HEALTH TIPS

ಗಿಳಿವಿಂಡಿನಲ್ಲಿ ಸಿದ್ದಲಿಂಗಯ್ಯ ನುಡಿನಮನ

               ಮಂಜೇಶ್ವರ: ಅಪೂರ್ವ ಕಲಾವಿದರು ಕಾಸರಗೋಡು ಹಾಗೂ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಮಂಜೇಶ್ವರ ಇವರ ಜಂಟಿ ಆಶ್ರಯದಲ್ಲಿ ಅಗಲಿದ ಕವಿ ನಾಡೋಜ ಡಾ.ಸಿದ್ದಲಿಂಗಯ್ಯ ಅವರಿಗೆ ನುಡಿನಮನ ಕಾರ್ಯಕ್ರಮ ಮಂಜೇಶ್ವರ ಗಿಳಿವಿಂಡಿನಲ್ಲಿ ನಡೆಯಿತು.

       ಗೋವಿಂದ ಪೈ ಸ್ಮಾರಕ ಸಮಿತಿಯ ಕಾರ್ಯದರ್ಶಿ ಕೆ.ಆರ್.ಜಯಾನಂದ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ನುಡಿನಮನ ಸಲ್ಲಿಸಿ ಮಾತನಾಡಿದರು. ಅವರು ಮಾತನಾಡಿ, ದಮನಿತರ ಪರವಾದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬೆಳಗಿಸಿದ ಆದಿ ಕವಿ ಸಿದ್ದಲಿಂಗಯ್ಯರ ಹೆಗ್ಗಳಿಕೆಯಾಗಿದೆ. ಅವರ ಕಾವ್ಯದ ಶಕ್ತಿ ಅವರು ಅನುಭವಿಸಿದ ಜೀವನದ ಸ್ವಾನುಭವವೇ ಆಗಿದ್ದು, ಅದರಲ್ಲಿ ಉತ್ಪ್ರೇಕ್ಷೆಗಳಿಲ್ಲದ ನೈಜತೆ ಇದೆ. ಸಮಾಜಕ್ಕೆ ತಲಸ್ಪರ್ಶಿಯಾಗಿ ತಲಪಿದ ಅವರ ಕಾವ್ಯ ಕ್ರಾಂತಿಗೀತೆಯಾಗಿ ಸಂಚಲನ ಸೃಷ್ಟಿಸಿತ್ತು. ಅವರ ಊರು-ಕೇರಿ ಕೃತಿ ಕೇವಲ ಆತ್ಮಕಥೆಯಷ್ಟೇ ಆಗಿರದೆ ದಲಿತ ಹೋರಾಟದ ಪರಿಪೂರ್ಣ ಆಕರ ಎಂದು ಅವರು ತಿಳಿಸಿದರು. ಸಮತಾವಾದದ ದಲಿತ ಸಂವೇದನೆಗಳಿಗೆ ಅವರ ಅನುಭವಗಳೇ ಕಾರಣ ಎಂದು ಅವರು ತಿಳಿಸಿದರು.



          ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ, ಬರಹಗಾರ ಎಂ.ನಾ.ಚಂಬಲ್ತಿಮಾರ್ ಅವರು ಮಾತನಾಡಿ, ಅಪ್ಪಟ ಮಾನವ ಪ್ರೀತಿಯ ಮಾನವತಾ ವಾದ ಸಿದ್ದಲಿಂಗಯ್ಯನವರ ಶಕ್ತಿಯಾಗಿತ್ತು. ಮೌಲ್ಯಗಳಿಂದ ಬದಕಲು ಹೇಳಿದ ಅವರು, ಕೊನೆಯವರೆಗೂ ಅದೇ ಮೌಲ್ಯಗಳ ಗಡಿಗಳಲ್ಲಿ ಅಚ್ಚರಿಯೆನ್ನುವಂತೆ ಬದುಕಿದವರು. ಆದರೆ ಸಮಾಜ ಅವರನ್ನು ಕೇವಲ ಕ್ರಾಂತಿಯ ಭೀಕರ ವ್ಯಕ್ತಿಯಂತೆ ಸೃಷ್ಟಿಸಿದ್ದು ದುರಂತ ಎಂದು ಗುಣಗಾನ ಮಾಡಿದರು.



              ಬಾಲಕೃಷ್ಣ ಶೆಟ್ಟಿಗಾರ್, ಜಯಂತ ಮಾಸ್ತರ್, ಹರೀಶ್ ಶೆಟ್ಟಿ, ವಾಸು ಬಾಯಾರ್, ವಾಸುದೇವ ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು.  ಕೇರಳ ತುಳು ಅಕಾಡೆಮಿ ಅಧ್ಯಕ್ಷ, ಅಪೂರ್ವ ಕಲಾವಿದರು ಸಂಸ್ಥೆಯ ನಿರ್ದೇಶಕ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡುಇ, ಸಿದ್ದಲಿಂಗಯ್ಯ ಅವರೊಂದಿಗಿನ ಸುಧೀರ್ಘ ಅವಧಿಯ ಒಡನಾಟವನ್ನು ಮೆಲುಕುಹಾಕಿ ಸ್ವಾಗತಿಸಿದರು. ವಿಜಯಕುಮಾರ್ ಪಾವಳ ವಂದಿಸಿದರು. ಪತ್ರಕರ್ತ, ಯಕ್ಷಗಾನ ಅರ್ಥದಾರಿ ವೀ.ಜಿ.ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries