ತಿರುವನಂತಪುರ: ಉಗ್ರಗಾಮಿ ಸಂಘಟನೆ ಐಎಸ್‍ಗೆ ಸೇರ್ಪಡೆಯಾದ ಮಲಯಾಳಿ ಮಹಿಳೆಯರ ಪ್ರಕರಣಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಫಾತಿಮಾ, ಮೆರಿನ್ ಜೋಸೆಫ್, ಸೋನಿಯಾ ಸೆಬಾಸ್ಟಿಯನ್ ಮತ್ತು ರಫಿಲಾ ಅವರು ಅಫಘಾನ್ ಜೈಲಿನಲ್ಲಿದ್ದು ಅವರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿರುವರು.
ಐಎಸ್‍ಗೆ ಸೇರ್ಪಡೆಯಾದ ಮಹಿಳೆಯರನ್ನು ವಾಪಾಸು ಕಳುಹಿಸುವ ಅಫಘಾನ್ ಸರ್ಕಾರದ ಪ್ರಸ್ತಾಪವನ್ನು ಭಾರತ ತಿರಸ್ಕರಿಸಿರುವ ಬಗ್ಗೆ ರಾಜ್ಯ ಸರ್ಕಾರದ ನಿಲುವಿನ ಪ್ರಶ್ನೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಈ ಬಗ್ಗೆ ಕ್ರಮ ಕೈಗೊಳ್ಳುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು ಎಂದು ಸಿಎಂ ಹೇಳಿದರು. ಪ್ರಕರಣ ದೇಶಕ್ಕೆ ಸಂಬಂಧಿಸಿದ್ದಾಗಿದೆ. ಕೇಂದ್ರದ ನಿಲುವನ್ನೇ ರಾಜ್ಯವೂ ತಳೆಯಬೇಕಾದುದು ಧರ್ಮವಾಗಿದೆ. ಸಮಸ್ಯೆಗಳು ಯಾವುವು ಎಂಬುದರ ಕುರಿತು ನಾವು ಹೆಚ್ಚು ಅರ್ಥಮಾಡಿಕೊಳ್ಳಬೇಕು. ಇದನ್ನು ಹೇಳಬೇಕಾದವರು ಅಲ್ಲಿ ಜೈಲಿನಲ್ಲಿದ್ದಾರೆ. ಅವರು ಇಲ್ಲಿಗೆ ಬರಲು ಸಿದ್ಧರಿದ್ದಾರೆಯೇ ಮತ್ತು ಅವರ ಕುಟುಂಬದ ನಿಲುವುಗಳೇನು ಎಂಬುದನ್ನು ತಿಳಿದುಕೊಳ್ಳಬೇಕು. ಹೀಗಾಗಿ ಈ ವಿಷಯದಲ್ಲಿ ಸಾಮಾನ್ಯವಾಗಿ ರಾಜ್ಯ ಸರ್ಕಾರ ಏನನ್ನೂ ಹೇಳಲಾಗದು. ರಾಜ್ಯ ಸರ್ಕಾರಕ್ಕೂ ಇದಕ್ಕೂ ವಿಶೇಷ ಅ|ಧಿಕಾರ ಇರುವುದಿಲ್ಲ. ಕ್ರಮ ಕೈಗೊಳ್ಳುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು. ಈ ಎಲ್ಲ ವಿಷಯಗಳನ್ನು ಪರಿಶೀಲಿಸಿದ ನಂತರ ಕೇಂದ್ರ ಸರ್ಕಾರ ಈ ಬಗ್ಗೆ ನಿಲುವು ತೆಗೆದುಕೊಳ್ಳುತ್ತದೆ 'ಎಂದು ಮುಖ್ಯಮಂತ್ರಿ ಹೇಳಿದರು.
ಐಎಸ್ ಜೊತೆ ಸಂರ್ಕದ ಹಿನ್ನೆಲೆಯಲ್ಲಿ ಅಪಘಾನ್ ಜೈಲಲ್ಲಿರುವ ನಿಮಿಷಾ ಫಾತಿಮಾಳನ್ನು ಮತ್ತೆ ಭಾರತಕ್ಕೆ ಕರೆತರಲು ಮುಖ್ಯಮಂತ್ರಿಯವರ ಸಹಾಯ ಪಡೆಯುವುದಾಗಿ ನಿಮಿಷಾ ಪಾತಿಮಾಳ ತಾಯಿ ಬಿಂದು ಹೇಳಿದ್ದರು. ಈ ಹಿನ್ನೆಲೆಯ ವರದಿಯ ಭಾಗವಾಗಿ ಮುಖ್ಯಮಂತ್ರಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.