ಕಾಸರಗೋಡು: ಒಂದು ಸಾವಿರ ಕೋಟಿಗೂ ಮಿಕ್ಕಿ ಭ್ರಷ್ಟಾಚಾರ ನಡೆದಿರುವ ಅರಣ್ಯ ಲೂಟಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಚಿನ್ನಕಳ್ಳಸಾಗಾಟಗಾರರನ್ನು ಪೋಷಿಸುವ ಸರ್ಕಾರ ಹಾಗೂ ಸಿಪಿಎಂ ತನ್ನ ಧೋರಣೆ ಕೈಬಿಡಬೇಕು, ಮಹಿಳಾ ದೌರ್ಜನ್ಯ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂದು(ಜೂನ್ 30) ಕಾಸರಗೋಡು ಜಿಲ್ಲೆಯ ಎಲ್ಲ ಪಂಚಾಯಿತಿ ಹಾಗೂ ನಗರಸಭೆ ವ್ಯಾಪ್ತಿಯ 200ಕೇಂದ್ರಗಳಲ್ಲಿ ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಪಾದಯತ್ರೆ ನಡೆಯಲಿದೆ.
ಸಮಾರಂಬದಲ್ಲಿ ಜಿಲ್ಲಾ, ರಾಜ್ಯ ಮಟ್ಟದ ನೇತಾರರು ಭಾಗವಹಿಸುವರು. ಕಾಸರಗೋಡು ನಗರಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಪಾದಯಾತ್ರೆ ಉದ್ಘಾಟಿಸುವರು.