ಕಾಸರಗೋಡು: ಕಿನ್ನಿಂಗಾರು ಯದುಕುಲ ಸಂಕೀರ್ಣದಲ್ಲಿ ಸ್ಥಾಪನೆಗೊಂಡಿರುವ ಬೆಳ್ಳೂರು ಹಾಲು ಉತ್ಪಾದಕರ ಸಂಘದ ಉದ್ಘಾಟನೆಗೊಂಡಿದೆ.
ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಬೆಳ್ಳೂರು ಗ್ರಾಮ ಪಂಚಾಯತ್ ಸದಸ್ಯ ಎಂ.ಶ್ರೀಧರ ಅಧ್ಯಕ್ಷತೆ ವಹಿಸಿದ್ದರು. ಹಾಲು ಸಂಗ್ರಹ ಪ್ರಕ್ರಿಯೆಗೆ ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯೂ ಚಾಲನೆ ನೀಡಿದರು. ಬೆಳ್ಳೂರು ಗ್ರಾಮ ಪಂಚಾಯತ್ ಸದಸ್ಯರಾದ ಬಿ.ಎನ್.ಗೀತಾ, ದುರ್ಗಾದೇವಿ, ಕಾರಡ್ಕ ಬ್ಲೋಕ್ ಡಿ.ಇ.ಒ. ಅರವಿಂದ್ ಬಾಲನ್, ಡಾ.ಬಿನು ವರ್ಗೀಸ್, ಕುಳಪಾರೆ ಹಾಲು ಉತ್ಪಾದಕರ ಸಂಘ ಅಧ್ಯಕ್ಷ ಎ.ಎ.ಮನೋಹರ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಹಾಲು ಸಹಕಾರಿ ಸಂಘದ ಮಂಡಳಿ ಸದಸ್ಯ ಕಲ್ಲಗ ಚಂದ್ರಶೇಖರ ರಾವ್ ಸ್ವಾಗತಿಸಿದರು. ಸಹಕಾರಿ ಸಂಘ ಅಧ್ಯಕ್ಷ ರಾಜಗೋಪಾಲ ಕೈಪಂಗಳ ವರದಿ ವಾಚಿಸಿದರು. ಕಾರ್ಯದರ್ಶಿ ಬಿ.ಸುಜಯಕುಮಾರಿ ವಂದಿಸಿದರು.
17 ವರ್ಷಗಳ ಹಿಂದೆ ಈ ಸಂಘ ಆರಂಭಗೊಂಡಿತ್ತು. ನೂತನ ಕಚೇರಿ ವ್ಯಾಪ್ತಿಯಲ್ಲಿ 100 ಮಂದಿ ಕೃಷಿಕರ ಸದಸ್ಯತನ ನಿರೀಕ್ಷಿಸುತ್ತಿರುವುದಾಗಿ ಮತ್ತು ವರ್ಷವೊಂದರಲ್ಲಿ ಒಂದು ಸಾವಿರ ಲೀಟರ್ ಹಾಲು ಅಳೆಯುವ ನಿರೀಕ್ಷೆಯಿದೆ ಎಂದು ಬೆಳ್ಳೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಜಗೋಪಾಲ ಕೈಪಂಗಳ ತಿಳಿಸಿದರು. ಬ್ಲೋಕ್ ರೂಂ, ಕಚೇರಿ, ಪರ್ಚೇಸ್ ಸೆಂಟರ್ ಇತ್ಯಾದಿಗಳು ನೂತನ ಕಟ್ಟಡದಲ್ಲಿವೆ.