ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದರಿಂದ, ಲಾಕ್‍ಡೌನ್‍ನಲ್ಲಿ ಹೊಸ ರಿಯಾಯಿತಿಗಳ ಸಾಧ್ಯತೆ ಇದೆ. ಇಂದು ಸಂಜೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಪರಿಶೀಲನಾ ಸಭೆಯ ನಂತರ ರಿಯಾಯಿತಿಗಳನ್ನು ಘೋಷಿಸಲು ತೀರ್ಮಾನಿಸಲಾಗಿದ್ದು ನಾಳೆ ಅಂತಿಮ ಘೋಷಣೆ ತಿಳಿಯಲಿದೆ. ವಿನಾಯಿತಿಗಳು ಬುಧವಾರದ ನಂತರ ಜಾರಿಗೆ ಬರಲಿವೆ.
ಹೆಚ್ಚಿನ ರಿಯಾಯಿತಿಗಳನ್ನು ಕೋರಿ ವ್ಯಾಪಾರಿಗಳು ಮತ್ತು ಇತರರು ಮುಷ್ಕರಕ್ಕೆ ಮುಂದಾಗುತ್ತಿರುವುದರಿಂದ ಸರ್ಕಾರ ನಿರ್ಣಾಯಕ ಸಭೆ ನಡೆಸಿದೆ. ವರದಿಗಳ ಪ್ರಕಾರ, ಆಟೋ ಮತ್ತು ಟ್ಯಾಕ್ಸಿ ಸೇವೆಗಳು, ಬಟ್ಟೆ ಅಂಗಡಿಗಳು ಮತ್ತು ಶೂ ಅಂಗಡಿಗಳನ್ನು ತೆರೆಯಲು ಅನುಮತಿಸಬಹುದು. ಇದಲ್ಲದೆ, ಹೆಚ್ಚಿನ ಕೆಎಸ್‍ಆರ್‍ಟಿಸಿ ಬಸ್‍ಗಳು ಸೇವೆಯಲ್ಲಿರುತ್ತವೆ. ಇಂದಿನ ಸಭೆಯು ವಾರಾಂತ್ಯದ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಕಡಿಮೆ ಮಾಡುವ ಬಗ್ಗೆಯೂ ನಿರ್ಧರಿಸಿದೆ ಎನ್ನಲಾಗಿದೆ.
ಲಾಕ್‍ಡೌನ್ ವಿರುದ್ಧ ಕೊಚ್ಚಿ ಮತ್ತು ಕೊಲ್ಲಂನ ವ್ಯಾಪಾರಿಗಳು ಇಂದು ಧರಣಿ ನಡೆಸಿದರು. ಲಾಕ್‍ಡೌನ್ ಹೆಸರಿನಲ್ಲಿ ಪೋಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ, ಸುದ್ದಿ ವಾಹಿನಿಗಳು ಸೇರಿದಂತೆ ವ್ಯಾಪಾರಿಗಳ ಜೀವನೋಪಾಯ ಅಪಾಯದಲ್ಲಿರುವ ಬಗ್ಗೆ ಉಲ್ಲೇಖಿಸಿ ಹೆಚ್ಚಿನ ರಿಯಾಯಿತಿಗಳನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಸಮನ್ವಯ ಸಮಿತಿಯು ವೈದ್ಯಕೀಯ ಮಳಿಗೆಗಳನ್ನು ಹೊರತುಪಡಿಸಿ ತೆರೆಯಲು ಅನುಮತಿಸಲಾದ ಎಲ್ಲಾ ಅಂಗಡಿಗಳನ್ನು ಮುಚ್ಚಲು ನಿರ್ಧರಿಸಿದೆ. ಪ್ರತಿಭಟನೆಯಲ್ಲಿ ಹೋಟೆಲ್‍ಗಳ ಒಂದು ಭಾಗವೂ ಮುಚ್ಚಲಿದೆ ಎಂದು ತಿಳಿದುಬಂದಿದೆ. ಆದರೆ ಸಿಪಿಎಂ ಪರ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಸಮಿತಿಯು ಮುಷ್ಕರಕ್ಕೆ ಸಹಕರಿಸುವುದಿಲ್ಲ.
19 ನಿಯಮಗಳಿಗೆ ಅನುಸಾರವಾಗಿ ಅಂಗಡಿಗಳನ್ನು ತೆರೆಯಲು ಮತ್ತು ಆನ್‍ಲೈನ್ ಮನೆ ವಿತರಣಾ ವ್ಯವಸ್ಥೆಯನ್ನು ನಿಯಂತ್ರಿಸಲು ಅವಕಾಶ ನೀಡಬೇಕೆಂದು ವ್ಯಾಪಾರಿಗಳು ಒತ್ತಾಯಿಸಿದ್ದಾರೆ. ಆಲ್ ಕೇರಳ ವಿತರಕರ ಸಂಘ, ಬೇಕರೀಸ್ ಅಸೋಸಿಯೇಷನ್ ಮತ್ತು ಸೂಪರ್ಮಾರ್ಕೆಟ್ ಅಸೋಸಿಯೇಷನ್ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿವೆ.
ಇದೇ ವೇÀಳೆ ಶನಿವಾರ ಮತ್ತು ಭಾನುವಾರದ ಟ್ರಿಪಲ್ ಲಾಕ್‍ಡೌನ್‍ಗೆ ಹೋಲುವ ನಿಬರ್ಂಧಗಳಿಂದ ಸೋಮವಾರ ಹೆಚ್ಚಿನ ವಿನಾಯಿತಿಗಳಿದ್ದವು. ನಿರ್ಮಾಣ ಚಟುವಟಿಕೆಗಳು ಮತ್ತು ಹೋಟೆಲ್‍ಗಳಿಂದ ಪಾರ್ಸೆಲ್‍ಗಳನ್ನು ಖರೀದಿಸುವುದು ಮುಂದುವರಿದಿದೆ.