HEALTH TIPS

ಕೋವಿಡ್ ನಿಂದ ಮೃತಪಟ್ಟವರ ಆಶ್ರಿತರಿಗೆ ಸಾಲ ಯೋಜನೆ: ಅರ್ಜಿ ಆಹ್ವಾನ

              ಕಾಸರಗೋಡು: ಒ.ಬಿ.ಸಿ. ಜನಾಂಗಕ್ಕೆ ಸೇರಿದ ಕುಟುಂಬಗಳ ಪ್ರಧಾನ ಆದಾಯದಾತರಾಗಿದ್ದು, 60 ವರ್ಷ ಪ್ರಾಯಕ್ಕಿಂತ ಕೆಳಗಿನ ವಯೋಮಾನದ ವ್ಯಕ್ತಿ ಮೃತಪಟ್ಟಿದ್ದರೆ, ಅವರ ಆಶ್ರಿತರಿಗಾಗಿ ಕೇರಳ ರಾಜ್ಯ ಹಿಂದುಳಿದ ಜನಾಂಗ ಅಭಿವೃದ್ಧಿ ನಿಗಮ ವತಿಯಿಂದ ಸಾಲ ಸೌಲಭ್ಯವಿದೆ. ಈ ಸಂಬಂಧ ಅರ್ಜಿ ಕೋರಲಾಗಿದೆ. ಕೇಂದ್ರ ಸಮಾಜ ನೀತಿ, ಪ್ರಬಲೀಕರಣ ಇಲಾಖೆ ರಚಿಸಿರುವ ಸಾಲ ಯೋಜನೆ ಪ್ರಕಾರ 3 ಲಕ್ಷ ರೂ. ಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಮಂದಿಗೆ 5 ಲಕ್ಷ ರೂ.ನ ಭಂಡವಾಳದ ಸ್ವ ಉದ್ಯೋಗ ಆರಂಭಿಸಲು ಅಗತ್ಯದ ಪೂರ್ಣ ಮೊಬಲಗನ್ನು ಒದಗಿಸಲಾಗುವುದು. ಶೇ 6 ವಾರ್ಷಿಕ ಬಡ್ಡಿ ದರವಿದ್ದು, ಯೋಜನೆಯ ಭಂಡವಳಕ್ಕೆ ಶೇ 80 ಮೊಬಲಗು, ಉಳಿದ ಶೇ 20 ಸಬ್ಸಿಡಿಯಾಗಿರುವುದು. 5 ವರ್ಷಗಳಲ್ಲಿ ಸಾಲ ಮರುಪಾವತಿಸಬೇಕು. ಆಸಕ್ತರು ಜೂ.28 ರ ಮುಂಚಿತವಾಗಿ  www.ksbcdc.com  ಎಂಬ ನಿಗಮದ ವೆಬ್ ಸೈಟ್ ನಲ್ಲಿ ನೋಂದಣಿ ನಡೆಸಬೇಕು. ಹೆಚ್ಚುವರಿ ಮಾಹಿತಿ ವೆಬ್ ಸೈಟ್ ನಲ್ಲಿ ಲಭ್ಯವಿದೆ.   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries