HEALTH TIPS

ಕೋವಿಡ್‌: ಸಂಕಷ್ಟಕ್ಕೆ ಸಿಲುಕಿದ ಮಕ್ಕಳ ಪಾಲನೆಗೆ ಮಾರ್ಗಸೂಚಿ

                ನವದೆಹಲಿ: ಕೋವಿಡ್‌-19ನಿಂದಾಗಿ ತೊಂದರೆಗೆ ಒಳಗಾಗಿರುವ ಮಕ್ಕಳ ರಕ್ಷಣೆ ಹಾಗೂ ಪಾಲನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

            ಮಕ್ಕಳ ಪಾಲನೆ-ರಕ್ಷಣೆಗೆ ಸಂಬಂಧಿಸಿ ರಾಜ್ಯಗಳು, ಜಿಲ್ಲಾಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು, ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹೊಣೆಗಾರಿಕೆಯನ್ನು ನಿಗದಿ ಮಾಡಲಾಗಿದೆ. ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ಮಾರ್ಗಸೂಚಿಗಳಲ್ಲಿ ವಿವರಿಸಲಾಗಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ರಾಮಮೋಹನ್‌ ಮಿಶ್ರಾ ಅವರು ಈ ಸಂಬಂಧ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.

             ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳನ್ನು ರಾಜ್ಯಗಳು ಗುರುತಿಸಬೇಕು. ಪ್ರತಿ ಮಗುವಿನ ವಿವರಗಳನ್ನು ಒಳಗೊಂಡ ಡೇಟಾಬೇಸ್‌ ಸಿದ್ಧಪಡಿಸಬೇಕು. ಮಕ್ಕಳ ನಿರ್ದಿಷ್ಟ ಅಗತ್ಯಗಳನ್ನು ಪಟ್ಟಿ ಮಾಡಬೇಕು ಹಾಗೂ ಈ ವಿವರಗಳನ್ನು 'ಟ್ರ್ಯಾಕ್‌ ಚೈಲ್ಡ್‌' ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದು ಅವರು ಪತ್ರದಲ್ಲಿ ಸೂಚಿಸಿದ್ದಾರೆ.

         ತಂದೆ ಅಥವಾ ತಾಯಿ ಇಲ್ಲವೇ ಇಬ್ಬರೂ ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರೆ, ಆಸ್ಪತ್ರೆಗಳು ಆ ಕುಟುಂಬದ ನಂಬಿಕಸ್ಥ ವ್ಯಕ್ತಿಯೊಬ್ಬರ ವಿವರಗಳನ್ನು ರೋಗಿಗಳಿಂದ ಪಡೆದು, ಅದನ್ನು ದಾಖಲೆಗಳಲ್ಲಿ ನಮೂದಿಸಬೇಕು. ಮಕ್ಕಳನ್ನು ನೋಡಿಕೊಳ್ಳಬೇಕಾದ ಸಂದರ್ಭ ಎದುರಾದಾಗ, ಆ ವ್ಯಕ್ತಿಯನ್ನು ಸಂಪರ್ಕಿಸಲು ಇದರಿಂದ ಅನುಕೂಲವಾಗುವುದು ಎಂದು ಮಿಶ್ರಾ ತಿಳಿಸಿದರು.

           ತೊಂದರೆಗೆ ಒಳಗಾದ ಮಕ್ಕಳಿಗಾಗಿ 'ಮಕ್ಕಳ ಆರೈಕೆ ಕೇಂದ್ರ'ಗಳನ್ನು (ಸಿಸಿಐ) ಆರಂಭಿಸಬೇಕು. ಒಂದು ವೇಳೆ ಮಕ್ಕಳಿಗೂ ಕೋವಿಡ್‌-19 ತಗುಲಿದರೆ, ಅಂಥವರಿಗಾಗಿ ಸಿಸಿಐಗಳಲ್ಲೇ ಪ್ರತ್ಯೇಕ ವಾಸಕ್ಕೆ ಸೌಲಭ್ಯ ಒದಗಿಸಬೇಕು. ಮಕ್ಕಳ ಮನೋವೈದ್ಯರು ಅಥವಾ ಆಪ್ತಸಮಾಲೋಚಕರು ಈ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಮಕ್ಕಳೊಂದಿಗೆ ಸಂವಾದ ನಡೆಸಿ, ಅವರಲ್ಲಿ ಸ್ಥೈರ್ಯ ತುಂಬಬೇಕು ಎಂದೂ ಸೂಚಿಸಲಾಗಿದೆ.

         ದೇಶದಲ್ಲಿ 9,346 ಮಕ್ಕಳು ತಮ್ಮ ಪಾಲಕರ ಪೈಕಿ ಒಬ್ಬರನ್ನು ಕೋವಿಡ್‌ನಿಂದಾಗಿ ಕಳೆದುಕೊಂಡಿದ್ದಾರೆ. 1,700 ಮಕ್ಕಳು ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries