ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ನಡೆಯುತ್ತಿರುವ ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ವಿವಿಧ ವಲಯಗಳ ಮಂದಿ ನೀಡುತ್ತಿರುವ ಹೆಗಲುಗಾರಿಕೆಯಲ್ಲಿ ರಾಷ್ಟ್ರೀಯ ಸೇವಾ ಸಂಸ್ಥೆ(ಎನ್.ಎಸ್.ಎಸ್.)ಯ ಸ್ವಯಂಸೇವಕರ ಕೊಡುಗೆ ಅನನ್ಯವಾಗಿದೆ.
ವಿಶೇಷ ಪರಿಶೀಲನೆ ಅಗತ್ಯವಿರುವ ವಿಶೇಷಚೇತನರನ್ನು ಗುರುತಿಸಿ, ಅವರಿಗೆ ಆದ್ಯತೆಯ ಪಟ್ಟಿಯಲ್ಲಿ ವಾಕ್ಸಿನೇಷನ್ ಒದಗಿಸುವ ನಿಟ್ಟಿನಲ್ಲಿ ಮೆಗಾ ನೋಂದಣಿ ಡ್ರೈವನ್ನು ವಹಿಸಿ ಎನ್.ಎಸ್.ಎಸ್. ಸ್ವಯಂಸೇವಕರು ನಡೆಸುತ್ತಿದ್ದಾರೆ. ವಿಶೇಷ ಪರಿಶೀಲನೆ ಅಗತ್ಯವಿರುವ ವಿಶೇಷಚೇತನರಿಗೆ ಮನೆಗಳಲ್ಲಿ, ಮನೆ ಬಳಿಯ ಜಾಗದಲ್ಲಿ ಯಾ ಮೊಬೈಲ್ ಯೂನಿಟ್ ಮೂಲಕ ಲಸಿಕೆ ಒದಗಿಸುವ ಕಾಯಕ ನಡೆಸಲಾಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಈ ರೀತಿ ವಿಶೇಷ ಪರಿಶೀಲನೆ ಅಗತ್ಯವಿರುವ 6 ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ.
ಜಿಲ್ಲಾಡಳಿತದ ವೀ ಡಿಸರ್ವ್ ಯೋಜನೆಯಲ್ಲಿ ನೋಂದಣಿ ನಡೆಸಿದ 18 ವಯಸ್ಸಿಗಿಂತ ಅಧಿಕ ವಯೋಮಾನದ ನಡೆದಾಡಲು ಅಸಾಧಯವಾಗಿರುವ ಮಮದಿ, ಸೆರಿಬ್ರಲ್ ಪಾರ್ಸಿ, ಆಟ್ಟಿಸಂ, ಬಹುವೈಕಲ್ಯ, ಬೌದ್ಧಿಕ ಸವಾಲು ಎದುರಿಸುತ್ತಿರುವವರು, ಮಸ್ಕ್ಯುಲರ್ ಡಿಸ್ ಪೆÇ್ರೀಸಿ, ಪೂರ್ಣರೂಪದಲ್ಲಿ ಹಾಸುಗೆ ಹಿಡಿದವರು ಮೊದಲಾದವರನ್ನು ಪತ್ತೆಮಾಡಲಾಗುತ್ತದೆ. ವಾಕ್ಸಿಲೇಷನ್ ಗಾಗಿ ಇವರ ಮಾಹಿತಿಗಳನ್ನು ಕೋವಿಡ್ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸುವುದು, ವಾರ್ಡ್ ಮಟ್ಟದಲ್ಲಿ ರೂಟ್ ಮಾಪ್ ಸಿದ್ಧಪಡಿಸಿ ಆರೋಗ್ಯ ಇಲಾಖೆಗೆ ಹಸ್ತಾಂತರಿಸುವುದು ಇತ್ಯಾದಿಗಳನ್ನು ಎನ್.ಎಸ್.ಎಸ್. ಸ್ವಯಂಸೇವಕರು ನಡೆಸುತ್ತಿದ್ದಾರೆ.
ಜಿಲ್ಲಾಡಳಿತದ ಆದೇಶ ಪ್ರಕಾರ ಕೇರಳ ಸಮಾಜ ಸುರಕ್ಷೆ ಮಿಷನ್ ನೇತೃತ್ವದಲ್ಲಿ ಈ ಚಟುವಟಿಕೆಗಳು ನಡೆದುಬರುತ್ತಿವೆ. ಕಾಸರಗೋಡು ಸರಕಾರಿ ಕಾಲೇಜು, ಎಲ್.ಬಿ.ಎಸ್. ಇಂಜಿನಿಯರಿಂಗ್ ಕಾಲೇಜು, ಮುನ್ನಾಡು ಪೀಪಲ್ಸ್ ಕಾಲೇಜು, ಉದುಮಾ ಸರಕಾರಿ ಕಾಲೇಜುಗಳ ಎನ್.ಎಸ್.ಎಸ್. ವಿದ್ಯಾರ್ಥಿಗಳು ಈ ಸ್ವಯಂಸೇವೆ ನಡೆಸುತ್ತಿದ್ದಾರೆ.
ಸಾಮಾಜಿಕ ಬದ್ಧತೆ, ಸೇವಾ ಮನೋಭಾವ, ಸಮಪರ್ಪಣೆ ಮನೋಧರ್ಮ ಇತ್ಯಾದಿಗಳ ಮೂಲಕ ಮತ್ತು ನಿಸ್ವಾರ್ಥ ಸೇವೆಯಿಂದ ಇತರರಿಗೆ ಇವರು ಮಾದರಿಯಾಗಿದ್ದಾರೆ ಎಂದು ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಿ ಅವಲೋಕನ ನಡೆಸಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಭಿಪ್ರಾಯಪಟ್ಟರು.
ಜಿಲ್ಲಾ ಸಮಾಜ ನೀತಿ ಅಧಿಕಾರಿ ಷೀಬಾ ಮುಂತಾಝ್ ಅವರು ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಕೇರಳ ಸಮಾಜ ಸುರಕ್ಷೆ ಮಿಷನ್ ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್, ಸಂಚಾಲಕರಾದ ಸಿ.ರಾಜೇಶ್, ಮುಹಮ್ಮದ್ ಅಶ್ರಫ್ ಮೊದಲಾದವರು ಚಟುವಟಿಕೆಗಳ ಏಕೀಕರಣ ನಡೆಸುತ್ತಿದ್ದಾರೆ.