ಕುಂಬಳೆ: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡಿನ ಕನ್ನಡ ವಿಭಾಗದ ಆಯೋಗದಲ್ಲಿ ಸರಣಿ ಉಪನ್ಯಾಸ 'ಸಾಹಿತ್ಯಯಾನ' ದ ನಾಲ್ಕನೇ ಉಪನ್ಯಾಸ ಕಾರ್ಯಕ್ರಮ ಇಂದು (ಜೂ. 19) ಸಂಜೆ 5 ಗಂಟೆಗೆ ಗೂಗಲ್ ಮೀಟ್ ಮೂಲಕ ನಡೆಯಲಿದೆ. 'ಕನ್ನಡ ಚಲನಚಿತ್ರ ಸಾಹಿತ್ಯ' ಎನ್ನುವ ವಿಷಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಅವರು ಉಪನ್ಯಾಸ ನೀಡಲಿದ್ದಾರೆ. ಕೇಂದ್ರೀಯ ವಿ.ವಿ ಯ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ. ಮೋಹನ್ ಎ.ಕೆ ಪ್ರಾಸ್ತಾವಿಕವಾಗಿ ಮಾತನಾಡುವರು.
ಕನ್ನಡ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮ ಸಂಯೋಜಕ, ಅತಿಥಿ ಸಹಾಯಕ ಪ್ರಾಧ್ಯಾಪಕ ಮಹೇಶ್ ಎಂ ವಿನಂತಿಸಿಕೊಂಡಿದ್ದಾರೆ. ಗೂಗಲ್ ಮೀಟ್ ವಿಳಾಸ: https://meet.google.com/-xnx-xkop-oxo