ಹಾಯ್.........ಸ್ನೇಹಿತ ಓದುಗರೆ, ಬಂದೇ ಬಿಟ್ತಲ್ಲ...........ಮಳೆಗಾಲ. ಕಳೆದ ವಾರವಷ್ಟೇ ಬಿಸಿಬಿಸಿ ಇದ್ದ ವಾತಾವರಣ ಕಳೆದ ಎರಡು-ಮೂರು ದಿನಗಳಿಂದ ತಂಪಾಗಿ ಆಹ್ಲಾದಕರವಾಗಿದೆ. ಎಲ್ಲರೂ ಒಂದು ಬಿಸಿ ಚಹಾ ಸಿಕ್ಕಿದ್ರೆ ಸಾಕು ಎಂದೇ ಭಾವಿಸ್ತಾರೆ...ಅಲ್ವೇ.
ನಿಮಗೊತ್ತ.....ಚಹಾ ಕೇವಲ ಒಂದು ಪಾನೀಯ ಅಷ್ಟೇ ಅಲ್ಲ. ಅದೊಂದು ಸಂಗಾತಿ ಕೂಡಾ. ತಾಯಿಯಂತೆ, ಪತ್ನಿಯಂತೆ, ಸೋದರಿಯಂತೆ! ಆದರೆ ಕೆಲವೊಮ್ಮೆ....ಸವತಿಯಂತೆಯೂ ಹೌದಂತೆ!
ನನಗೂ ಸಹಿತ ಹೆಚ್ಚಿನವರಿಗೂ ಇರುವ ಸವಾಲೆಂದರೆ ನಿಶ್ಚಿತ ರುಚಿಯ ಚಹಾ ಯಾವಾಗೆಂದರೆ ಸಿಗದಿರುವುದು. ಒಬ್ಬೊಬ್ಬರಿಗೂ ಒಂದೊಂದು ರುಚಿ. ನಮ್ಮ ರುಚಿಯ ಚಹಾ ನಾವೇ ತಯಾರಿಸಿದರೂ ಕೆಲವೊಮ್ಮೆ....ಹೆಚ್ಚೇಕೆ ಯಾವಾಗಲೂ ನಮಗೆ ಸಿಗುವುದು ಕಷ್ಟ ಮಾರಾಯರೆ. ಯಾಕೆಂದರೆ ಅದರ ಹಿಂದೊಂದು ಸಯನ್ಸ್ ಇದೆಯಂತೆ. ಅಂತಹ ಚಾತುರ್ಯ ಕೆಲವರಿಗಷ್ಟೇ ದೊರಕಿರುವ ವರ.
ಇಂದು ನಮ್ಮೊಡನೆ ಮಾತಾಡುವವರು ವಿವಿಧ ಸಮಾರಂಭಗಳಿಗೆಲ್ಲ ಅಡುಗೆ ತಯಾರಿಸುವಲ್ಲಿ ಪರಿಣಿತರಾದವರು. ಅಥವಾ ಆಹಾರೋತ್ಪನ್ನಗಳನ್ನು ತಯಾರಿಸುವಲ್ಲಿ ಪ್ರೊಫೆಶನಲ್ ಸ್ಕಿಲ್ ಇರುವವರು. ಯಾಕೆಂದರೆ ಪ್ರತಿಯೊಂದು ವೃತ್ತಿಯ ವೃತ್ತಿಪರತೆ ಆ ವೃತ್ತಿಯ ಉಚ್ಚ್ರಾಯತೆಗೆ ಕಾರಣವಾಗುತ್ತದೆ. ಅಥವಾ ತಪಸ್ಸಿನಂತೆ ಸಿದ್ದಿಸುತ್ತದೆ.
ಎಣ್ಮಕಜೆ ಗ್ರಾಮ ಪಂಚಾಯತಿಯ ಪಡ್ರೆ ಗ್ರಾಮದ ಶ್ರೀ ಬಾಲಚಂದ್ರ ಭಟ್ ಬೆಲ್ಲ ಅವರು. ಅವರಿಲ್ಲಿ ಚಹಾ ತಯಾರಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ. ವೀಕ್ಷಿಸಿ.