ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ 2020-21ನೇ ಆರ್ಥಿಕ ವರ್ಷದ ಯೋಜನೆಯ ಸಾಮಾನ್ಯ ವಿಭಾಗದ ಫಲಾನುಭವಿಗಳಿಗೆ ಮಂಚ ವಿತರಣೆ ಗುರುವಾರ ನಡೆಯಿತು.
ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ವಿವಿಧ ವಾರ್ಡ್ ಗೊಳಪಟ್ಟು ಪಂಚಾಯತಿ ಮಟ್ಟದಲ್ಲಿ ಸುಮಾರು 88ರಷ್ಟು ಮಂಚಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯತು ಉಪಾಧ್ಯಕ್ಷೆ ಡಾ.ಝಹನಾಸ್ ಹಂಸಾರ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಜಯಶ್ರೀ ಎ.ಕುಲಾಲ್, ಸೌದಭಿ ಹನೀಫ್,ಪಂ.ಸಹಾಯಕ ಕಾರ್ಯದರ್ಶಿ ಸಜಿ,ಕುಟುಂಬಶ್ರೀ ಐಸಿಡಿಎಸ್ ಮೇಲ್ವಿಚಾರಕಿ ಸುನೀತಾ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.