ನ್ಯೂಯಾರ್ಕ್: ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ಕಂಪೆನಿಗೆ ನಾಡೆಲ್ಲಾ ಸತ್ಯ ಅವರನ್ನು ಚೇರ್ಮನ್ ಆಗಿ ನೇಮಕ ಮಾಡಲಾಗಿದೆ. ಇವರು ಇದೇ ಕಂಪೆನಿಯ ಸಿಇಒ ಆಗಿ ಕೆಲಸ ನಿರ್ವಹಿಸುತ್ತಿದ್ದರು
. ಕಂಪೆನಿಯಲ್ಲಿ ಇದುವರೆಗೆ ಚೇರ್ಮನ್ ಆಗಿದ್ದ ಜಾನ್ ಥಾಮ್ಸನ್ ಅವರನ್ನು ಪ್ರಮುಖ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. 2014ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಸಹ ಸ್ಥಾಪಕರಾಗಿದ್ದ ಬಿಲ್ ಗೆಟ್ಸ್ ಅವರಿಂದ ಚೇರ್ಮನ್ ಸ್ಥಾನವನ್ನು ಥಾಮ್ಸನ್ ಪಡೆದುಕೊಂಡಿದ್ದರು. ಇನ್ನು ಮುಂದೆ ಇವರು ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ.
ಸತ್ಯ ಅವರು 2014ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಮುಖ್ಯ ನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಕಗೊಂಡಿದ್ದರು. ಸ್ಟೀವ್ ಬಲ್ವರ್ ಅವರಿಂದ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಜತೆ ಸಭೆ ಸಿಇಒ ಹುದ್ದೆಯ ಜತೆಗೆ ಲಿಂಕ್ಡ್ ಇನ್, ಜೆನಿಮ್ಯಾಕ್ ವ್ಯವಹಾರಗಳ ಹೆಚ್ಚುವರಿ ಜವಾಬ್ದಾರಿಯನ್ನೂ ಇವರು ನಿಭಾಯಿಸುತ್ತಿದ್ದರು.