ಕೋಝಿಕ್ಕೋಡ್: ಕೋವಿಡ್ ಬಳಿಕ ಹರಡುತ್ತಿರುವ ಕಪ್ಪು ಶಿಲೀಂಧ್ರ ರೋಗದ ಬಗೆಗೆ ನಕಲಿ ಸುದ್ದಿಗಳನ್ನು ಹರಡುತ್ತಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಕೋಝಿಕ್ಕೋಡ್ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. 'ಈರುಳ್ಳಿಯಲ್ಲಿರುವ ಶಿಲೀಂಧ್ರವು ಕಪ್ಪು ಶಿಲೀಂಧ್ರಕ್ಕೆ ಕಾರಣವಾಗಬಹುದು' ಎಂಬ ಅಪಪ್ರಚಾರದ ವಿರುದ್ಧ ಜಿಲ್ಲಾಧಿಕಾರಿ ಈ ಎಚ್ಚರಿಕೆ ನೀಡಿದ್ದಾರೆ. ನಕಲಿ ಸುದ್ದಿ ಹರಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ದಿನೇಶ್ ಪೆÇೀತೆನ್ ನಿರ್ದೇಶನದ 'ಜೋಜಿ' ಚಿತ್ರದ ಸಂಭಾಷಣೆಯನ್ನು ನಕಲು ಮಾಡದಂತೆ ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
"ಕೋವಿಡ್ ಸಂಕಷ್ಟ ಕಾಲದಲ್ಲೂ ಜನರನ್ನು ಹೆದರಿಸುವಂತಹ ನಕಲಿ ಸುದ್ದಿಗಳು ಹರಿದಾಡುತ್ತಿರುವುದು ಕಳವಳಕಾರಿ. ಅಂತಹ ಸುದ್ದಿಗಳನ್ನು ಹುಟ್ಟು ಹಾಕುವ, ಹರಡುವವರ ಮೇಲೆ ಕಾನೂನುಬದ್ಧವಾಗಿ ಕ್ರಮ ಜರುಗಿಸಲಾಗುತ್ತದೆ.
ನವ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಕ್ಲಬ್ ಹೌಸ್ ಸೇರಿದಂತೆ ಕಪ್ಪು ಶಿಲೀಂಧ್ರದ ಬಗ್ಗೆ ನಕಲಿ ಸುದ್ದಿ ಹರಡುತ್ತಿದೆ ಎಂದು ಜಿಲ್ಲಾಧಿಕಾರಿ ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಎಚ್ಚರಿಕೆ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಬೆಂಬಲವನ್ನು ಪಡೆಯುತ್ತಿದೆ.