ಕೊಚ್ಚಿ: ಕೊಚ್ಚಿ ಬಂದರಿನ ಸಮೀಪ ಸಮುದ್ರದಲ್ಲಿ ಹೊಸ ದ್ವೀಪವೊಂದು ರೂಪುಗೊಳ್ಳುತ್ತಿದೆ ಎಂದು ವರದಿಯಾಗಿದೆ. ಕೊಚ್ಚಿ ಬಂದರು ದ್ವಾರದಿಂದ ಪಶ್ಚಿಮಕ್ಕೆ 7 ಕಿ.ಮೀ ದೂರದಲ್ಲಿರುವ ಮರಳು ದಿಬ್ಬ 21 ಅಡಿ ಆಳದಿಂದ ಏರಿರುವುದು ಕಂಡುಬಂದಿದೆ. 2018 ರ ಡಿಸೆಂಬರ್‍ನಲ್ಲಿ ಓಕಿ ಚಂಡಮಾರುತದ ಬಳಿಕ ಹೊಸ ಮರಳು ದಿಬ್ಬದ ರಚನೆಯು ಮೀನುಗಾರರ ಗಮನಕ್ಕೆ ಬಂದಿತು.
ಕುಂಬಳಂಗಿ ತೀರಕ್ಕಿಂತ ಐದು ಪಟ್ಟು ಗಾತ್ರದ ಮರಳು ದಿಬ್ಬವು ಎಂಟು ಕಿಲೋಮೀಟರ್ ಉದ್ದ ಮತ್ತು ಮೂರೂವರೆ ಕಿಲೋಮೀಟರ್ ಅಗಲವಿದೆ. ಸಾಮಾನ್ಯವಾಗಿ ಈ ರೀತಿ ಹೊರಹೊಮ್ಮುವ ಈ ಮರಳು ದಿಬ್ಬಗಳು ಸಾಮಾನ್ಯವಾಗಿ ಕೆಲವು ದಿನಗಳ ನಂತರ ತಾವಾಗಿಯೇ ಕಣ್ಮರೆಯಾಗುತ್ತವೆ.
ಆದರೆ ಇಲ್ಲಿ ಈರೀತಿಯಾಗಿಲ್ಲ. ಇದೇ ವೇಳೆ, ಚೆಲ್ಲಾನಾದಿಂದ ಚಂಡಮಾರುತದ ವೇಳೆ ಕೊಚ್ಚಿ ಒಯ್ಯಲ್ಪಟ್ಟ ಮಣ್ಣು ಮರಳು ದಿಬ್ಬಗಳಲ್ಲಿ ಸಂಗ್ರಹವಾಗಿದೆ ಎಂದು ಕರಾವಳಿ ಜನರು ಹೇಳಿಕೊಂಡಿದ್ದಾರೆ. ಕೇರಳ ಮೀನುಗಾರಿಕೆ ಮತ್ತು ಸಾಗರಶಾಸ್ತ್ರ ವಿಶ್ವವಿದ್ಯಾಲಯವು ಅನೇಕ ವಾದಗಳನ್ನು ಎತ್ತಿದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸಲು ನಿರ್ಧರಿಸಿದೆ. ವರದಿಯನ್ನು ಒಂದು ತಿಂಗಳೊಳಗೆ ಮೀನುಗಾರಿಕೆ ಇಲಾಖೆಗೆ ಸಲ್ಲಿಸಲಾಗುವುದು. ಮರಳು ನಿಕ್ಷೇಪಗಳ ಕೈಗಾರಿಕಾ ಸಾಮಥ್ರ್ಯವನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನೂ ನೇಮಿಸಲಾಗುವುದು.