HEALTH TIPS

ಯುವತಿಗಾಗಿ ಎರಡು ರಾಜ್ಯಗಳ ಪೊಲೀಸರ ನಡುವೆ ಪೈಪೋಟಿ: ಕೊನೆಗೆ ನ್ಯಾಯಾಲಯದಲ್ಲಿ ಗೆಲುವು ದಕ್ಕಿದ್ದು ಯಾರಿಗೆ?

         ಭುವನೇಶ್ವರ್​: ಪ್ರೀತಿಗೆ ಯಾವುದೇ ಗಡಿಯೂ ಇಲ್ಲ ಹಾಗೂ ಮಿತಿಯಿಲ್ಲ ಎಂಬ ಮಾತು ಉತ್ತರ ಪ್ರದೇಶದ ಗೋರಖ್​ಪುರದ ಯುವತಿ ಆಕಾಂಕ್ಷ ಸಿಂಗ್​ ಮತ್ತು ಒಡಿಶಾ ರಾಜಧಾನಿ ಭುವನೇಶ್ವರದ ಸುಂದರ್​ಪದ ಏರಿಯಾದ ಪೃಥ್ವಿರಾಜ್​ ಪಂಡಾ ಪ್ರಕರಣದಲ್ಲಿ ಸಾಬೀತಾಗಿದೆ.

        ಮಗಳನ್ನು ಅಪಹರಿಸಲಾಗಿದೆ ಎಂದು ಆಂಕಾಕ್ಷ ತಂದೆ ಪೃಥ್ವಿರಾಜ್​ ವಿರುದ್ಧ ಗೋರಖ್​ಪುರದಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಪೃಥ್ವಿರಾಜ್​ನನ್ನು ಬಂಧಿಸಿ, ಆಕಾಂಕ್ಷಳನ್ನು ಮರಳಿ ಕರೆತರುವಲ್ಲಿ ಗೋರಖ್​ಪುರ ಪೊಲೀಸರು ಭುವನೇಶ್ವರಕ್ಕೆ ತೆರಳಿದ್ದರು. ಆದರೆ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಗೋರಖ್​ಪುರ ಪೊಲೀಸರು ಉತ್ತರ ಪ್ರದೇಶಕ್ಕೆ ಹಿಂತಿರುಗಿದ್ದು, ಆಕಾಂಕ್ಷಾ ಪ್ರೀತಿಗೆ ಜಯ ದೊರಕಿದೆ.

ಗೋರಖ್​ಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗ ಪೃಥ್ವಿರಾಜ್​ ಮತ್ತು ಆಕಾಂಕ್ಷಾಗೂ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು. ಹೀಗಿರುವಾಗ ಜೂನ್​ 16ರಂದು ಆಕಾಂಕ್ಷಾ ಪ್ರಿಯಕರನನ್ನು ಭೇಟಿ ಮಾಡಲು ನವದೆಹಲಿ ಮಾರ್ಗವಾಗಿ ಭುವನೇಶ್ವರಕ್ಕೆ ತೆರಳಿದ್ದಳು. ಅಲ್ಲದೆ, ಆತನನ್ನು ಮದುವೆಯಾಗಿ ಅಲ್ಲಿಯೇ ಉಳಿದುಕೊಂಡಿದ್ದಳು.

        ಇದೇ ವೇಳೆ ಆಕಾಂಕ್ಷಾ ತಂದೆ ಗೋರಖ್​ಪುರ ಠಾಣೆಯಲ್ಲಿ ಪೃಥ್ವಿರಾಜ್​, ನನ್ನ ಮಗಳನ್ನು ಅಪಹರಿಸಿದ್ದಾನೆಂದು ಆರೋಪಿಸಿ ದೂರು ದಾಖಲಿಸಿದ್ದರು. ಇದಾದ ಬಳಿಕ ಆಕಾಂಕ್ಷಳನ್ನು ಮರಳಿ ಕರೆತರಲು ಪೊಲೀಸರು ಭುವನೇಶ್ವರಕ್ಕೆ ತೆರಳಿದ್ದರು. ಈ ವಿಚಾರ ತಿಳಿದು ಆಕಾಂಕ್ಷಾ ಏರ್​ಫೀಲ್ಡ್​ ಪೊಲೀಸ್​ ಠಾಣೆಯಲ್ಲಿ ನೆರವು ಕೋರಿ ಅರ್ಜಿ ಸಲ್ಲಿಸಿದ್ದಳು. ಇದು ಗೋರಖ್​ಪುರ ಮತ್ತು ಭುವನೇಶ್ವರ್​ ಪೊಲೀಸರ ನಡುವಿನ ಕಿತ್ತಾಟಕ್ಕೆ ಕಾರಣವಾಗಿತ್ತು.

       ಆಕೆ ಅಪ್ರಾಪ್ತೆಯಲ್ಲ ಯುವತಿ ಎನ್ನುವುದಕ್ಕೆ ದಾಖಲೆ ತೋರಿದ ಭುವನೇಶ್ವರ ಪೊಲೀಸರು ಆಕೆಯನ್ನು ಗೋರಖ್​ಪುರ ಪೊಲೀಸರಿಗೆ ಹಸ್ತಾಂತರಿಸಲು ನಿರಾಕರಿಸಿದರು. ಆದರೆ, ಇಷ್ಟಕ್ಕೆ ಸುಮ್ಮನಾಗದ ಗೋರಖ್​ಪರ ಪೊಲೀಸರು ಆಕೆಯನ್ನು ಕರೆದೊಯ್ಯಲೇ ಬೇಕೆಂಬ ನಿರ್ಧಾರಕ್ಕೆ ಬಂದಿದ್ದರು. ಏನೇ ಹೇಳಿದರೂ ಕೇಳಲು ತಯಾರಲಿಲ್ಲ. ಯುವತಿ ಜತೆಯಲ್ಲಿ ಕಳುಹಿಸಿ ಎಂದು ಹಠ ಹಿಡಿದಿದ್ದರು. ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಸೆಕ್ಷನ್​ 164ರ ಅಡಿಯಲ್ಲಿ ಆಕಾಂಕ್ಷಾ ನ್ಯಾಯಾಧೀಶರ ಮುಂದೆ ತನ್ನ ನಿರ್ಧಾರವನ್ನು ತಿಳಿಸಿದ್ದಳು.

          ಬಳಿಕ ತೀರ್ಪು ನೀಡಿದ ನ್ಯಾಯಾಲಯ ಯುವತಿಯ ಹೇಳಿಕೆ ಮತ್ತು ಆಕೆಯ ದಾಖಲೆಗಳನ್ನು ಪರಿಶೀಲಿಸಿ ಆಕೆಯ ಪರವಾಗಿಯೇ ತೀರ್ಪು ನೀಡಿತು. ಆಕಾಂಕ್ಷಾ ವಯಸ್ಕಳಾಗಿರುವುದರಿಂದ, ಅವಳು ಎಲ್ಲಿ ಬೇಕಾದರೂ ಇರಬಹುದಾಗಿದೆ ಎನ್ನುತ್ತಾ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಗೋರಖ್​ಪುರ ಪೊಲೀಸರು ವಾಪಾಸ್ಸಾದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries