HEALTH TIPS

ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಯಾವುದು ಅತ್ಯುತ್ತಮವಾಗಿ ಪ್ರತಿಕಾಯ ಸೃಷ್ಟಿಸುತ್ತದೆ: ಇಲ್ಲಿದೆ ಅಧ್ಯಯನ ವರದಿ!

           ನವದೆಹಲಿಕೊರೋನಾ ವಿರುದ್ಧ ಕೋವಿಶೀಲ್ ಅಥವಾ ಕೋವ್ಯಾಕ್ಸಿನ್ ಯಾವುದು ಅತ್ಯುತ್ತಮ ಲಸಿಕೆ ಎಂಬ ಚರ್ಚೆಗಳು ನಡೆಯುತ್ತಾ ಬಂದಿದ್ದು ಇದೀಗ ಅಧ್ಯಯನವೊಂದು ಯಾವುದು ಅತೀ ಉತ್ತಮ ಎಂದು ಬಹಿರಂಗಪಡಿಸಿದೆ.

        ಒಂದು ಡೋಸ್ ಮತ್ತು ಎರಡು ಡೋಸ್ ಪಡೆದಿರುವ ಆರೋಗ್ಯ ಕಾರ್ಯಕರ್ತರ ಮೇಲೆ ಅಧ್ಯಯನ ನಡೆಸಲಾಗಿತ್ತು. ಇದರಲ್ಲಿ ಕೋವಿಶೀಲ್ಡ್ ಲಸಿಕೆ ಕೋವ್ಯಾಕ್ಸಿನ್ ಗಿಂತ ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸಿದೆ ಎಂದು ಲಸಿಕೆ-ಪ್ರೇರಿತ ಆಂಟಿಬಾಡಿ ಟೈಟ್ರೆ(ಕೋವಾಟ್) ನಡೆಸಿದ ಪ್ರಾಥಮಿಕ ಅಧ್ಯಯನದಲ್ಲಿ ತಿಳಿದುಬಂದಿದೆ.

         ಮೊದಲ ಡೋಸ್ ನಂತರ ಕೋವ್ಯಾಕ್ಸಿನ್ ಹೋಲಿಸಿದರೆ ಕೋವಿಶೀಲ್ಡ್ ಸ್ವೀಕರಿಸಿದವರಲ್ಲಿ ಆಂಟಿ-ಸ್ಪೈಕ್ ಪ್ರತಿಕಾಯಕ್ಕೆ ಸೆರೊಪೊಸಿಟಿವಿಟಿ ದರಗಳು ಗಮನಾರ್ಹವಾಗಿ ಹೆಚ್ಚಿವೆ ಎಂದು ಅಧ್ಯಯನ ಹೇಳಿದೆ.

          ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳ ಎರಡು ಡೋಸ್ ಪಡೆವರಲ್ಲಿ ಉತ್ತಮವಾಗಿ ಪ್ರತಿಕಾಯಗಳು ಹೆಚ್ಚಾಗಿವೆ ಎಂದು ಅಧ್ಯಯನ ಹೇಳಿದೆ. ಆದರೆ ಕೋವಿಶೀಲ್ಡ್ನಲ್ಲಿ ಸಿರೊಪೊಸಿಟಿವಿಟಿ ದರ ಮತ್ತು ಸರಾಸರಿ ಆಂಟಿ-ಸ್ಪೈಕ್ ಪ್ರತಿಕಾಯ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ತಿಳಿಸಿದೆ.

           227 ಮಹಿಳೆಯರು ಮತ್ತು 325 ಪುರುಷರು ಸೇರಿದಂತೆ 552 ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದರಲ್ಲಿ 456 ಮಂದಿ ಕೋವಿಶೀಲ್ಡ್ ಮತ್ತು 96 ಮಂದಿ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದಿದ್ದರು. ಒಟ್ಟಾರೆಯಾಗಿ ಕೋವಿಶೀಲ್ಡ್ ಪಡೆದವರಲ್ಲಿ ಶೇಕಡಾ 80ರಷ್ಟು ಪ್ರತಿಕಾಯ ಹೆಚ್ಚಾಗಿದೆ. ಅದಾಗ್ಯೂ, ಅಧ್ಯಯನದ ತೀರ್ಮಾನವು ಎರಡೂ ಲಸಿಕೆಗಳು ಉತ್ತಮ ರೋಗನಿರೋಧಕ ಪ್ರತಿಕ್ರಿಯೆಯನ್ನು ಪಡೆದಿವೆ ಎಂದು ತಿಳಿದುಬಂದಿದೆ.

         ಎರಡೂ ಲಸಿಕೆಗಳು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೊರಹೊಮ್ಮಿಸಿದರೂ, ಮೊದಲ ಡೋಸ್ ನಂತರ ಕೋವ್ಯಾಕ್ಸಿನ್ ಗೆ ಹೋಲಿಸಿದರೆ ಕೋವಿಶೀಲ್ಡ್ ಸ್ವೀಕರಿಸುವವರಲ್ಲಿ ಆಂಟಿ-ಸ್ಪೈಕ್ ಪ್ರತಿಕಾಯಕ್ಕೆ ಸಿರೊಪೊಸಿಟಿವಿಟಿ ದರಗಳು ಗಮನಾರ್ಹವಾಗಿ ಹೆಚ್ಚಿವೆ. ನಡೆಯುತ್ತಿರುವ ಕೋವಾಟ್ ಅಧ್ಯಯನವು ಎರಡನೇ ಡೋಸ್ ನಂತರ ಎರಡು ಲಸಿಕೆಗಳ ನಡುವಿನ ರೋಗನಿರೋಧಕ ಪ್ರತಿಕ್ರಿಯೆಯನ್ನು ಮತ್ತಷ್ಟು ತಿಳಿಸುತ್ತದೆ ಎಂದು ಅದು ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries