಜಾತಿ, ಪಂಗಡದ ರುದ್ರಭೂಮಿ ವಿಷಯದಲ್ಲಿ ರಾಜಕೀಯ ಪಕ್ಷಗಳು ಕೈಯಿಕ್ಕುವುದು ಬೇಡ ಎಂದು ಆರಿಕ್ಕಾಡಿ ಒಡ್ಡಿನ ಬಾಗಿಲು ಹಿಂದೂ ಪ.ಜಾತಿ, ವರ್ಗ ರುದ್ರಭೂಮಿ ಸಂರಕ್ಷಣಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜಕೀಯಾತೀತವಾಗಿ ಎಲ್ಲರೂ ಸಮಿತಿಯೊಂದಿಗೆ ಸಹಕರಿಸುತ್ತಿದ್ದು, ಹಲವು ವರ್ಷಗಳಿಂದ ಸಮಿತಿ ಈ ರುದ್ರಭೂಮಿಗಾಗಿ ಹೋರಾಟ ನಡೆಸುತ್ತಿದೆ. ಕಳೆದ ಹಲವು ವರ್ಷಗಳಿಂದ ಗೌರವಾಧ್ಯಕ್ಷರಾದ ಜಯರಾಮ ಪೂಜಾರಿಯವರ ನೇತೃತ್ವದಲ್ಲಿ ಹೋರಾಟ ನಡೆಸಲಾಗುತ್ತಿದ್ದು, ಮುಂದೆಯೂ ಎಲ್ಲರ ಸಹಕಾರವನ್ನು ಸಮಿತಿ ನಿರೀಕ್ಷಿಸಿದೆ. ಜೊತೆಗೆ ಯಾವುದೇ ರಾಜಕೀಯಗಳನ್ನು ಈ ಬಗ್ಗೆ ಮಾಡಬಾರದೆಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ರುದ್ರಭೂಮಿ ಹೋರಾಟದಲ್ಲಿ ಬೆಂಬಲವಾಗಿ ನಿಂತ ಎಲ್ಲಾ ರಾಜಕೀಯ ಪಕ್ಷಗಳಿಗೂ, ಪಂಚಾಯತಿ ಸದಸ್ಯರಿಗೂ ನಿರ್ಗಮಿತ ಅಧ್ಯಕ್ಷ ಬಾಬು ಕೆ.ಕೆ. ಅಭಿನಂದನೆ ಸಲ್ಲಿಸಿರುವರು.
ಇತ್ತೀಚೆಗೆ ಬಂಬ್ರಾಣದಲ್ಲಿ ನಡೆದ ಸಮಿತಿಯ ವಾರ್ಷಿಕ ಸಭೆಯಲ್ಲಿ 2021-22ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ರಾಮ(ಅಧ್ಯಕ್ಷ), ಪದ್ಮನಾಭ (ಕಾರ್ಯದರ್ಶಿ), ಸುಂದರ (ಕೋಶಾಧಿಕಾರಿ), ಕೃಷ್ಣ(ಉಪಾಧ್ಯಕ್ಷ),ಕೃಷ್ಣ ಕೆ.(ಜೊತೆ ಕಾರ್ಯದರ್ಶಿ) ಯಾಗಿಯೂ, ಆನಂದ, ಕೃಷ್ಣ, ಕುಮಾರ, ಲಕ್ಷ್ಮಣ, ಬಾಬು ಕೆ.ಕೆ., ಕುಮಾರ, ಪುಷ್ಪ, ಸುಮತಿ, ಸೀತಾರಾಮ ಅವರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆಮಾಡಲಾಯಿತು.ಪದ್ಮನಾಭ ಕೆ. ಸ್ವಾಗತಿಸಿ, ಪ್ರಭಾಕರ ವಂದಿಸಿದರು.